ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತವನ್ನು ತಲ್ಲಣಗೊಳಿಸಲು ಯತ್ನಿಸಿದ ಹಿಂಡನ್‌ಬರ್ಗ್‌ಜೊತೆ ಕಾಂಗ್ರೆಸ್‌ಕೈ ಜೋಡಿಸಿತ್ತು ಎಂಬುದಕ್ಕೆ ಈಗ ಮತ್ತೊಂದು ಸಾಕ್ಷಿ ಲಭಿಸಿದೆ ಎಂದು ಬಿಜೆಪಿ ತಿಳಿಸಿದೆ.
ಹಿಂಡನ್‌ಬರ್ಗ್‌ವರದಿಯನ್ನು ಹಿಡಿದುಕೊಂಡು ಸಂಸತ್‌ಕಲಾಪವನ್ನು ಬಲಿ ತೆಗೆದುಕೊಂಡಿದ್ದ ಕಾಂಗ್ರೆಸ್, ದೇಶವ್ಯಾಪಿ ಪ್ರತಿಭಟನೆ ನಡೆಸಿತ್ತು. ಅಂತಹ ಹಿಂಡನ್‌ಬರ್ಗ್‌ಇಂದು ನಾಮಾವಶೇಷವಾಗಿದೆ. ಆ ಪಿತೂರಿ ಹಿಂದೆ ಇದ್ದದ್ದೇ ಕೈ ನಾಯಕ ರಾಹುಲ್ ಗಾಂಧಿ.
ಅದಾನಿ ಗ್ರೂಪ್ ವಿರುದ್ಧ ಹಿಂಡನ್ ಬರ್ಗ್ ವರದಿ ಪ್ರಕಟಿಸುವಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೈವಾಡವಿರುವ ಮಾಹಿತಿಯನ್ನು ಇಸ್ರೇಲ್ ಗುಪ್ತಚರ ಸಂಸ್ಥೆ ಮೊಸಾದ್ ಕಲೆ ಹಾಕಿರುವುದಾಗಿ ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್‌ಇಂಡಿಯಾ ವರದಿ ಮಾಡಿದೆ.
ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸಿ ದೇಶವನ್ನು ಅಸ್ಥಿರಗೊಳಿಸುವ ಕಾಂಗ್ರೆಸ್ ಷಡ್ಯಂತ್ರವನ್ನು ದೇಶದ ಜನತೆ ಎಂದಿಗೂ ಕ್ಷಮಿಸಲಾರರು ಎಂದು ಬಿಜೆಪಿ ಎಚ್ಚರಿಸಿದೆ.