ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸ್ನಾತಕೋತರ ವಿಭಾಗಗಳು ಮತ್ತು ಸಂಯೋಜಿತ ಸಂಶೋಧನಾ ಕೇಂದ್ರಗಳಲ್ಲಿ, ಸಂಶೋಧನಾ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಗತ್ಯ ವಿದ್ರ್ಯಾತೆ ಹೊಂದಿರುವ ಆಸಕ್ತ ಸ್ನಾತಕೋತರ ಪಧವೀದರರು ಆನ್ಲೈನ್ / ಆಫ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
ಪ್ರವೇಶಕ್ಕಾಗಿ ಅಗತ್ಯವಾದ ವಿದ್ಯಾರ್ಹತೆ, ಪ್ರವೇಶ ಪರೀಕ್ಷೆಯ ವಿವರಗಳು, ಪ್ರವೇಶ ಪರೀಕ್ಷೆಯಿಂದ ವಿನಾಯಿತಿ ಹೊಂದುವ ವಿವರಗಳು, ಅರ್ಜಿ ಸಲ್ಲಿಸುವ ವಿಧಾನ, ಶುಲ್ಕ ಸಂದಾಯದ ವಿವರ, ಲಭ್ಯವಿರುವ ವಿಷಯವಾರು ಖಾಲಿ ಸ್ಥಾನಗಳು, ಸಂಶೋಧನಾ ಕೇಂದ್ರಗಳ ವಿವರ ಇತ್ಯಾದಿಗಳನ್ನು ವಿಶ್ವವಿದ್ಯಾಲಯದ ಜಾಲತಾಣ https://beu.ac.in/onlineapp/ ರಲ್ಲಿ ಪ್ರಕಟಿಸಿಲಾಗಿದೆ.
ಆಸಕ್ತ ವಿದ್ಯಾರ್ಥಿಗಳು, 2026ನೇ ಮಾರ್ಚ್ 18ರ ವರೆಗೆ ದಂಡ ಶುಲ್ಕವಿಲ್ಲದೆ ಹಾಗೂ ರೂ.200.00 ದಂಡ ಶುಲ್ಕದೊಂದಿಗೆ 2026ನೇ ಮಾರ್ಚ್ 25 ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಪ್ರವೇಶ ಪರೀಕ್ಷೆಯ ದಿನಾಂಕವನ್ನು ಬೆಂಗಳೂರು ನಗರ ವಿಶ್ವವಿದ್ಯಾಲಯದ ಜಾಲತಾಣ www.beu.ac.in ರಲ್ಲಿ ಪ್ರಕಟಿಸಿಲಾಗುವುದು.
ಭರ್ತಿ ಮಾಡಿದ ಅರ್ಜಿಗಳನ್ನು ಶುಲ್ಕ ಪಾವತಿ ರಶೀದಿಯೊಂದಿಗೆ ಹಾಗೂ ಇತರೆ ಅಗತ್ಯ ದಾಖಲೆಗಳೊಂದಿಗೆ ಕುಲಸಚಿವರು (ಮೌಲ್ಯಮಾಪನ) ರವರ ಕಛೇರಿ, ಜ್ಞಾನ ಜ್ಯೋತಿ ಸೆಂಟ್ರಲ್ ಕಾಲೇಜು ಆವರಣ, ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು – 560001 ಅವರಿಗೆ ತಲುಪಿಸುವುದು.
ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸುವ ಸಂಬಂಧ ಹೆಚ್ಚಿನ ಮಾಹಿತಿಯನ್ನು ವಿಶ್ವವಿದ್ಯಾಲಯದ ಜಾಲತಾಣದಿಂದ ಪಡೆಯಬಹುದು ಎಂದು ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ. ರಮೇಶ್ ಕುಡೆನಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

