ಪರಿಶಿಷ್ಟರ ಜಮೀನು ಕಬಳಿಸುವಾಗ ಆತ್ಮಸಾಕ್ಷಿ ಅಜ್ಞಾತವಾಸದಲ್ಲಿತ್ತೇ ಸಿದ್ದರಾಮಯ್ಯ ಅವರೇ ಉತ್ತರಿಸಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
 ಸತ್ತ ಲಿಂಗ ಅಲಿಯಾಸ್ ಜವರನ 3 ಎಕರೆ 16 ಗುಂಟೆ ಜಮೀನನ್ನು ಸುಳ್ಳು ದಾಖಲೆ ಸೃಷ್ಟಿಸಿ ಸ್ವಾಧೀನ ಪಡಿಸಿಕೊಳ್ಳುವ ನಿಮ್ಮ ಆತ್ಮಸಾಕ್ಷಿ ಸತ್ತು ಹೋಗಿತ್ತೇ” ? ಎಂದು ಜೆಡಿಎಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ ಪ್ರಶ್ನಿಸಿದೆ.

*ಪರಿಶಿಷ್ಟರ ಜಮೀನು ಕಬಳಿಸುವಾಗ ನಿಮ್ಮ ಆತ್ಮಸಾಕ್ಷಿ ಅಜ್ಞಾತವಾಸದಲ್ಲಿತ್ತೇ ? ಎಂದು ಕಟುವಾಗಿ ಪ್ರಶ್ನಿಸಿದೆ.
 *2013ರ ಚುನಾವಣಾ ಅಫಿಡವಿಟ್ ನಲ್ಲಿ ನಿಮ್ಮ ಪತ್ನಿ ಬಳಿಯಿರುವ 3 ಎಕರೆ16 ಗುಂಟೆ ಜಮೀನಿನ ಮಾಹಿತಿ ಉಲ್ಲೇಖಿಸದೆ ಮುಚ್ಚಿಟ್ಟು ಚುನಾವಣಾ ಆಯೋಗಕ್ಕೆ ಸುಳ್ಳು ಹೇಳುವಾಗ ತಮ್ಮ ಆತ್ಮಸಾಕ್ಷಿ ಕುರುಡಾಗಿತ್ತೇ?

*ಮುಡಾದಲ್ಲಿ ಅಕ್ರಮವಾಗಿ ಪಡೆದ 14 ಸೇಟುಗಳಿಗೆ 62 ಕೋಟಿ ಕೇಳಲು ನಿಮ್ಮ ಆತ್ಮಸಾಕ್ಷಿ ಅನುಮತಿ ಕೊಟ್ಟಿತ್ತೇ ? ಎಂದು ಪರಿಪರಿಯಾಗಿ ಸಿದ್ದರಾಮಯ್ಯ ಅವರನ್ನ ಜೆಡಿಎಸ್ ತೀವ್ರವಾಗಿ ಪ್ರಶ್ನಿಸಿದೆ.

*ಮುಡಾ ಹಗರಣದಲ್ಲಿ ಎ1 ಆರೋಪಿಯಾದ ಮೇಲೆ 14 ಸೈಟ್ ಸರೆಂಡರ್ ಮಾಡಲು ನಿಮ್ಮ ಆತ್ಮಸಾಕ್ಷಿ ಒಪ್ಪಿತೇ ? *ವಾಲ್ಮೀಕಿ ನಿಗಮದ ಹಣವನ್ನು ಕದ್ದು ಕಳ್ಳಮಾರ್ಗದಲ್ಲಿ ಚುನಾವಣೆಗೆ ಬಳಸಿಕೊಂಡಾಗ ನಿಮ್ಮ ಆತ್ಮಸಾಕ್ಷಿಗೆ ಏನು ಮಾಡುತ್ತಿತ್ತು ಸಿಎಂ ಸಿದ್ದರಾಮಯ್ಯ? ಅವರೇ ಉತ್ತರಿಸಿ ಎಂದು ಜೆಡಿಎಸ್ ಆಗ್ರಹ ಮಾಡಿದೆ.

ಮದ್ಯಪಾನ ಮುಕ್ತ ಸಮಾಜಮಹಾತ್ಮ ಗಾಂಧಿ ಅವರ ಆಶಯ, ಧ್ಯೇಯವಾಗಿತ್ತು. ಆದರೆ ನೀವು ಬಾರ್ & ವೈನ್ ಸ್ಟೋರ್ ಗಳಿಗೆ ಹಣವನ್ನು ಅಕ್ರಮವಾಗಿ ಟ್ರಾನ್ಸ್ ಫರ್ ಮಾಡಿ, “ಹೆಂಡ, ಸಾರಾಯಿ ಹೊಳೆಹರಿಸುವಾಗ ನಿಮ್ಮ ಆತ್ಮಸಾಕ್ಷಿ ಮದ್ಯದ ಅಮಲಿನಲ್ಲಿ ತೇಲಾಡುತ್ತಿತ್ತೇ ?

ಆತ್ಮಸಾಕ್ಷಿಯಿಂದ ರಾಜೀನಾಮೆ ಕೊಟ್ಟು ನಿಮ್ಮ ರಾಜಕೀಯ ನೈತಿಕತೆ ಉಳಿಸಿಕೊಳ್ಳಿ ಸತ್ಯಮಾರ್ಗದಲ್ಲಿ ನಡೆದ ಮಹಾತ್ಮ ಗಾಂಧಿಯವರು ಬರಿಗೈ ಫಕೀರ ! ತಾವು .? ತಮ್ಮ ಆತ್ಮಸಾಕ್ಷಿ ನ್ಯಾಯಾಲಯ ಏನು ಹೇಳುತ್ತದೆ ? ಎಂದು ಜೆಡಿಎಸ್ ಇನ್ನಿಲ್ಲದಂತೆ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದೆ.

 

- Advertisement -  - Advertisement -  - Advertisement - 
Share This Article
error: Content is protected !!
";