ಶ್ರೇಷ್ಠ ತೋಟಗಾರಿಕಾ ರೈತ / ರೈತ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಶ್ರೇಷ್ಠ ತೋಟಗಾರಿಕಾ ರೈತ / ರೈತ ಮಹಿಳೆ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು 2025-26ರ ಸಾಲಿನಲ್ಲಿ ಡಿಸೆಂಬರ್ 21 ರಿಂದ 23 ರವರೆಗೆ ಬಾಗಲಕೋಟೆಯ ಉದ್ಯಾನಗಿರಿ ಆವರಣದಲ್ಲಿ ತೋಟಗಾರಿಕೆ ಮೇಳವನ್ನು ಹಮ್ಮಿಕೊಂಡಿದ್ದು,  ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ರಾಜ್ಯದ 24 ಜಿಲ್ಲೆಗಳ ಪ್ರತಿಯೊಂದು ಜಿಲ್ಲೆಗೆ ಒಬ್ಬರಂತೆ ಒಬ್ಬ ಶ್ರೇಷ್ಠ ತೋಟಗಾರಿಕೆ ರೈತ ಅಥವಾ ರೈತ ಮಹಿಳೆ ಆಯ್ಕೆ ಮಾಡಿ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಗುವುದು.

- Advertisement - 

ಬಾಗಲಕೋಟೆ ಜಿಲ್ಲೆಯ ತೋಟಗಾರಿಕೆ ಸಾಧಕ ರೈತ ಅಥವಾ ರೈತ ಮಹಿಳೆ ನಿಗದಿತ ಅರ್ಜಿ ನಮೂನೆಯಲ್ಲಿ ಸಂಪೂರ್ಣ ಮಾಹಿತಿಯನ್ನು ಛಾಯಾ ಚಿತ್ರಗಳ ಮೂಲಕ ದೃಢೀಕರಿಸಿ ಸಲ್ಲಿಸಬೇಕು. ಬಾಗಲಕೋಟ ಜಿಲ್ಲೆಯ ರೈತ ಅಥವಾ ರೈತ ಮಹಿಳೆ ಅರ್ಜಿ ನಮೂನೆಯನ್ನು ಡೀನ್, ತೋಟಗಾರಿಕೆ ಮಹಾವಿದ್ಯಾಲಯ, ಬಾಗಲಕೋಟ ಕಛೇರಿಯಿಂದ ಅಥವಾ ವಿಸ್ತರಣಾ ಮುಂದಾಳು, ವಿಸ್ತರಣಾ ನಿರ್ದೇಶನಾಲಯದಿಂದ ಅಥವಾ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತರ್ಜಾಲ www.uhsbagalkot.edu.in ಮೂಲಕವು ಪಡೆಯಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ನವೆಂಬರ್ 05 ರೊಳಗಾಗಿ ಡೀನ್, ತೋಟಗಾರಿಕೆ ಮಹಾವಿದ್ಯಾಲಯ, ಬಾಗಲಕೋಟ ಕಚೇರಿಗೆ ಸಲ್ಲಿಸಬೇಕು.

ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ನಿಬಂಧನೆಗಳು:
ಅರ್ಜಿದಾರರು ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದ ಯಾವುದೇ ಕೃಷಿ/ ತೋಟಗಾರಿಕೆ/ಪಶು ಸಂಗೋಪನೆ / ಐಸಿಎಆರ್  ಪ್ರಶಸ್ತಿಗಳನ್ನು ತಮ್ಮ ಹಾಗೂ ತಮ್ಮ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ಪಡೆದಿರಬಾರದು.

- Advertisement - 

ಅರ್ಜಿದಾರರು ನಿಗದಿತ ಅರ್ಜಿ ನಮೂನೆಯಲ್ಲಿ ಸಂಪೂರ್ಣ ವಿವರಗಳನ್ನು ಒಳಗೊಂಡ ಮಾಹಿತಿಯನ್ನು ಛಾಯಾಚಿತ್ರಗಳೊಂದಿಗೆ ಸಲ್ಲಿಸಬೇಕು. ಸಲ್ಲಿಕೆಯಾದ ಅರ್ಜಿಗಳನ್ನು ಆಯ್ಕೆ ಸಮಿತಿ ಪರೀಶಿಲಿಸಿ ಕಿರುಪಟ್ಟಿ ಮಾಡಿದ ಮೂರು  ಕ್ಷೇತ್ರಗಳಿಗೆ ಮಾತ್ರ ಕ್ಷೇತ್ರ ವಿಕ್ಷಣೆ ಕೈಗೊಳ್ಳಲಾಗುವುದು. ಆಯ್ಕೆಯು ವಿಶ್ವವಿದ್ಯಾಲಯದ ನಿಯಮ ಹಾಗೂ ಆಯ್ಕೆ ಸಮಿತಿಯ ನಿರ್ಧಾರಕ್ಕೆ ಒಳಪಟ್ಟಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಡಾ. ಬಾಲಾಜಿ ಕುಲಕರ್ಣಿ, ಡೀನ್, ತೋಟಗಾರಿಕೆ ಮಹಾವಿದ್ಯಾಲಯ, ಬಾಗಲಕೋಟೆ ಇವರ ಮೊಬೈಲ್ 9845655856 ಅಥವಾ ಡಾ. ಡಿ. ಎಲ್. ರುದ್ರೇಶ್., ವಿಸ್ತರಣಾ ಮುಂದಾಳು, ವಿಸ್ತರಣಾ ನಿರ್ದೇಶನಾಲಯ, ಇವರ ಮೊಬೈಲ್: 9538243305 ಸಂಪರ್ಕಿಸುವಂತೆ ಅಧಿಕೃತ ಪ್ರಕಟಣೆ ತಿಳಿಸಿದೆ.

 

Share This Article
error: Content is protected !!
";