ಬ್ರಾಹ್ಮಣರಿಂದ ಸಾಲ, ಸಹಾಯಧನ ಯೋಜನೆಗೆ ಅರ್ಜಿ ಆಹ್ವಾನ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ 2025-26 ನೇ ಸಾಲಿನಲ್ಲಿ ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರು ಸ್ವಯಂ ಉದ್ಯೋಗ ಕೈಗೊಳ್ಳಲು ನೇರ ಸಾಲ, ಸಹಾಯಧನ ಮಂಜೂರು ಮಾಡಲು ಉದ್ದೇಶಿಸಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

      ಹಸು ಸಾಕಾಣಿಕೆ, ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆ, ಹೋಟೆಲ್ ಉದ್ಯಮ, ಟ್ಯಾಕ್ಸಿ ಇತ್ಯಾದಿ ವ್ಯಾಪಾರ ವಹಿವಾಟು ಕೈಗೊಳ್ಳಲು ಕನಿಷ್ಟ 01 ಲಕ್ಷ ರೂ. ಹಾಗೂ ಗರಿಷ್ಟ 02 ಲಕ್ಷ ರೂ. ಆರ್ಥಿಕ ನೆರವು ಒದಗಿಸಲಾಗುವುದು.  ಶೇ. 4 ರ ವಾರ್ಷಿಕ ಬಡ್ಡಿದರದಲ್ಲಿ 20 ಸಾವಿರ ರೂ. ಗಳ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.

- Advertisement - 

     ಅರ್ಜಿ ಸಲ್ಲಿಸಲು ಬ್ರಾಹ್ಮಣ ಸಮುದಾಯದ ಸಾಮಾನ್ಯ ವರ್ಗಕ್ಕೆ ಸೇರಿದ ಅರ್ಜಿದಾರರು ಚಾಲ್ತಿಯಲ್ಲಿರುವ ಆರ್ತಿಕವಾಗಿ ಹಿಂದುಳಿದ ಪ್ರಮಾಣ ಪತ್ರ (ಇಡಬ್ಲ್ಯೂಎಸ್) ಹೊಂದಿರಬೇಕು.  ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.  ವಯೋಮಿತಿ 18 ರಿಂದ 65 ವರ್ಷದೊಳಗಿರಬೇಕು.  ಮಹಿಳೆಯರಿಗೆ ಶೇ. 33 ಮತ್ತು ದಿವ್ಯಾಂಗದವರಿಗೆ ಶೇ. 5 ಮೀಸಲಾತಿ ನೀಡಲಾಗುವುದು.  ಆಧಾರ್‍ಗೆ ಮೊಬೈಲ್ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಹೊಂದಿರಬೇಕು.  ಮಾಹಿತಿಯನ್ನು  www.ksbdb.gov.in
ಸಂಪರ್ಕಿಸಬಹುದು.  

ಆಸಕ್ತರು ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಅ. 31 ರ ಒಳಗಾಗಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗೆ 8029605888 ಅಥವಾ 8762249230 ಕ್ಕೆ ಅಥವಾ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿ, ಶ್ರೀ ಹರಿನಿವಾಸಂ, 3ನೇ ಮುಖ್ಯ ರಸ್ತೆ, ಸರಸ್ವತಿ ಪುರಂ ಬಡಾವಣೆ, ಚಿತ್ರದುರ್ಗ ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

- Advertisement - 

 

 

 

Share This Article
error: Content is protected !!
";