ಚಿತ್ರದುರ್ಗ ಜಿಟಿಟಿಸಿ ಪ್ರವೇಶಾತಿಗೆ ಅರ್ಜಿ, ಶೇ.100ರಷ್ಟು ಉದ್ಯೋಗ ಖಾತರಿ, ಉತ್ತಮ ಉದ್ಯೋಗಕ್ಕಾಗಿ “ಜಿಟಿಟಿಸಿ ಕೋರ್ಸ್”

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿರುದ್ಯೋಗ ದೊಡ್ಡ  ಸಮಸ್ಯೆಯಾಗಿದ್ದು, ಯುವ ಜನತೆ ಕೌಶಲಾಧಾರಿತ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಿರುದ್ಯೋಗ ಸಮಸ್ಯೆಗೆ
ಪರಿಹಾರ ಕಂಡುಕೊಳ್ಳಬಹುದಾಗಿದೆ.
ಎಸ್ಎಸ್ಎಲ್ಸಿ ನಂತರ ವೃತ್ತಿ ಶಿಕ್ಷಣದತ್ತ ಹೊರಳುವ ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ ತರಬೇತಿ ನೀಡುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ  (ಜಿಟಿಟಿಸಿ) ಉದ್ಯೋಗ ಭರವಸೆಯ ಕೋರ್ಸ್ಗಳನ್ನು ನೀಡುವಲ್ಲಿ ಮುಂಚೂಣೆಯಲ್ಲಿದೆ.

      ಚಿತ್ರದುರ್ಗ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ 2025-26ನೇ ಸಾಲಿಗೆ ಡಿಪ್ಲೋಮಾ ಪ್ರವೇಶಾತಿಯು ಪ್ರಾರಂಭವಾಗಿದ್ದು,  1. ಡಿಪ್ಲೋಮಾ ಇನ್ಟೂಲ್ ಅಂಡ್ ಡೈ ಮೇಕಿಂಗ್ 2. ಡಿಪ್ಲೋಮಾ ಇನ್ ಮೆಕಾಟ್ರಾನಿಕ್ಸ್ 3. ಡಿಪ್ಲೋಮಾ ಇನ್ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಬ ಮೂರು ಕೋರ್ಸ್ಗಳಿವೆ. ಕೋರ್ಸ್ಗಳ ಅವಧಿ 3 ವರ್ಷ ಹಾಗೂ 1 ವರ್ಷ ಕಡ್ಡಾಯವಾಗಿ ಕೈಗಾರಿಕೆಗಳಿಗೆನಿಯೋಜಿಸಲಾಗುವುದು.
ಡಿಪ್ಲೋಮಾ ಆದ ನಂತರ ದೇಶ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆಗಳಿರುತ್ತವೆ. ಹಾಗೂ ಚಿತ್ರದುರ್ಗ ಜಿಟಿಟಿಸಿ ಕೇಂದ್ರದಲ್ಲಿ ಡಿಪ್ಲೋಮಾ ಕೋರ್ಸ್ಗಳಿಗೆ ಶೇ.70 ಪ್ರಾಯೋಗಿಕ ತರಬೇತಿ ಹಾಗೂ ಶೇ.30 ಥೇರಿ ಅನುಗುಣವಾಗಿ 20ಕ್ಕೂ ಹೆಚ್ಚು ಸುಸಜ್ಜಿತವಾಗಿರುವ ಪ್ರಯೋಗಾಲಗಳಿದ್ದು, ಉತ್ತಮವಾದ ತರಬೇತಿ ನೀಡಲಾಗುತ್ತದೆ.

             ವಿಶೇಷವಾಗಿ ದ್ವೀತಿಯ ಪಿಯುಸಿ (ವಿಜ್ಞಾನ) ಹಾಗೂ ಐಟಿಐ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನೇರವಾಗಿ ದ್ವೀತಿಯ ವರ್ಷಕ್ಕೆ ಜಿಟಿಟಿಸಿ ಡಿಪ್ಲೋಮಾಗೆ ದಾಖಲಾತಿ ಪಡೆಯಬಹುದು. ಅಲ್ಲದೇ ಡಿಪ್ಲೋಮಾ ಉತ್ತೀರ್ಣರಾದ ವಿದ್ಯಾರ್ಥಿಗಳು ನೇರವಾಗಿ ದ್ವೀತಿಯ ವರ್ಷದ ಇಂಜಿನಿಯರಿಂಗ್ಗೆ ಪ್ರವೇಶ ಪಡೆಯಬಹುದು. ಈಗಾಗಲೇ ಆನ್ಲೈನ್ ಪ್ರವೇಶ ಅರ್ಜಿಗಳು ಆರಂಭವಾಗಿದ್ದು ಮೊದಲು ಬಂದವರಿಗೆ ಮೊದಲ ಆದ್ಯತೆಮೇರೆಗೆ ಪ್ರವೇಶಾತಿ ಮಾಡಿಕೊಳ್ಳಲಾಗುತ್ತಿದೆ.

     ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು (ಜಿಟಿಟಿಸಿ) ಕರ್ನಾಟಕ ರಾಜ್ಯ ಸರ್ಕಾರ ಮತ್ತು ಡೆನ್ಮಾರ್ಕ್ ಸರ್ಕಾರದ ನಡುವಿನ ಒಂದು ಒಪ್ಪಂದಕ್ಕನುಗುಣವಾಗಿ 1972 ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭಿಸಲಾಯಿತು. ಕೇಂದ್ರದ ಮುಖ್ಯ ಉದ್ದೇಶವೆನೆಂದರೆ ನುರಿತ ಮಾನವ ಸಂಪನ್ಮೂಲವನ್ನು ಕೈಗಾರಿಕ ಕ್ಷೇತ್ರಕ್ಕೆ ಒದಗಿಸುವುದು ಹಾಗೂ ಕೈಗಾರಿಕ ಸಂಸ್ಥೆಗಳ ತಂತ್ರಜ್ಞಾನ ಮತ್ತು ತರಬೇತಿಗಳ ನೆರವು ನೀಡುವುದು.

        ಕೈಗಾರಿಕ ಕ್ಷೇತ್ರದಲ್ಲಿ ಯುವಕರನ್ನು ಪ್ರೋತ್ಸಾಹಿಸಲು ಯಂತ್ರಗಳ ಬಗ್ಗೆ ಇನ್ನಷ್ಟೂ ಅರಿವು ಮೂಡಿಸುವ ಸಲುವಾಗಿ 2021ರಲ್ಲಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವನ್ನು ಚಿತ್ರದುರ್ಗದಲ್ಲಿ ಸ್ಥಾಪಿಸಲಾಯಿತು. ಇಲ್ಲಿಯವರೆಗೆ ಹಲವಾರು ಬಡ ಹಿಂದುಳಿದ ರೈತರ ಮಕ್ಕಳು ತಾಂತ್ರಿಕ ತರಬೇತಿಯನ್ನು ಪಡೆದು ದೇಶವಿದೇಶದ ದೊಡ್ಡದೊಡ್ಡ ಕಂಪನಿಗಳಲ್ಲಿ ದೊಡ್ಡ ಹುದ್ದೆಗಳನ್ನು ಅಲಂಕರಿಸುತ್ತಾರೆ.

      ಏಕಕಾಲದಲ್ಲಿ ಉದ್ಯೋಗ ಕೇಂದ್ರಿತ, ಸ್ವಯಂ ಉದ್ಯೋಗಿಗಳಾಗಲು ತರಬೇತಿ: ಜಿಟಿಟಿಸಿ ಚಿತ್ರದುರ್ಗಕೇಂದ್ರದಲ್ಲಿ ಉತ್ತಮವಾದ ಕ್ಯಾಂಪಸ್ ವ್ಯವಸ್ಥೆ, ವಿಶಾಲವಾದ ಕಟ್ಟಡಗಳು, ಅತ್ಯುತ್ತಮ ಪ್ರಾಯೋಗಿಕ ಕಲಿಕೆಗೆ ಪೂರಕವಾದ ವರ್ಕ್ಶಾಪ್, ಲ್ಯಾಬೋರೇಟರಿ ಸೌಲಭ್ಯಗಳಿಂದ ಉದ್ಯೋಗಾಧಾರಿತ ಪ್ರಾಯೋಗಿಕತಾಂತ್ರಿಕ ಶಿಕ್ಷಣ ಕಲಿಕೆಗೆ ಗಡಿಭಾಗದ ಹಾಗೂ ಸುತ್ತಲಿನ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಜಿಟಿಟಿಸಿ ಮುಖ್ಯ ಪರಿಕಲ್ಪನೆ ಯಂತ್ರೋಪಕರಣಗಳ ಚಾಲನೆ, ನಿರ್ವಹಣೆ ಉದ್ಯೋಗಾದಾರಿತ ತಾಂತ್ರಿಕ ತರಬೇತಿ ನೀಡುವುದೇ ಆಗಿರುವುದರಿಂದ ಇದು ಏಕ ಕಾಲದಲ್ಲಿ ಉದ್ಯೋಗ ಕೇಂದ್ರಿತವು ಸ್ವಯಂ ಉದ್ಯಮಿಗಳಾಗಲೂ ತರಬೇತಿ ನೀಡುವ ಶಿಕ್ಷಣವೂ ಆಗಿದೆ.

      ಮೇಲ್ಕಾಣಿಸಿದ ಡಿಪ್ಲೋಮಾ ಕೋರ್ಸ್ಗಳ ವಿಶೇಷತೆಗಳೆಂದರೆ ಡಿಪ್ಲೋಮಾ ಇನ್ಟೂಲ್ ಅಂಡ್ಡೈ ಮೇಕಿಂಗ್ ಒಂದು ಕಾರಿನ ಬಾಡಿ ಪಾಟ್ರ್ಸ್ ತಯಾರಿಸಲಿಕ್ಕೆ ಏನೇನು ಬೇಕೋ ಅಂತ ಮೌಲ್ಡ್ ಡಿಸೈನ್ ಮತ್ತಿತರೆ ಸಂಗತಿಗಳನ್ನು ಕಲಿಯುತ್ತಾರೆ. ಡಿಪ್ಲೋಮಾ ಇನ್ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಹಾಗೂ ಡಿಪ್ಲೋಮಾ ಇನ್ ಮೆಕಾಟ್ರಾನಿಕ್ಸ್ 2 ಕೋರ್ಸ್ಗಳಲ್ಲಿ ಆಟೋಮೇಶನ್ ಹಾಗೂ ರೋಬೋಟಿಕ್ ಮಾಡೋದು ಹೇಗೆ? ಅವುಗಳಿಗೆ ಕೋಡಿಂಗ್ ಮಾಡುವುದು ಹೇಗೆ? ಅನ್ನೋದನ್ನು ಕಲಿಯುತ್ತಾರೆ. ಪಠ್ಯದಲ್ಲಿ ಓದಿದ್ದನ್ನು ಪ್ರಾಯೋಗಿಕವಾಗಿ ಕಲಿತಾಗ ಮಾತ್ರ ಕೌಶಲ್ಯ ಕಲಿಕೆಯಲ್ಲಿ ನಿಖರತೆ ಬರುತ್ತದೆ.

    ಕಡಿಮೆ ವೆಚ್ಚದಲ್ಲಿ ಜಿಟಿಟಿಸಿ ಶಿಕ್ಷಣ: ಇನ್ನಿತರ ಖಾಸಗಿ ಕಾಲೇಜಿಗಳಿಗೆ ಹೋಲಿಸಿದಾಗ ಜಿಟಿಟಿಸಿ ಶಿಕ್ಷಣವನ್ನು ಕಡಿಮೆ ವೆಚ್ಚದಲ್ಲಿ ಮಾಡಬಹುದು. ಜಿಟಿಟಿಸಿಯಲ್ಲಿ ವಿದ್ಯಾರ್ಥಿಗೆ ವಾರ್ಷಿಕ ಕೇವಲ 34 ಸಾವಿರದಷ್ಟು ಖರ್ಚು ಬರುತ್ತದೆ. ಕರ್ನಾಟಕ ಸರ್ಕಾರ ಪ್ರತಿ ವಿದ್ಯಾರ್ಥಿಗೂ 26 ಸಾವಿರದಿಂದ 28 ಸಾವಿರದ ತನಕ ವಿದ್ಯಾರ್ಥಿಗೆ ವೇತನ ರೂಪದಲ್ಲಿ ವಾಪಸ್ ಕೊಡುತ್ತದೆ ಬೇರೆ ಬೇರೆ ಯೋಜನೆಗಳಡಿ ಸಹಾಯ ಸಿಗಲಿದೆ ಯೂನಿಫಾರಂ, ಕ್ಯಾಲುಕೇಲಟರ್, ಸೇಫ್ಟಿ ಶೂ ನಂತರ ಸಣ್ಣ ಪುಟ್ಟ ಖರ್ಚುಗಳು ಮಾತ್ರ ಬರುತ್ತವೆ.

ಡಿವೈಡಿಂಗ್ ಸಿಸ್ಟಂ ಹಾಸ್ಟೆಲ್ ಸೌಲಭ್ಯವಿದೆ. ಎಸ್ಸಿ, ಎಸ್ಟಿ, ಒಬಿಸಿ ವಿದ್ಯಾರ್ಥಿಗಳು ಆಯಾ ಇಲಾಖೆ ವಿದ್ಯಾರ್ಥಿ ನಿಲಯಗಳಿಗೆ ಸೇರಬಹುದು. ಇಲಾಖೆ ಹಾಸ್ಟೆಲ್ಗಳು ದೂರವಾಗುತ್ತವೆ. ಓಡಾಟ ಕೂಡದು ಬಾರಿ ಎನ್ನುವ ಕಾರಣಕ್ಕೆ ಜಿಟಿಟಿಸಿ ಹಾಸ್ಟೆಲ್ಗೆ ಬಹುತೇಕರು ಸೇರುತ್ತಾರೆ. ಇಲ್ಲಿ ವಿದ್ಯಾರ್ಥಿಗಳೇ ಹಾಸ್ಟೆಲ್ ಆಗು ಹೋಗುಗಳನ್ನು ನಿರ್ವಹಿಸುತ್ತಾರೆ. ಬಡ ಹಾಗೂ ಮಧ್ಯಮವರ್ಗದ ವಿದ್ಯಾರ್ಥಿಗಳು ಜಿಟಿಟಿಸಿಗಳ ಮೂಲಕ ತಾಂತ್ರಿಕ ಶಿಕ್ಷಣ ಪಡೆಯುವುದು ಅತ್ಯಂತ ಸುಲಭದ ಮಾರ್ಗವಾಗಿದೆ.

       ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ ಕುಂಚಿಗನಾಳ್ ಕಣಿವೆ ಮಾರಮ್ಮ  ದೇವಸ್ಥಾನ ಹಿಂಭಾಗದ ಹಳೆಯ ಬೆಂಗಳೂರು ರಸ್ತೆಯ ಸರ್ವೇ ನಂ.44 ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ದೂರವಾಣಿ ಸಂಖ್ಯೆ 9738465834, 9481866855, 9945616114ಗೆ ಸಂಪರ್ಕಿಸಬಹುದು ಎಂದು ಚಿತ್ರದುರ್ಗ ಜಿಟಿಟಿಸಿ ಪ್ರಾಂಶುಪಾಲ ಬಿ.ಎಸ್.ಸುಹಾಸ್ ತಿಳಿಸಿದ್ದಾರೆ.

 

 

- Advertisement - 
Share This Article
error: Content is protected !!
";