ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ವಿಶ್ವ ಕನ್ನಡ ಕಲಾ ಸಂಸ್ಥೆ ಹಿರಿಯೂರು ವತಿಯಿಂದ 2026 ಮಾರ್ಚ್ 8 ಭಾನುವಾರ ಅಂತರಾಷ್ಟ್ರೀಯ ಮಹಿಳಾ ಸಮ್ಮೇಳನ ಪ್ರಯುಕ್ತ ಅರ್ಜಿ ಆಹ್ವಾನಿಸಿದೆ.
ವಿಶ್ವ ಕನ್ನಡ ಕಲಾ ಸಂಸ್ಥೆ ಹಿರಿಯೂರು ಕೇಂದ್ರ ಸಂಸ್ಥೆ ವತಿಯಿಂದ ಶಿವಶರಣೆ ಗಂಗಾಂಬಿಕೆ ಹೆಸರಿನಲ್ಲಿ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಿದ್ದು 25 ಮಹಿಳೆಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ ಈ ರವೀಶ ಅಕ್ಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ರಾಜ್ಯ ಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಗುವುದು, ಲೇಖಕಿಯರಿಗೆ ಶಿಕ್ಷಕಿಯರಿಗೆ ವೈದ್ಯಕೀಯ,ಸಾಹಿತ್ಯ, ಕ್ರೀಡಾ ಸಾಧಕರಿಗೆ ರೈತ ಮಹಿಳೆ, ಕಲಾವಿದರಿಗೆ ಹೀಗೆ ಹಲವಾರು ಸಾಧನೆ ಮಾಡಿದ ಮಹಿಳೆಯರಿಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.
ಆಸಕ್ತರು ತಮ್ಮ ಪರಿಚಯವನ್ನು(bio-data) ಸಲ್ಲಿಸಲು ಫೆಬ್ರವರಿ-10 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಲು ಕರೆ ಮಾಡುವ ಸಮಯ ಸಂಜೆ 5:30 ರಿಂದ ರಾತ್ರಿ 10:30 ಭಾನುವಾರ ಮಾತ್ರ ಬೆಳಗ್ಗೆ 8 ರಿಂದ ರಾತ್ರಿ 10: 30 ರವರೆಗೆ ಕರೆ ಮಾಡಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು 9606264265, 9611419145 ಎಂದು ಪ್ರಕಟಣೆ ತಿಳಿಸಿದ್ದಾರೆ.
ಅಂಚೆ ಮೂಲಕ ಅರ್ಜಿ ಸಲ್ಲಿಸುವವರು
ಈ ರವೀಶ,
ಕನಸು ನಿಲಯ, ಮನೆ ನಂಬರ್ 89/90, ಮಂಜುನಾಥ ನಗರ, ಅಚ್ಚುತ ನಗರ ಅಂಚೆ, ಅರ್ಚಾಯ ಕಾಲೇಜು ಹಿಂಭಾಗ, ಆಲೂರು ಸಾಸುವೆ ಘಟ್ಟ ರಸ್ತೆ, ಬೆಂಗಳೂರು-560107.
ರಾಜ್ಯ ಮಟ್ಟದ ಮಹಿಳಾ ಕವಿ ಗೋಷ್ಠಿಗೆ ಹೆಸರು ನೋಂದಣಿ ಮಾಡಿಸಲು ಮೊದಲು ಹೆಸರು ಕೊಟ್ಟವರಿಗೆ ಮೊದಲ ಅವಕಾಶ. 25 ಕ್ಕೆ ಮಹಿಳೆಯರಿಗೆ ಮಾತ್ರ ಸೀಮಿತ.

