ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಕೇಂದ್ರೀಕೃತ ದಾಖಲಾತಿ ಘಟಕ, ಬೆಂಗಳೂರು ಇವರು ಪ್ರಸಕ್ತ ಸಾಲಿನ ಪ್ರಥಮ ವರ್ಷದ ಡಿ.ಇ.ಎಲ್.ಇಡಿ.ದಾಖಲಾತಿ ಕನ್ನಡ ಮತ್ತು ಉರ್ದು ಮಾಧ್ಯಮದಲ್ಲಿ ಪಡೆಯಲು ಆಫ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ನಮೂನೆಗಳನ್ನು WWW.schooleducation.karnataka.gov.in ನಲ್ಲಿ ಡೌನ್ ಲೋಡ್ ಮಾಡಿಕೊಂಡು ನಿಗದಿತ ದಾಖಲೆಗಳು ಮತ್ತು ಡಿ.ಡಿ.ಯೊಂದಿಗೆ ಜೂನ್ 6 ರೊಳಗಾಗಿ ನೋಡಲ್ ಕೇಂದ್ರವಾದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ,( ಡಯಟ್), ಇಲ್ಲಿಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಧಾನ ಅರ್ಹತೆ. ಮೀಸಲಾತಿ ವಿವರಗಳು ಮತ್ತು ಇತರೆ ಮಾಹಿತಿಗಳನ್ನು WWW.schooleducation.karnataka.gov.in ನಲ್ಲಿ ಪಡೆಯಬಹುದು.
ಹೆಚ್ಚಿನ ಮಾಹಿತಿಯನ್ನು ದೂ.ಸಂ: ಕನ್ನಡ ಮಾಧ್ಯಮ – 9164489972, 988030377. 9844401092. 08192-231156
ಉರ್ದು ಮಾಧ್ಯಮ– 9164489972, 8867932439, 08192-231156 ಸಂಪರ್ಕಿಸಲು ಡಯಟ್ ಪ್ರಾಂಶುಪಾಲರಾದ ಗೀತಾ ತಿಳಿಸಿದ್ದಾರೆ.