ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ ಸಿ ಮಹದೇವಪ್ಪರವರನ್ನು ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಹುಬ್ಬಳ್ಳಿಯ ಮರ್ಯಾದೆಗೇಡು ಕೊಲೆಯಾದ ಪಾಟೀಲ್ ವಿವೇಕಾನಂದ ದೊಡ್ಡಮನಿ ಹತ್ಯೆಯನ್ನು ಖಂಡಿಸಿ ಕೊಲೆ ಮಾಡಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಹಾಗೂ ವಿಶೇಷ ಕಾನೂನನ್ನು ಕೂಡಲೇ ಜಾರಿ ಮಾಡಬೇಕು ಹಾಗೂ ನೊಂದ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಹಾಗೂ
ವಿವೇಕಾನಂದ ದೊಡ್ಮನಿ ಈತನಿಗೆ ಸರ್ಕಾರಿ ಕೆಲಸ ಕೊಡಬೇಕು ಎಂದು ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ವೇಳೆ ಮನವಿ ಸ್ವೀಕರಿಸಿ ಸಚಿವರು ಮಾತನಾಡಿ ಮರ್ಯಾದೆ ಗೇಡು ಹತ್ಯೆ ವಿಚಾರವಾಗಿ ಕಾನೂನುಗಳನ್ನು ಅತಿ ತುರ್ತಾಗಿ ಜಾರಿಗೆ ತರಲು ಮುಖ್ಯಮಂತ್ರಿಗಳ ಬಳಿ ಹಾಗೂ ಕ್ಯಾಬಿನೆಟ್ ಸಚಿವರುಗಳ ಬಳಿ ಮಾತನಾಡಿದ್ದೇನೆ.
ಆದಷ್ಟು ಬೇಗನೆ ಮರ್ಯಾದೆ ಹತ್ಯಾ ವಿಚಾರವಾಗಿ ಕಾನೂನು ತರಲು ನಮ್ಮ ಸರ್ಕಾರ ಸಿದ್ಧವಾಗಿದೆ. ಕೊಲೆ ಮಾಡಿರುವ ಎಲ್ಲಾ ಆರೋಪಿಗಳ ಆಸ್ತಿಪಾಸ್ತಿಗಳನ್ನು ಮುಟ್ಟುಕೋಲು ಹಾಕಿಕೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ ರಾಮಚಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಆರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಎನ್ ಮಾರುತಿ, ಹಿರಿಯೂರು ತಾಲೂಕು ಅಧ್ಯಕ್ಷ ಓಂಕಾರ್ ಮೂರ್ತಿ ಕೆ, ದಲಿತ ಯುವ ಮುಖಂಡ ಹನುಮಂತಪ್ಪ ಇದ್ದರು.

