ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತೋಟಗಾರಿಕೆ ಇಲಾಖೆ ವತಿಯಿಂದ 2025ನೇ ಜನವರಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ 217ನೇ ಫಲಪುಷ್ಪ ಪ್ರದರ್ಶನವನ್ನು ಬೆಂಗಳೂರಿನ ಲಾಲ್‍ಬಾಗ್‍ನಲ್ಲಿ ಹಮ್ಮಿಕೊಳ್ಳಲಾಗಿದೆ.
ಪ್ರದರ್ಶನದ ಪ್ರಯುಕ್ತ ಸರ್ಕಾರಿ/ ಖಾಸಗಿ ಅಲಂಕಾರಿಕ ತೋಟಗಾರಿಕಾ ಆಸಕ್ತರು ತಮ್ಮ ಮನೆ, ಕಚೇರಿ ಅಥವಾ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಲಂಕಾರಿಕ ತೋಟಗಳು, ತಾರಸಿ, ಕೈತೋಟಗಳು, ತರಕಾರಿ, ಔಷಧಿ ಗಿಡಗಳು, ಕುಂಡಗಳಲ್ಲಿ ಬೆಳೆದ ವಿವಿಧ ಜಾತಿಯ ಗಿಡಗಳು, ಇಕೆಬಾನ, ಜಾನೂರ್, ಥಾಯ್ ಆರ್ಟ್ ಮತ್ತು ಪೂರಕ ಕಲೆಗಳಿಗೆ ಸಂಬಂಧಿಸಿದಂತೆ ಸ್ಪರ್ಧೆಗಳನ್ನು 2025 ರ ಜನವರಿ 18 ರಂದು ಹಮ್ಮಿಕೊಳ್ಳಲಾಗಿದೆ.
ಇಕೆಬಾನ, ಜಾನೂರ್, ಥಾಯ್ ಆರ್ಟ್, ತರಕಾರಿ ಕೆತ್ತನೆ ಮತ್ತು ಇತರೆ ಪೂರಕ ಕಲೆಗಳಿಗೆ ಸಂಬಂಧಿಸಿದಂತೆ ಆಸಕ್ತರು, ಪ್ರದರ್ಶಕರಿಂದ ಅರ್ಜಿಗಳನ್ನು 2025 ಜನವರಿ 6 ರಿಂದ 10 ರವರೆಗೆ ಸ್ವೀಕರಿಸಲಾಗುವುದು. ಅರ್ಜಿಗಳನ್ನು, ತೋಟಗಾರಿಕಾ ಜಂಟಿ ನಿರ್ದೇಶಕರು (ಯೋಜನೆ) ಲಾಲ್‍ಬಾಗ್‍ನ ಬೆಂಗಳೂರು ಕಚೇರಿಯಲ್ಲಿ ಬೆಳಿಗ್ಗೆ 10 ರಿಂದ 5 ಗಂಟೆಯವರೆಗೆ ಅರ್ಜಿಗಳನ್ನು ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹೆಚ್.ಟಿ.ಗೀತಾ ಮೊಬೈಲ್ ಸಂಖ್ಯೆ: 9008433076 ಅಥವಾ ಕುಮಾರಿ ತಾರಕೇಶ್ವರಿ ಕೆ.ಆರ್. ಮೊಬೈಲ್ ಸಂಖ್ಯೆ: 8497048733, ಪುಷ್ಪಲತಾ ಎಂ. ಮೊಬೈಲ್ ಸಂಖ್ಯೆ: 8904592122 ಇವರನ್ನು ಸಂಪರ್ಕಿಸುವುದು.
ವಿವಿಧ ಅಲಂಕಾರಿಕ ತೋಟಗಳ ಸ್ಪರ್ಧೆ / ಕುಂಡಗಳಲ್ಲಿ ಬೆಳೆದ ಗಿಡಗಳ ಸ್ಪರ್ಧೆಗೆ ಅರ್ಜಿಗಳನ್ನು ಜನವರಿ 8 ರಿಂದ 15 ರವರೆಗೆ ಸ್ವೀಕರಿಸಲಾಗುವುದು. ಅರ್ಜಿಗಳನ್ನು ತೋಟಗಾರಿಕಾ ಜಂಟಿ ನಿರ್ದೇಶಕರು (ತೋಟದ ಬೆಳೆಗಳು) ಲಾಲ್‍ಬಾಗ್, ಬೆಂಗಳೂರು ಕಚೇರಿಯಲ್ಲಿ ಅರ್ಜಿಗಳನ್ನು ಬೆಳಿಗ್ಗೆ 10 ರಿಂದ 5 ಗಂಟೆಯವರೆಗೆ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಚುಂಚಯ್ಯ ಮೊಬೈಲ್ ಸಂಖ್ಯೆ: 9916433061, ಎನ್.ಟಿ.ಸುಜಾತ ಮೊಬೈಲ್ ಸಂಖ್ಯೆ:
9901296270, ದೀಪಿಕ ಎಸ್.ಕೆ. ಮೊಬೈಲ್ ಸಂಖ್ಯೆ: 7892100304 ಇವರನ್ನು ಸಂಪರ್ಕಿಸುವುದು.
ಮಳಿಗೆಗಳ ಹಂಚಿಕೆಗಾಗಿ 2024 ನೇ ಡಿಸೆಂಬರ್ 30 ರಿಂದ 2025 ನೇ ಜನವರಿ 4 ರವರೆಗೆ ಸ್ವೀಕರಿಸಲಾಗುವುದು. ಅರ್ಜಿಗಳನ್ನು ತೋಟಗಾರಿಕಾ ಜಂಟಿ ನಿರ್ದೇಶಕರು (ಹಣ್ಣುಗಳು) ಲಾಲ್‍ಬಾಗ್‍ನ, ಬೆಂಗಳೂರು ಕಚೇರಿಯಲ್ಲಿ ಅರ್ಜಿಗಳನ್ನು ಬೆಳಿಗ್ಗೆ 10 ರಿಂದ 5 ಗಂಟೆಯವರೆಗೆ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9036986445, 9591304675, 9008094261ನ್ನು ಸಂಪರ್ಕಿಸುವಂತೆ ಲಾಲ್‍ಬಾಗ್‍ನ ಸಸ್ಯತೋಟದ ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.