ಕಾಫಿ ಎಸ್ಟೇಟ್ ಸೂಪರ್ವೈಸರ್ ಸರ್ಟಿಫಿಕೇಟ್ ಮತ್ತು ಡಿಪ್ಲೋಮಾ ಕೋರ್ಸ್‍ಗೆ ಅರ್ಜಿ ಆಹ್ವಾನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿಕ್ಕಮಗಳೂರಿನ
ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆಯಿಂದ ಕಾಫಿ ಎಸ್ಟೇಟ್ ಸೂಪರ್ವೈಸರ್ ಸರ್ಟಿಫಿಕೇಟ್ ಕೋರ್ಸ್ ಮತ್ತು ಡಿಪ್ಲೋಮಾ ಕೋರ್ಸ್ಗಳಿಗೆ  ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕಾಫಿ ಎಸ್ಟೇಟ್ ಸೂಪರ್ವೈಸರ್ ಸರ್ಟಿಫಿಕೇಟ್ ಕೋರ್ಸ್ ಒಂದು ವರ್ಷದ ಸಮಗ್ರ ತರಬೇತಿ ಯೋಜನೆಯಾಗಿದ್ದು, ಇದು ಕಾಫಿ ತೋಟಗಳಿಗೆ ಪರಿಣತಿ ಹೊಂದಿದ ಸೂಪರ್ವೈಸರ್ಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಕೋರ್ಸ್ನಿಂದ ಕ್ಷೇತ್ರ ಕಾರ್ಯ ಮತ್ತು ಪ್ರಾಯೋಗಿಕ ಅನುಭವಕ್ಕಾಗಿ ಕ್ಷೇತ್ರ ಮಟ್ಟದಲ್ಲಿ ಇನ್ನೂ ಒಂದು ವರ್ಷದ ಇಂಟರ್ನ್ಶಿಪ್ನ್ನು ಒಳಗೊಂಡಿದೆ.

ಅದೇ ರೀತಿ ಕಾಫಿ ಎಸ್ಟೇಟ್ ನಿರ್ವಹಣೆಯ ಡಿಪ್ಲೋಮಾ ಕೋರ್ಸ್ 2 ವರ್ಷದ ಅವಧಿಯದ್ದಾಗಿದ್ದು, ಕಾಫಿ ಎಸ್ಟೇಟ್ ನಿರ್ವಹಣೆಯಲ್ಲಿ ಪರಿಣತಿ ಹೊಂದಿದ ತಜ್ಞರನ್ನು ತರಬೇತಿಗೊಳಿಸಲು ಉದ್ದೇಶಿಸಲಾಗಿದೆ.

ಕಾಫಿ ಎಸ್ಟೇಟ್ ಸೂಪರ್ವೈಸರ್ ಸರ್ಟಿಫಿಕೇಟ್ ಕೋರ್ಸ್ಗೆ ಸೇರಬಯಸುವವರು ಕನಿಷ್ಠ 8ನೇ ತರಗತಿ ಉತ್ತೀರ್ಣ ಅಥವಾ 10 ನೇ ತರಗತಿ ಅನುತ್ತೀರ್ಣರಾಗಿರಬಹುದು. ವಯೋಮಿತಿಯು 18 ರಿಂದ 35 ವರ್ಷದೊಳಗಿರಬೇಕು, ಹಾಗೂ ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ಇರುತ್ತದೆ. ಕೋರ್ಸ್ ಅವಧಿಯು ಒಂದು ವರ್ಷಗಳಾಗಿರುತ್ತದೆ. ಪ್ರಾದೇಶಿಕ ಭಾಷೆಗಳಾದ ಕನ್ನಡ, ತಮಿಳ್, ತೆಲುಗು, ಮಲಯಾಳಂ ಮಾಧ್ಯಮದಲ್ಲಿ ಬೋಧನೆ ಮಾಡಲಾಗುವುದು.

ಕೋರ್ಸ್ ಶುಲ್ಕವು ಪ್ರತಿ ಅಭ್ಯರ್ಥಿಗಳಿಗೆ ರೂ.6,000 ಹಾಗೂ ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ರೂ.3,000 ನಿಗಧಿಪಡಿಸಲಾಗಿದೆ. ಮೊದಲ ವರ್ಷದ ತರಬೇತಿಯಲ್ಲಿ ರೂ.5,000 ತಿಂಗಳ ಭತ್ಯೆ ಹಾಗೂ ಇಂಟರ್ನ್ಶಿಪ್ ಅವಧಿಯಲ್ಲಿ ರೂ.6,000 ತಿಂಗಳ ಭತ್ಯೆ ನೀಡಲಾಗುತ್ತದೆ.

ಕಾಫಿ ಎಸ್ಟೇಟ್ ನಿರ್ವಹಣೆಯ ಡಿಪ್ಲೋಮಾ ಕೋರ್ಸ್ಗೆ ಸೇರಬಯಸುವವರು ಕನಿಷ್ಠ 12ನೇ ತರಗತಿ ಉತ್ತೀರ್ಣರಾಗಿರಬೇಕು, ವಯೋಮಿತಿಯು 18 ರಿಂದ 35 ವರ್ಷದೊಳಗಿರಬೇಕು, ಹಾಗೂ ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ಇರುತ್ತದೆ. ಕೋರ್ಸ್ ಅವಧಿಯು ಎರಡು ವರ್ಷಗಳಾಗಿರುತ್ತದೆ. ಇಂಗ್ಲೀಷ್ ಮಾಧ್ಯಮದಲ್ಲಿ ಬೋಧನೆ ಮಾಡಲಾಗುವುದು.

ಕೋರ್ಸ್ ಶುಲ್ಕವು ಪ್ರತಿ ಸಾಮಾನ್ಯ ಅಭ್ಯರ್ಥಿಗಳಿಗೆ ರೂ.10,000 ಹಾಗೂ ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ರೂ.5,000 ನಿಗಧಿಪಡಿಸಲಾಗಿದೆ. ಶುಲ್ಕವನ್ನು ಎರಡು ಕಂತುಗಳಲ್ಲಿ ಪಾವತಿಸಬಹುದು. ಆರ್ಥಿಕವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳು (ಭಾರತ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ) ಮತ್ತು ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ಮೊದಲ ವರ್ಷದಲ್ಲಿ ರೂ.6,000 ತಿಂಗಳ ಭತ್ಯೆ ನೀಡಲಾಗುತ್ತದೆ. ಹಾಗೂ ಎರಡನೇ ವರ್ಷದಲ್ಲಿ ಎಲ್ಲಾ ಅಭ್ಯರ್ಥಿಗಳಿಗೆ ರೂ.10,000 ತಿಂಗಳ ಭತ್ಯೆ ನೀಡಲಾಗುತ್ತದೆ.

ಕಾಫಿ ಎಸ್ಟೇಟ್ ನಿರ್ವಹಣೆಯ ಡಿಪ್ಲೋಮಾ ಕೋರ್ಸ್ಗೆ ಕೇವಲ 10 ಅಭ್ಯರ್ಥಿಗಳಿಗೆ ಪ್ರವೇಶವಿರುತ್ತದೆ ಹಾಗೂ ಕಾಫಿ ಬೆಳೆಯುವ ಪ್ರದೇಶಗಳಿಂದ ಬಂದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ಕಾಫಿ ಎಸ್ಟೇಟ್ ಸೂಪರ್ವೈಸರ್ ಸರ್ಟಿಫಿಕೇಟ್ ಕೋರ್ಸ್ಗೆ ಸೇರಬಯಸುವವರಿಗೆ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಅದೇ ರೀತಿ ಕಾಫಿ ಎಸ್ಟೇಟ್ ನಿರ್ವಹಣೆಯ ಡಿಪ್ಲೋಮಾ ಕೋರ್ಸ್ಗೆ ಸೇರಬಯಸುವವರಿಗೆ ಬೆಂಗಳೂರನ್ನು ಹೊರತುಪಡಿಸಿ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು.

ಎರಡೂ ಕೋರ್ಸ್ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಕಾಫಿ ಮಂಡಳಿ ವತಿಯಿಂದ ಪ್ರಮಾಣಪತ್ರವನ್ನು ನೀಡಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಜಾಲತಾಣ https://coffeeboard.gov.in  ನಿಂದ ಡೌನ್ಲೋಡ್ ಮಾಡಿಕೊಂಡು ಸಮರ್ಪಕ ದಾಖಲೆಗಳೊಂದಿಗೆ ಭರ್ತಿಯಾದ ಅರ್ಜಿಯನ್ನು  [email protected]  ಗೆ ಮೇಲ್ ಮೂಲಕ ಸ್ಕ್ಯಾನ್ ಮಾಡಿ, 2024ನೇ ಡಿಸೆಂಬರ್ 31 ಒಳಗಾಗಿ ಮೂಲ ಅರ್ಜಿ ಪ್ರತಿ ಹಾಗೂ ಸಂಬಂಧಿತ ದಾಖಲೆಗಳನ್ನು ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆ, ಕಾಫಿ ರಿಸರ್ಚ್ ಸ್ಟೇಷನ್, ಚಿಕ್ಕಮಗಳೂರು ಜಿಲ್ಲೆ577117 ವಿಳಾಸಕ್ಕೆ ಸಲ್ಲಿಸಬೇಕು.

ಅರ್ಹತಾ ಪಟ್ಟಿ ಹೊಂದಿದ ಅಭ್ಯರ್ಥಿಗಳನ್ನು ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಹಿತಿ ನೀಡಿ, ಮುಂದಿನ ಸೂಚನೆಗಾಗಿ ಸಂಶೋಧನಾ ನಿರ್ದೇಶಕರು, ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆ ಚಿಕ್ಕಮಂಗಳೂರಿಗೆ ವರದಿ ಮಾಡಲು ಸೂಚಿಸಲಾಗುತ್ತದೆ.
ಕಾಫಿ ಮಂಡಳಿಯು ಯಾವುದೇ ಹಂತದಲ್ಲಾದರೂ ಅಧಿಸೂಚನೆಯನ್ನು ಹಿಂಪಡೆಯಲು/ರದ್ದುಗೊಳಿಸಲು ಹಕ್ಕು ಹೊದಿಸುತ್ತದೆ ಎಂದು ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆ, ಚಿಕ್ಕಮಂಗಳೂರಿನ ಸಂಶೋಧನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

- Advertisement -  - Advertisement - 
Share This Article
error: Content is protected !!
";