ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ವತಿಯಿಂದ 2025-26ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಜಿಲ್ಲೆಯ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮಾರ್ಚ್ 07 ಅರ್ಜಿ ಸಲ್ಲಿಸಲು ಕೊನೆಯ ದಿನ.
ಗ್ರಾಮೀಣ ಭಾಗದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು ಮತ್ತು ಪಶುಸಂಗೋಪನೆಯಲ್ಲಿ ತೊಡಗಿಸಿಕೊಂಡ ಆಸಕ್ತರನ್ನು ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಸುವವರು 18 ರಿಂದ 60 ವರ್ಷ ಒಳಗಿನವರು ಅರ್ಹರಾಗಿರುತ್ತಾರೆ. ಈ ಕಾರ್ಯಕ್ರಮದಲ್ಲಿ ಸರ್ಕಾರದ ನಿಯಮದಂತೆ ಮಹಿಳೆಯರಿಗೆ ಶೇ.33.3 ಮತ್ತು ವಿಶೇಷ ಚೇತನರಿಗೆ ಶೇ.3 ಆದ್ಯತೆ ನೀಡಲಾಗುವುದು. ಈ ಯೋಜನೆಯಡಿ 10 ಸುಧಾರಿತ ಹೆಣ್ಣು ಕುರಿ/ಮೇಕೆ, ಮತ್ತು 01 ಟಗರು/ಹೋತಕ್ಕೆ ಒಟ್ಟು ಘಟಕ ದರ ರೂ.1,00,000/-ಗಳಿದ್ದು, ಶೇ.90ರಷ್ಟು ಸಹಾಯಧನ ಹೊಂದಿರುತ್ತದೆ.
ಚಿತ್ರದುರ್ಗ ಜಿಲ್ಲೆಗೆ 25 ಪರಿಶಿಷ್ಟ ಜಾತಿ ಮತ್ತು 17 ಪರಿಶಿಷ್ಟ ಪಂಗಡ ಸೇರಿದಂತೆ ಒಟ್ಟು 42 ಗುರಿ ನಿಗಧಿಪಡಿಸಲಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 5 ಪರಿಶಿಷ್ಟ ಜಾತಿ, 4 ಪರಿಶಿಷ್ಟ ಪಂಗಡ ಸೇರಿದಂತೆ ಒಟ್ಟು 9 ಗುರಿ ನಿಗಧಿಪಡಿಸಲಾಗಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ 4 ಪರಿಶಿಷ್ಟ ಜಾತಿ, 5 ಪರಿಶಿಷ್ಟ ಪಂಗಡ ಸೇರಿದಂತೆ ಒಟ್ಟು 9 ಗುರಿ ನಿಗಧಿಪಡಿಸಲಾಗಿದೆ. ಹಿರಿಯೂರು ತಾಲ್ಲೂಕಿನಲ್ಲಿ 5 ಪರಿಶಿಷ್ಟ ಜಾತಿ, 2 ಪರಿಶಿಷ್ಟ ಪಂಗಡ ಸೇರಿದಂತೆ ಒಟ್ಟು 7 ಗುರಿ ನಿಗಧಿಪಡಿಸಲಾಗಿದೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ 5 ಪರಿಶಿಷ್ಟ ಜಾತಿ, 1 ಪರಿಶಿಷ್ಟ ಪಂಗಡ ಸೇರಿದಂತೆ ಒಟ್ಟು 6 ಗುರಿ ನಿಗಧಿಪಡಿಸಲಾಗಿದೆ. ಹೊಸದುರ್ಗ ತಾಲ್ಲೂಕಿನಲ್ಲಿ 4 ಪರಿಶಿಷ್ಟ ಜಾತಿ, 1 ಪರಿಶಿಷ್ಟ ಪಂಗಡ ಸೇರಿದಂತೆ ಒಟ್ಟು 5 ಗುರಿನಿಗಧಿಪಡಿಸಲಾಗಿದೆ. ಮೊಳಕಾಲ್ಮುರು ತಾಲ್ಲೂಕಿನಲ್ಲಿ 2 ಪರಿಶಿಷ್ಟ ಜಾತಿ, 4 ಪರಿಶಿಷ್ಟ ಪಂಗಡ ಸೇರಿದಂತೆ ಒಟ್ಟು 6 ಗುರಿ ನಿಗಧಿಪಡಿಸಲಾಗಿದೆ.
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳ ಬಗ್ಗೆ ಹಾಗೂ ಹೆಚ್ಚಿನ ವಿವರಗಳಿಗಾಗಿ ಸಹಾಯಕ ನಿರ್ದೇಶಕರು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ, ಪಶು ಆಸ್ಪತ್ರೆ ಆವರಣ, ಚಿತ್ರದುರ್ಗ ಹಾಗೂ ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ), ಆಯಾ ತಾಲ್ಲೂಕು ಪಶು ಆಸ್ಪತ್ರೆ ಇವರುಗಳನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಸಹಾಯಕ ನಿರ್ದೇಶಕಿ ಕೆ.ವಾಸಂತಿ ತಿಳಿಸಿದ್ದಾರೆ.

