ಸರಳವಾಗಿ ಮದುವೆಯಾದ ಅನುಶ್ರೀ

News Desk

ಚಂದ್ರವಳ್ಳಿ ನ್ಯೂಸ್, ಮಂಗಳೂರು:
ಬೆಂಗಳೂರಿನ ಹೊರವಲಯದಲ್ಲಿ ಕಿರುತೆರೆಯ ವಿವಿಧ ಕಾರ್ಯಕ್ರಮಗಳಲ್ಲಿ ಕೆಲಸ ಮಾಡುತ್ತಿರುವ ಆ್ಯಂಕರ್ ಅನುಶ್ರೀ ಅವರ ಮದುವೆ ರೋಷನ್ ರಾಮಮೂರ್ತಿ ಅವರ ಜೊತೆಯಲ್ಲಿ ಸರಳವಾಗಿ ನಡೆದಿದೆ.

ಖ್ಯಾತ ನಟ-ನಟಿಯರಾದ ಶಿವರಾಜ್​​ಕುಮಾರ್, ತಾರಾ, ಪ್ರೇಮಾ, ತರುಣ್ ಸುಧೀರ್, ಹಂಸಲೇಖ, ಶರಣ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಮದುವೆಯಲ್ಲಿ ಭಾಗಿಯಾಗಿದ್ದರು.

- Advertisement - 

ಪ್ರೇಮಿ ರೋಷನ್ ಅವರು ಅನುಶ್ರೀಗೆ ತಾಳಿ ಕಟ್ಟುವಾಗ ಅನುಶ್ರೀ ಎಮೋಷನಲ್ ಆದರು. ಸಿಂಪಲ್ ಆಗಿ ಮದುವೆ ಆಗಬೇಕು ಎಂಬುದು ಅನುಶ್ರೀ ಆಸೆ ಆಗಿತ್ತು. ಅದರಂತೆಯೇ ಮದುವೆ ನೆರವೇರಿದೆ.

ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಮದುವೆ ಬಹಳ ಸರಳವಾಗಿ ನಡೆದಿದೆ. ಕಡಿಮೆ ಜನರೆದುರು ವಿವಾಹ ಆಗಬೇಕು ಎಂಬುದು ಆಸೆ ಆಗಿದ್ದು ಈಡೇರಿದೆ ಎಂದು ತಿಳಿಸಿದರು.
ರೋಷನ್ ಯಾರು
?

- Advertisement - 

ಕುಶಾಲ ನಗರದ ರೋಷನ್ ರಾಮಮೂರ್ತಿ ಅವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೊಂದಿಗೆ ನನ್ನ ಮದುವೆ ಆಗಿದೆ. ಮದುವೆಗೆ ಬಂದಿರುವ ಎಲ್ಲರಿಗೂ ಧನ್ಯವಾದಗಳು ಎಂದು ಅನುಶ್ರೀ. ತಿಳಿಸಿದರು.

ನಮ್ಮದು ಸಿಂಪಲ್ ಲವ್ ಸ್ಟೋರಿ. ಅದನ್ನು ಯಾರು ಹೇಳಿದರೂ ನಂಬುತ್ತಾ ಇರಲಿಲ್ಲ. ನಾವಿಬ್ಬರು ಫ್ರೆಂಡ್ಸ್ ಆದೆವು. ಕಾಫಿ ಕುಡಿದೆವು. ನನಗೆ ಅವರು ಇಷ್ಟ ಆದರು. ಅವರಿಗೆ ನಾನು ಇಷ್ಟ ಆದೆ. ಲವ್ ಆಯಿತು. ಮದುವೆ ಆದೆವು. ರೋಷನ್ ಕೂಡ ಅಪ್ಪು ಸರ್ ಅವರನ್ನು ಬಹಳ ಇಷ್ಟಪಡುವವರು. ಪುನೀತ್ ಪರ್ವ ಕಾರ್ಯಕ್ರಮದಲ್ಲಿ ನಾವು ಭೇಟಿ ಮಾಡಿದ್ದು. ಒಂದು ಲೆಕ್ಕದಲ್ಲಿ ಅಪ್ಪು ಅವರೇ ನಮ್ಮನ್ನು ಸೇರಿಸಿದ್ದಾರೆ ಎಂದು ಅನುಶ್ರೀ  ಭಾವುಕರಾಗಿ ಹೇಳಿದರು.

ರೋಷನ್ ರಾಮಮೂರ್ತಿ ಮಾತನಾಡಿ, ಕಳೆದ 5 ವರ್ಷದಿಂದ ಅನುಶ್ರೀ ಪರಿಚಯ. ಕಳೆದ 3 ವರ್ಷದಿಂದ ಹೆಚ್ಚು ಆಪ್ತರಾದೆವು ಎಂದು ತಿಳಿಸಿದರು. ಶ್ರೀದೇವಿ ಬೈರಪ್ಪ ನನ್ನ ಬಾಲ್ಯದ ಸ್ನೇಹಿತೆ. ಅವರಿಂದಾಗಿ ಅನು ಪರಿಚಯ ಆಯಿತು. ಅನುಶ್ರೀ ಸಿಂಪಲ್ ಹುಡುಗಿ. ನನಗೆ ಎಂದಿಗೂ ಅವರೊಬ್ಬ ಸೆಲೆಬ್ರಿಟಿ ಅಂತ ಅನಿಸಿಯೇ ಇಲ್ಲ. ಆ ಗುಣವೇ ನನಗೆ ತುಂಬ ಇಷ್ಟ ಆಯಿತು. ನಾನು ಚೆನ್ನಾಗಿ ಅಡುಗೆ ಮಾಡುತ್ತೇವೆ ಎಂದು ರೋಷನ್ ತಿಳಿಸಿದರು.

ನಾವಿಬ್ಬರು ಜೀವನವನ್ನು ತುಂಬ ಸರಳವಾಗಿ ನೋಡುವವರು. ಚಿಕ್ಕ ಚಿಕ್ಕ ಸಂತೋಷಗಳನ್ನು ತುಂಬ ಇಷ್ಟಪಡುತ್ತೇವೆ. ಅವರಿಗೆ ಸಹಾಯ ಮಾಡುವ ಮನೋಭಾವ ಇದೆ. ಅದು ನನಗೆ ಬಹಳ ಇಷ್ಟ ಆಗಿದೆ. ನಮ್ಮ ಅಮ್ಮನಿಗೆ ತುಂಬ ಖುಷಿ ಆಗಿದೆ. ಮದುವೆ ಮಾಡಿಸಿದ್ದು, ಅರೇಂಜ್​​ಮೆಂಟ್ ಮಾಡಿದ್ದು, ಅಪ್ಪು ಸರ್ ಪರವಾಗಿ ಇದನ್ನೆಲ್ಲ ಮಾಡಿದ್ದು ವರುಣ್. ಅವರಿಗೆ ನನ್ನ ಧನ್ಯವಾದಗಳು ಎಂದು ಅನುಶ್ರೀ ಅವರು ಹೇಳಿದರು.

 

Share This Article
error: Content is protected !!
";