ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅನ್ನದಾತರು ತಾವು ಬೆವರು ಸುರಿಸಿ ಬೆಳೆದ ಕೃಷಿ ಉತ್ಪನ್ನಗಳನ್ನು ಮಾರಲು ಕೂಡ 8-10% ಕಮಿಷನ್ ಕೊಡುವಂತಹ ದುಸ್ಥಿತಿ ಬಂದಿರುವುದು ನಿಜಕ್ಕೂ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷವನ್ನು ಸಾಬೀತು ಪಡಿಸಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ದೂರಿದ್ದಾರೆ.
ಗ್ಯಾರಂಟಿ ಸ್ಕೀಮ್ ಗಳಿಗಾಗಿ ಅವೈಜ್ಞಾನಿಕ ದುಂದುವೆಚ್ಚ ಮಾಡುತ್ತಿರುವ ಸರ್ಕಾರಕ್ಕೆ, ದಲ್ಲಾಳಿಗಳ ಜೊತೆ ಸೇರಿ ‘ಎಪಿಎಂಸಿ‘ ಅಧಿಕಾರಿಗಳು ರೈತರ ಮೇಲೆ ಮಾಡುತ್ತಿರುವ ‘ಕಮಿಷನ್ ದೌರ್ಜನ್ಯ‘ವನ್ನು ನೋಡಿಯೂ ಕೂಡ ಸರ್ಕಾರ ಜಾಣಕುರುಡತನ ಪ್ರದರ್ಶಿಸುತ್ತಿದೆ. ಸದಾ ಬಣ ರಾಜಕೀಯ ಮತ್ತು ಜಾತಿ ಗಣತಿ ವಿಷಯದಲ್ಲೇ ಬ್ಯುಸಿಯಾಗಿರುವ ಕೃಷಿ ಸಚಿವ ಎನ್.ಚಲುವನಾರಾಣಸ್ವಾಮಿ ಎಪಿಎಂಸಿ ಗಳ ಕಡೆ ಗಮನ ಹರಿಸುವುದು ಯಾವಾಗ? ಎಂದು ನಿಖಿಲ್ ಪ್ರಶ್ನಿಸಿದ್ದಾರೆ.