ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಹುಕಾಲ ಕೆಲ ಸಮಯ ಬಂದ ಹೊರಟು ಹೋಗುತ್ತದೆ. ಆದರೆ, ಕರ್ನಾಟಕ ಕಾಂಗ್ರೆಸ್ ಸರ್ಕಾರ ರಾಜ್ಯದ ರೈತರಿಗೆ ಹಿಡಿಸಿರುವ “ರಾಹು”ಕಾಲ ಹೋಗಲು ಇನ್ನೂ ಮೂರುವರೆ ವರ್ಷ ಕಾಯಬೇಕಿದೆ ಎಂದು ಬಿಜೆಪಿ ಕಿಡಿಕಾರಿದೆ.
ರೈತ ವಿರೋಧಿ ಭ್ರಷ್ಟ ಸಿದ್ದರಾಮಯ್ಯ ಅವರ ಸಿಎಂ ಆಗಿದ್ದೇ ಬಂತು ರೈತರು ದಿನಕ್ಕೊಬ್ಬರಂತೆ ಸರಣಿ ಆತ್ಮಹತ್ಯೆ ಮಾಡಿಕೊಂಡರೂ ಕಾಂಗ್ರೆಸ್ಸಿಗರು ರೈತರ ಮಕ್ಕಳೇ ಅಲ್ಲ ಎಂದು ಸೈಲೆಂಟ್ ಆಗಿದ್ದರು.
ಸಚಿವ ಶಿವಾನಂದ ಪಾಟೀಲ ಅವರಂತೂ ರೈತರನ್ನು ಭಿಕ್ಷುಕರಂತೆ ನೋಡುತ್ತಿದ್ದಾರೆ. ರೈತರ ತೊಗರಿ ಬೆಳೆಗೆ ಬೆಂಬಲ ಬೆಲೆ ಕೊಡುವುದಕ್ಕೆ ಸಾಧ್ಯವೇ ಇಲ್ಲ ಎಂದು ರೈತರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ರೈತರು ಬೆಳೆಯುವ ಅಕ್ಕಿ, ಬೆಳೆ, ತರಕಾರಿ ಬೇಕು ಆದರೆ ಬೆಲೆ ನೀಡುವುದಕ್ಕೆ ಆಗುವುದಿಲ್ಲ ಪುಕ್ಸಟ್ಟೆಯೇ ಬೇಕು ಎನ್ನುವುದು ಕಾಂಗ್ರೆಸ್ ವಾದ ಎಂದು ಬಿಜೆಪಿ ಟೀಕಾಪ್ರಹಾರ ಮಾಡಿದೆ.