ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸೆರೆಬ್ರಲ್ ಪಾಲ್ಸಿ, ಮಸ್ಕುಲರ್ ಡೆಸ್ಟೋಫಿ, ಪಾರ್ಕಿನ್ಸನ್ಸ್ ಮತ್ತು ಮಲ್ಟಿಪಲ್ ಸ್ಕೊಲರೊಸಿಸ್ ನಂತಹ ಗಂಭೀರ ಕಾಯಿಲೆಯಿಂದ ಬಳಲುತ್ತಿರುವರನ್ನು ಆರೈಕೆ ಮಾಡುತ್ತಿರುವರಿಗೆ, ಪ್ರತಿ ಮಾಹೆ ರೂ.1000 ಪ್ರೋತ್ಸಾಹ ಧನ ನೀಡಲು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ ಆಫ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಯೋಜನೆಯ ಲಾಭ ಪಡೆಯಲು ವಿಕಲಚೇತನರ ಆಧಾರ ಹಾಗೂ ವಿಶೇಷ ಗುರುತಿನ ಚೀಟಿ, ವೈದ್ಯಕೀಯ, ಜಾತಿ, ಆದಾಯ, ನಿವಾಸಿ ಧೃಡೀಕರಣ ಪ್ರಮಾಣ ಪತ್ರ, ಇತ್ತೀಚಿನ ಭಾವಚಿತ್ರ ಹಾಗೂ ಆರೈಕೆದಾರರ ಬ್ಯಾಂಕ್ ಖಾತೆ ಪುಸ್ತಕದ ಪ್ರತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಅರ್ಜಿ ನಮೂನೆಯನ್ನು www.dwdsc.kar.nic.in ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ನೇರವಾಗಿ ಜಿಲ್ಲಾ, ತಾಲ್ಲೂಕು, ಗ್ರಾಮೀಣ ವಿವಿದೊದ್ದೇಶ ಪುನರ್ವಸತಿ ಕಾರ್ಯರ್ತರಿಂದ ಅರ್ಜಿ ಪಡೆದುಕೊಂಡು ಭರ್ತಿ ಮಾಡಿದ ಅರ್ಜಿಗಳನ್ನು ಅವರ ಮೂಲಕವೇ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ, ಚಿತ್ರದುರ್ಗ–9880821934, ಚಳ್ಳಕೆರ–9611266930, ಹಿರಿಯೂರು–9902888901, ಹೊಳಲ್ಕೆರೆ–9740030227, ಹೊಸದುರ್ಗ–9741829990, ಮೊಳಕಾಲ್ಮೂರು 9742725576 ಹಾಗೂ ಜಿಲ್ಲಾ ಕಚೇರಿ ದೂರವಾಣಿ ಸಂಖ್ಯೆ–08194-235284 ಸಂಪರ್ಕಿಸುವAತೆ ಅಂಗವಿಕಲ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.