ಅರಿವು ಸಾಲ ನವೀಕರಣಕ್ಕೆ ಅರ್ಜಿ ಆಹ್ವಾನ

News Desk

ಅರಿವು ಸಾಲ ನವೀಕರಣಕ್ಕೆ ಅರ್ಜಿ ಆಹ್ವಾನ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದಿಂದ ಕ್ರಿಶ್ಚಿಯನ್ ಸಮುದಾಯ ಹೊರತು ಪಡಿಸಿ ಇತರೆ ಅಲ್ಪಸಂಖ್ಯಾತ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಂದ ಅರಿವು ಸಾಲ ನವೀಕರಣಕ್ಕೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ ಹಾಗೂ ನೀಟ್ ಮೂಲಕ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್  ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ, ವಾಸ್ತುಶಿಲ್ಪ, ಎಂಬಿಎ, ಎಂಸಿಎ, ಎಲ್‍ಎಲ್‍ಬಿ, ತೋಟಗಾರಿಕೆ, ಕೃಷಿ ವಿಜ್ಞಾನ, ಡೈರಿ ಟೆಕ್ನಾಲಜಿ, ಅರಣ್ಯ, ಪಶುವೈದ್ಯಕೀಯ, ಫಿಶರೀಸ್, ರೇಷ್ಮೇ, ನ್ಯೂಟ್ರಿಷಿಯನ್ ಮತ್ತು ಡೈಯಟ್, ಬಿ ಫಾರ್ಮಾ, ಎಂ ಫಾರ್ಮಾ, ಡಿ ಫಾರ್ಮಾ ಆಯ್ಕೆಯಾದಂತಹ ವಿದ್ಯಾರ್ಥಿಗಳು ಈ ಹಿಂದೆ ಪಡೆದಿರುವ ಸಾಲದ ಮೊತ್ತ ಶೇ.12% ರಷ್ಟು ಮೊತ್ತ ಪಾವತಿಸಬೇಕು. ಇದರ ಆಧಾರದ ಮೇಲೆ ಅರಿವು ಸಾಲವನ್ನು ನವೀಕರಿಸಲಾಗುವುದು. ಇದುವರೆಗೂ ಅರಿವು ಸಾಲ ಪಡೆದ ಬೇರೆ ಬೇರೆ ವರ್ಷಗಳಲ್ಲಿ  ವಿದ್ಯಾಭ್ಯಾಸ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಸಹ ಹೊಸದಾಗಿ ಅರ್ಜಿ ಸಲ್ಲಿಸಬಹುದು.
ಆಸಕ್ತರು ಸಂಬಂಧಪಟ್ಟ ಎಲ್ಲಾ ದಾಖಲೆಗಳ ಸಹಿತ ಕೆ.ಎಂ.ಡಿ.ಸಿ ವೆಬ್ ಸೈಟ್  https://kmdconline.karnataka.gov.in     ಮುಖಾಂತರ ಡಿ.03ರ ಒಳಗೆ ಆನ್‍ಲೈನ್ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 8277799990 ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

 

- Advertisement - 

Share This Article
error: Content is protected !!
";