ಸಂಪಾದಕ ರತ್ನ’ ಪ್ರಶಸ್ತಿಗೆ ಅರ್ಜಿ ಆಹ್ವಾನ

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು:
ಕರ್ನಾಟಕ ಕಾರ್ಯನಿರತ ದಿನ ಪತ್ರಿಕೆಗಳ ಸಂಪಾದಕರ ಸಂಘ ಜಿಲ್ಲಾ ಘಟಕದ ವತಿಯಿಂದ
2024-25ನೇ ಸಾಲಿನ ಸಂಪಾದಕ ರತ್ನದತ್ತಿ ನಿಧಿ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ವಿಜಯ ಮುಗಿಲು ಕನ್ನಡ ದಿನಪತ್ರಿಕೆ ಉಪ ಸಂಪಾದಕ ಹೆಚ್.ಹನುಮಂತಯ್ಯ ಅವರು ದತ್ತಿನಿಧಿ ಸ್ಥಾಪಿಸಿದ್ದು, ಜಿಲ್ಲಾ ಮಟ್ಟದ ದಿನಪತ್ರಿಕೆಗಳು ಹಾಗೂ ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರು ಹಾಗೂ ಉಪ ಸಂಪಾದಕರು/ ಸಹ ಸಂಪಾದಕರು ತಮ್ಮ ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಪ್ರಕಟಿತ ಲೇಖನ/ ವರದಿಗಳಿಗೆ ಪ್ರಶಸ್ತಿ ನೀಡಲಾಗುವುದು.

- Advertisement - 

ಅತ್ಯುತ್ತಮ ಲೇಖನ/ಅಂಕಣ/ ಸಂಪಾದಕೀಯ/ಪರಿಣಾಮಕಾರಿ ವರದಿಗೆ ರಾಜ್ಯ ಮಟ್ಟದ  ಸಂಪಾದಕ ರತ್ನ ಪ್ರಶಸ್ತಿನೀಡಲಾಗುವುದು ಪ್ರಶಸ್ತಿಯು ನಗದು, ಪ್ರಶಸ್ತಿ ಫಲಕ ಒಳಗೊಂಡಿದ್ದು, ಈ ಪ್ರಶಸ್ತಿಗೆ ಆಸಕ್ತ ಸಂಪಾದಕರು, ಉಪ ಸಂಪಾದಕರು /ಸಹ ಸಂಪಾದಕರು  2024-25ನೇ ಸಾಲಿನಲ್ಲಿ  ಪ್ರಕಟವಾಗಿರುವ ತಮ್ಮ  ಲೇಖನ-ವರದಿಯನ್ನು ಕಳುಹಿಸಬಹುದು.

ಸಂಪಾದಕರು ಹಾಗೂ ಉಪ ಸಂಪಾದಕರು/ಸಹ ಸಂಪಾದಕರು ಹೆಸರು (ಬೈಲೈನ್) ಬರೆದಿರುವ ವರದಿ ಲೇಖನಿಗಳಿಗೆ ಮಾತ್ರ ಪ್ರಶಸ್ತಿಗೆ ಅವಕಾಶ ಇದೆ. ಲೇಖನ-ವರದಿಗಳಲ್ಲಿ ಹೆಸರು (ಬೈಲೈನ್) ಪ್ರಕಟವಾಗದಿದ್ದಲ್ಲಿ ಸಂಬಂಧಿಸಿದ ಪತ್ರಿಕೆ ಕಳುಹಿಸಬೇಕು.

- Advertisement - 

ವಿಶೇಷ ಸೂಚನೆ:
ಸಂಘದ ಸದಸ್ಯರಿಗೆ ಹಾಗೂ ಸದಸ್ಯತ್ವ ನವೀಕರಣಗೊಂಡವರಿಗೆ ಮಾತ್ರ ಅವಕಾಶ ಇದೆ. ಪ್ರಕಟಿತ ವರದಿ
, ಲೇಖನಗಳ ಪತ್ರಿಕೆಗಳ ಪ್ರತಿಗಳೊಂದಿಗೆ  2025 ಡಿ.10ರೊಳಗೆ ಟಿ.ಎಸ್.ಕೃಷ್ಣಮೂರ್ತಿ,

 ರಾಜ್ಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ, ಹಟ್ ಹೋಟೆಲ್ ಮುಂಭಾಗ, 2ನೇ ಕ್ರಾಸ್, ಎಂ.ಜಿ.ರಸ್ತೆ, ತುಮಕೂರು- 572101, ಮೊ:  9743340694.ಈ ವಿಳಾಸಕ್ಕೆ  ಕಳುಹಿಸಿಕೊಡಬೇಕು.

 ಸಂಘದ ಐಡಿ ಕಾರ್ಡ್ ಜೆರಾಕ್ಸ್, ಪತ್ರಿಕೆ, ತಮ್ಮ ಭಾವ ಚಿತ್ರ (ಪಾಸ್ ಪೋರ್ಟ್ ಸೈಜ್) ಕಳಿಸಿಕೊಡತಕ್ಕದ್ದು. ಲೇಖನ ವರದಿಗಳ ಲಕೋಟೆಯ ಮೇಲೆ “ಸಂಪಾದಕ ರತ್ನ ದತ್ತಿನಿಧಿ  ಪ್ರಶಸ್ತಿ” ಗೆ ಅರ್ಜಿ ಎಂದು ನಮೂದಿಸಿರಬೇಕೆಂದು ಜಿಲ್ಲಾಧ್ಯಕ್ಷ ಜಿ.ಕರುಣಾಕರ ಮೊ.9880079812 ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎನ್.ಮಂಜುನಾಥ ಮೊ.9986673759 ಪ್ರಕಟಣೆ ಮೂಲಕ ತಿಳಿಸಿದ್ದಾರೆ.

 

Share This Article
error: Content is protected !!
";