ವೀರೇಂದ್ರ ಪಪ್ಪಿ ಸೇರಿದಂತೆ ಯಾರೇ ತಪ್ಪು ಮಾಡಲಿ ಶಿಕ್ಷೆ ಆಗುತ್ತೆ

News Desk

ಚಂದ್ರವಳ್ಳಿ ನ್ಯೂಸ್, ರಾಯಚೂರು:
ಕಾನೂನು ಬಾಹಿರ ಕೃತ್ಯ ಎಸಗಿದವರು ಯಾರೇ ಇರಲಿ, ತಪ್ಪು ಮಾಡಿದವರಿಗೆ ಶಿಕ್ಷೆ ಆಗೇ ಆಗುತ್ತೆ ಎಂದು ಸಣ್ಣ‌ ನೀರಾವರಿ ಖಾತೆ ಸಚಿವ ಎನ್. ಎಸ್. ಬೋಸರಾಜು ಹೇಳಿದರು.

ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ‌‌ ಬಳಿಕ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆ. ಸಿ. ವಿರೇಂದ್ರ ಪಪ್ಪಿ ಮನೆ ಮೇಲೆ ಇಡಿ ದಾಳಿ ಹಾಗೂ ಬಂಧನ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಶಾಸಕ‌ ವಿರೇಂದ್ರ ಪಪ್ಪಿ ಇರಲಿ,

- Advertisement - 

ಅಥವಾ ಬೇರೆ ಯಾರೇ ಇರಲಿ ತಪ್ಪು ಮಾಡಿದರೆ ಶಿಕ್ಷೆ ಆಗುತ್ತದೆ. ನ್ಯಾಯಯುತವಾಗಿ ಏನು ನಡೆಯಬೇಕೋ ಅದು ನಡೆಯುತ್ತೆ. ಗ್ಯಾಂಬ್ಲಿಂಗ್ ಮಾಡ್ತಾರೋ ಮತ್ತೊಂದು ಮಾಡ್ತಾರೋ ಯಾರೇ ಮಾಡಲಿ. ಕಾನೂನುಬಾಹಿರವಾಗಿ ಮಾಡಿರುವಂತಹ ಚಟುವಟಿಕೆಗಳಿಗೆ ಸರ್ಕಾರ ಎಂದೂ ಅವಕಾಶ ನೀಡುವುದಿಲ್ಲ. ‌ಅವರು ಯಾರೇ ಇರಲಿ, ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಧರ್ಮಸ್ಥಳದ ವಿಚಾರ ಈಗಾಗಲೇ ಒಂದು ಹಂತಕ್ಕೆ ಬಂದಿದೆ.‌ ಎಸ್​​ಐಟಿ ರಚನೆ ಮಾಡಿ ತನಿಖೆ ನಡೆದಿರುವುದಕ್ಕೆ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರು ಸ್ವಾಗತ ಮಾಡಿದ್ದಾರೆ. ತನಿಖೆಯಿಂದ ಸತ್ಯ ಹೊರಬರಲಿ. ಕಾಂಗ್ರೆಸ್ ಒಳ್ಳೆಯ ಕೆಲಸ ಮಾಡಿದೆ ಎಂದಿದ್ದಾರೆ. ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಈಗಾಗಲೇ ಎಫ್​​ಐಆರ್ ಆಗಿದೆ. ಬಂಧನವೂ ಆಗಿದೆ. ಯಾವುದೇ ಸರ್ಕಾರ ಇರಲಿ ಕಂಪ್ಲೇಂಟ್ ಬಂದರೆ ತನಿಖೆ ಮಾಡುವ ಜವಾಬ್ದಾರಿ ಇರುತ್ತದೆ. ಹಾಗಾಗಿ, ಸರ್ಕಾರ ತನ್ನ ಕರ್ತವ್ಯ ನಿರ್ವಹಿಸಿದೆ.

- Advertisement - 

ಈಗ ಸತ್ಯ ಹೊರ ಬರುತ್ತಿದೆ. ಬಿಜೆಪಿಯವರಿಗೆ ಮಾತನಾಡಲು ಯಾವುದೇ ವಿಷಯಗಳಿಲ್ಲ. ಒಂದೂವರೆ ತಿಂಗಳ ಬಳಿಕ ಎಲ್ಲಿ ಏನೂ ಸಿಕ್ಕಿಲ್ಲ ಅಂತ ಈಗ ಮಾತನಾಡುತ್ತಿದ್ದಾರೆ. ಬಿಜೆಪಿಯವರಿಗೆ ರಾಜ್ಯದ ಅಭಿವೃದ್ಧಿಗಿಂತ ರಾಜಕೀಯ ಮುಖ್ಯ. ಶಾಂತಿ, ನೆಮ್ಮದಿ ಬೇಕಿಲ್ಲ. ಧರ್ಮದ ಆಧಾರದ ಮೇಲೆ ಗಲಾಟೆ ಮಾಡಿಸುವುದು ಮೊದಲಿನಿಂದ ಬಂದಿದೆ. ಬಿಜೆಪಿ ಸರ್ಕಾರ ಇದ್ದಾಗಲೂ ಮಂಗಳೂರು, ಉಡುಪಿಯಲ್ಲಿ ಗಲಭೆಗಳಾಗಿದ್ದವು ಎಂದು ಹೇಳಿದ್ದಾರೆ.

 

 

 

Share This Article
error: Content is protected !!
";