ವೃತ್ತಿಪರರಿಗೆ ಉಚಿತ ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ (ಎಐ) ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಗೂಗಲ್ ಮತ್ತು ಯೂಟ್ಯೂಬ್ ಸಹಯೋಗದೊಂದಿಗೆ ದೇಶಾದ್ಯಂತ ಮಾಧ್ಯಮ ಮತ್ತು ಮನರಂಜನಾ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ವೃತ್ತಿಪರರು
, ಸೃಜನಶೀಲರು (Creators) ಮತ್ತು ಡೆವಲಪರ್‍ಗಳಿಗಾಗಿ ವಿಶೇಷವಾದ ಎಐ ಸ್ಕಿಲ್ಲಿಂಗ್ ಪ್ರೋಗ್ರಾಂಅನ್ನು ಹಮ್ಮಿಕೊಂಡಿದೆ.

ಭಾರತದ ಸೃಜನಶೀಲ ಆರ್ಥಿಕತೆಯನ್ನು ಬಲಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ರೂಪಿಸಲಾಗಿದ್ದು, ರಾಜ್ಯದ ಅಭ್ಯರ್ಥಿಗಳು ಈ ಸದವಕಾಶವನ್ನು ಬಳಸಿಕೊಳ್ಳಬಹುದು.

- Advertisement - 

ತರಬೇತಿಯ ಪ್ರಮುಖ ವಿವರಗಳು:
ಈ ಕಾರ್ಯಕ್ರಮದ ಅಡಿಯಲ್ಲಿ ಉನ್ನತ ಮಟ್ಟದ ಎಐ ಕೋರ್ಸ್‍ಗಳಿಗೆ ಉಚಿತ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದ್ದು
, ತರಬೇತಿಯು ಎರಡು ಮುಖ್ಯ ಹಂತಗಳಲ್ಲಿ ನಡೆಯಲಿದೆ:

Foundational AI & Prompting:  ಇದರಲ್ಲಿ ಜೆನೆರೇಟಿವ್ ಎಐ ಪರಿಕರಗಳನ್ನು ಬಳಸಿ ಕಥೆ ಹೇಳುವಿಕೆ, ಸೃಜನಾತ್ಮಕ ವಿಚಾರಗಳ ವಿನಿಮಯ ಮತ್ತು ವಿಷಯ ಅಭಿವೃದ್ಧಿ (Content Development) ಕುರಿತು ಕಲಿಸಲಾಗುವುದು. ಇದು ‘Google AI Essentials’ ಮತ್ತು ‘Prompting Essentials’ ಪ್ರಮಾಣಪತ್ರಗಳನ್ನು ಒಳಗೊಂಡಿದೆ.

- Advertisement - 

Generative AI Leader (GAIL):
ಇದು ವೃತ್ತಿಪರರಿಗಾಗಿ ವಿನ್ಯಾಸಗೊಳಿಸಲಾದ ಕೋರ್ಸ್ ಆಗಿದ್ದು
, ಉದ್ಯಮದಲ್ಲಿ ಎಐನ ಮೌಲ್ಯ ಮತ್ತು ಅದರ ಜವಾಬ್ದಾರಿಯುತ ಬಳಕೆಯ ಬಗ್ಗೆ ತರಬೇತಿ ನೀಡುತ್ತದೆ.

ಮೊದಲ ಹಂತದ ತರಬೇತಿ ಮುಗಿಸಿದವರಿಗೆ ‘Vertex AI’, ‘Gemini’ ಮತ್ತು ‘Google Cloud’ ನಂತಹ ಮುಂದುವರಿದ ತಂತ್ರಜ್ಞಾನಗಳ ಬಗ್ಗೆ ಎರಡನೇ ಹಂತದಲ್ಲಿ ಪ್ರಾಯೋಗಿಕ ತರಬೇತಿ ನೀಡಲಾಗುವುದು.

ನೋಂದಣಿ ಪ್ರಕ್ರಿಯೆ:
ಆಸಕ್ತ ಅಭ್ಯರ್ಥಿಗಳು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಮತ್ತು ನೋಂದಣಿಗಾಗಿ ಅಧಿಕೃತ ವೆಬ್‍ಸೈಟ್:
https://aiskillhouse.iict.org/   ಗೆ ಭೇಟಿ ನೀಡಬಹುದು. 

ಮಾಧ್ಯಮ ಕ್ಷೇತ್ರದಲ್ಲಿ ಭವಿಷ್ಯದ ತಂತ್ರಜ್ಞಾನಕ್ಕೆ ಪೂರಕವಾದ ಕೌಶಲ್ಯಗಳನ್ನು ಪಡೆಯಲು ಇದು ಉತ್ತಮ ಅವಕಾಶವಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Share This Article
error: Content is protected !!
";