ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
1924ರಲ್ಲಿ ಬೆಳಗಾವಿಯಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ ಸಂಪೂರ್ಣ ಕನ್ನಡಮಯ ವಾಗಿತ್ತು. ಆದರೆ 2024ರ ಬೆಳಗಾವಿಯ ಕಾಂಗ್ರೆಸ್ ಅಧಿವೇಶನದಲ್ಲಿ ಕನ್ನಡವೇ ಮಾಯವಾಗಿದೆ ಎಂದು ಜೆಡಿಎಸ್ ಆಕ್ಷೇಪ ವ್ಯಕ್ತಪಡಿಸಿದೆ.
ಕರ್ನಾಟಕದಲ್ಲಿ “ಕನ್ನಡವೇ ಸಾರ್ವಭೌಮ ಭಾಷೆ” ಎಂದು ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹುಸಿ ಭಾಷಣಮಾಡಿದ್ದ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ಸಿಗರು ಈಗ ಕನ್ನಡಕ್ಕೆ ಅಪಮಾನ ಎಸಗಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಕನ್ನಡ ಭಾಷೆಯಲ್ಲಿ ಬ್ಯಾನರ್‌ಹಾಕದೆ ಕರುನಾಡಿನ ಜನತೆಗೆ ಕರ್ನಾಟಕ ಕಾಂಗ್ರೆಸ್ ಅವಮಾನ ಮಾಡಿದೆ ಎಂದು ಜೆಡಿಎಸ್ ಆರೋಪಿಸಿದೆ.
ಕನ್ನಡ ಕಡೆಗಣಿಸಿರುವ ಡಿಸಿಎಂ ಡಿಕೆ ಶಿವಕುಮಾರ್ ಯಾವ ಪುರುಷಾರ್ಥಕ್ಕಾಗಿ ಗಾಂಧಿ ಹೆಸರಿನಲ್ಲಿ ಶತಮಾನೋತ್ಸವ ಸಮಾವೇಶ ಆಚರಿಸಿದಿರಿ ? ನಕಲಿಗಾಂಧಿಯ ಕಾಂಗ್ರೆಸ್ಸೀಗರೇ ! ಎಂದು ಜೆಡಿಎಸ್ ಟೀಕಿಸಿದೆ.