ಹಿರಿಯ ನಾಗರೀಕರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ಮನವಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ನಾಗರೀಕ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಜನಹಿತ ಹಿರಿಯ ನಾಗರೀಕರ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿಗೆ ಗುರುವಾರ ಮನವಿ ಅರ್ಪಿಸಲಾಯಿತು.

ಬನಶಂಕರಿ ಲೇಔಟ್, ಮಲ್ಲಯ್ಯ ಬಡಾವಣೆ ಹಾಗೂ ದಫೆದಾರ್ ನಾರಾಯಣಪ್ಪ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಕುವೆಂಪು ನಗರದಲ್ಲಿ ಓವರ್‌ಹೆಡ್ ಟ್ಯಾಂಕ್ ನಿರ್ಮಿಸಿ ಸುತ್ತಲು ವಿಸ್ತರಿಸಿಕೊಂಡಿರುವ ನಗರಕ್ಕೆ ನೀರು ಪೂರೈಸಬೇಕು. ಬನಶಂಕರಿ ಲೇಔಟ್ ಪಾರ್ಕ್ ಪಕ್ಕದಲ್ಲಿ ರುಡ್‌ಸೆಟ್ ಹತ್ತಿರ ಚರಂಡಿ ನಿರ್ಮಿಸುವಂತೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಶನಿಮಹಾತ್ಮ ದೇವಸ್ಥಾನದ ರಸ್ತೆ ಅಭಿವೃದ್ದಿಯಾಗಬೇಕು.

- Advertisement - 

ಇಲ್ಲಿ ಮಕ್ಕಳ ಎರಡು ಹಾಸ್ಟೆಲ್‌ಗಳಿದ್ದು, ರಸ್ತೆ ಬದಿಯಲ್ಲಿ ಬೆಳೆದಿರುವ ಗಿಡ ಗಂಟೆಗಳಲ್ಲಿ ಹಾವುಗಳಿವೆ. ರಾತ್ರಿ ವೇಳೆ ಜನ ಸಂಚರಿಸಲು ಕಷ್ಟವಾಗಿದೆ. ಬೀದಿ ದೀಪಗಳನ್ನು ಅಳವಡಿಸಬೇಕು. ಚಳ್ಳಕೆರೆ ಗೇಟ್‌ನಿಂದ ಶನಿಮಹಾತ್ಮ ದೇವಸ್ಥಾನದ ರಸ್ತೆತನಕ ಸರ್ವಿಸ್ ರೋಡ್ ಇದ್ದು, ಇಲ್ಲಿ ತಲೆಎತ್ತಿದ್ದ ಗೂಡಂಗಡಿಗಳನ್ನು ಕಳೆದ ತಿಂಗಳು ತೆರವುಗೊಳಿಸಲಾಗಿದೆ. ಆದರೆ ರಸ್ತೆ ಅಭಿವೃದ್ದಿಯಾಗಿಲ್ಲ ಎಂದು ಜನಹಿತ ಹಿರಿಯ ನಾಗರೀಕರ ಹೋರಾಟ ಸಮಿತಿ ಅಧ್ಯಕ್ಷ ಪಿ.ಈ.ವೆಂಕಟಸ್ವಾಮಿ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.

ಸಮಿತಿಯ ಉಪಾಧ್ಯಕ್ಷ ಎ.ತಿಪ್ಪೇಸ್ವಾಮಿ, ಕಾರ್ಯದರ್ಶಿ ವೈ.ಕೆ.ಮಹಾಸ್ವಾಮಿ, ಖಜಾಂಚಿ ಎ.ಟಿ.ರಮೇಶ್, ನಿರ್ದೇಶಕರುಗಳಾದ ಹೆಚ್.ಕನಕದಾಸ್, ಟಿ.ರುದ್ರಮುನಿ, ಜಿ.ಟಿ.ಲಕ್ಷ್ಮಿನಾರಾಯಣಸ್ವಾಮಿ, ಕೆ.ಹೆಚ್.ತಿಪ್ಪೇಶ್‌ರೆಡ್ಡಿ, ಕೆ.ಟಿ.ತಿಪ್ಪೇಸ್ವಾಮಿ, ಮಾರುತೇಶ್‌ರೆಡ್ಡಿ, ರೂಪ, ಸವಿತಾ ಬೀರಾದಾರ್ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.

- Advertisement - 

 

 

Share This Article
error: Content is protected !!
";