ಅಭಿವೃದ್ಧಿ ವಿರೋಧಿ ಡಿಕೆ ಶಿವಕುಮಾರ್!

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚನ್ನಪಟ್ಟಣದ ಅಭಿವೃದ್ಧಿಗೆ ಬಿಡುಗಡೆಯಾಗಿದ್ದ 212 ಕೋಟಿ ರೂ. ತಡೆ ಹಿಡಿದಿದ್ದು ಯಾರು? ವಿಲನ್‌ ಡಿ.ಕೆ.ಶಿವಕುಮಾರ್ ಅವರೇ ಎಂದು ಜೆಡಿಎಸ್ ಪ್ರಶ್ನಿಸಿದೆ.

ನೀವು ಅನುದಾನ ತಡೆಹಿಡಿದಿರುವ ಈ ದಾಖಲೆಯ ಬಗ್ಗೆ ಚನ್ನಪಟ್ಟಣದ ಮಹಾಜನತೆಯ ಬಳಿ ಇದಕ್ಕೆ ಉತ್ತರಿಸುವಿರಾ ? ಹೆಚ್.ಡಿ.ಕುಮಾರಸ್ವಾಮಿ ಅವರ ಮೇಲಿನ ದ್ವೇಷಕ್ಕೆ ಚನ್ನಪಟ್ಟಣ ತಾಲ್ಲೂಕಿನಲ್ಲಿ 22 ಕಾಮಗಾರಿಗಳನ್ನು, 212.80 ಕೋಟಿ ರೂ. ಅನುದಾನವನ್ನು ತಡೆಹಿಡಿದು ಆ ಭಾಗದ ಜನತೆಗೆ ದ್ರೋಹ ಬಗೆದ ಡಿಸಿಎಂ !    

 ಈಗ ಚುನಾವಣೆ ಸಮಯದಲ್ಲಿ ಚನ್ನಪಟ್ಟಣಕ್ಕೆ 300 ಕೋಟಿ ಕೊಟ್ಟಿದ್ದೇವೆ ಎಂದು ಬೊಗಳೆ ಬಿಡುತ್ತಿದ್ದೀರಿ. ನಿಮಗೆ ಆತ್ಮಸಾಕ್ಷಿ ಇಲ್ಲವೇ ? ಹಿಂದಿನ ಸರ್ಕಾರ ಬಿಡುಗಡೆ ಮಾಡಿದ್ದ ಅನುದಾನದಲ್ಲಿ ಪರ್ಸಂಟೇಜ್‌ ಸಿಗುವುದಿಲ್ಲ ಎಂದು ತಡೆದಿರಾ..?

ಅಭಿವೃದ್ಧಿ ವಿರೋಧಿ, ದ್ವೇಷ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಪಕ್ಷವನ್ನು ಚನ್ನಪಟ್ಟಣದ ಮತದಾರರೇ ತಿರಸ್ಕರಿಸುತ್ತಾರೆ ಎಂದು ಜೆಡಿಎಸ್ ಹೇಳಿದೆ.

- Advertisement -  - Advertisement -  - Advertisement - 
Share This Article
error: Content is protected !!
";