ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲ್ಲೂಕು ಎಮ್ಮೆಹಟ್ಟಿ ಗ್ರಾಮದ ಪೂಜಾ ಗಂಡ ಗಿರೀಶ್ (27) ಕಾಣೆಯಾದ ಕುರಿತು ಆಗಸ್ಟ್ 15 ರಂದು ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 16 ರಂದು ಪೂಜಾ ತನ್ನ ತಂದೆ ತಾಯಿಗೆ ಕರೆ ಮಾಡಿ ಮನೆಯಲ್ಲಿದ್ದು ಬೇಜಾರಾಗಿದೆ ಎಂದು ಹೇಳಿ ಪೋಷಕರನ್ನು ಕರೆಸಿಕೊಂಡು ತವರು ಮನೆ ಸುಂಕದಕಲ್ಲು ಗ್ರಾಮಕ್ಕೆ ಹೋಗಿರುತ್ತಾಳೆ.
ಆಗಸ್ಟ್ 15 ರಂದು ಪೂಜಾ ಗಂಡ ಗಿರೀಶ್ ಜೊತೆ ಕೊನೆಯದಾಗಿ ಫೋನ್ ನಲ್ಲಿ ಮಾತನಾಡಿದ್ದು, ನಂತರ ಪೂಜಾ ಮೊಬೈಲ್ ಸ್ವೀಚ್ ಆಫ್ ಆಗಿರುತ್ತದೆ. ನಂತರದಿಂದ ಪೂಜಾ ಕಾಣೆಯಾಗಿದ್ದು, ಯಾರ ಸಂಪರ್ಕಕ್ಕೂ ಬಂದಿರುವುದಿಲ್ಲ.
ಪೂಜಾ ಪತ್ತೆಯಾದರೆ ಭರಮಸಾಗರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08194-258421, 9480803163, ಅಥವಾ ಚಿತ್ರದುರ್ಗ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 08194222782, 0819410 ಗೆ ಕರೆ ಮಾಡುವಂತೆ ಪ್ರಕಟಣೆ ತಿಳಿಸಿದೆ.

