ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಹಾಗೂ ವಿಶ್ವವಿದ್ಯಾನಿಲಯದ ಮಹಿಳಾ ಕಾಲೇಜು, ಮಲ್ಲೇಶ್ವರಂನಲ್ಲಿ ವಿವಿಧ ಸ್ನಾತಕೋತ್ತರ / ಸ್ನಾತಕ ವಿಷಯಗಳಿಗೆ 2024-25ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸ್ನಾತಕ / ಸ್ನಾತಕೋತ್ತರ ವಿಷಯಗಳ ಬೋಧನಾ ಕಾರ್ಯದ ನಿರ್ವಹಣೆಗಾಗಿ ಅತಿಥಿ ಉಪನ್ಯಾಸಕರ ಸೇವೆಯನ್ನು ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ವಿಶ್ವವಿದ್ಯಾನಿಲಯದ ವೆಬ್ಸೈಟ್ www.bcu.ac.in ನಲ್ಲಿ bcugfportal.in ಲಿಂಕ್ನ್ನು ಆಯ್ಕೆ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 21 ಸಂಜೆ 5.00 ಗಂಟೆಯೊಳಗೆ ನಿರ್ವಹಣಾ ಶುಲ್ಕ ರೂ. 200/- (SC/ST/CAT-1 Rs.100/-) ಗಳೊಂದಿಗೆ ಸಲ್ಲಿಸಬಹುದಾಗಿದೆ. ಭರ್ತಿ ಮಾಡಿದ ಅರ್ಜಿಯ ಭೌತಿಕ ಪ್ರತಿಯನ್ನು ಸೆಪ್ಟೆಂಬರ್ 26 ರೊಳಗೆ ಕುಲಸಚಿವರ ಕಛೇರಿ, ಬೆಂಗಳೂರು ನಗರ ವಿಶ್ವವಿದ್ಯಾನಿಲಯ, ಜ್ಞಾನಜ್ಯೋತಿ ಸೆಂಟ್ರಲ್ ಕಾಲೇಜ್ ಆವರಣ, ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು – 560 001ರಲ್ಲಿ ಸಲ್ಲಿಸಬಹುದಾಗಿದೆ.
ವಿಜ್ಞಾನ ವಿಷಯಗಳು : ರಸಾಯನಶಾಸ್ತ್ರ, ಜೀವರಸಾಯನಶಾಸ್ತ್ರ, ಸಸ್ಯವಿಜ್ಞಾನ, ಪ್ರಾಣಿವಿಜ್ಞಾನ, ಗಣಿತಶಾಸ್ತ್ರ, ಭೌತಶಾಸ್ತ್ರ, ಉಡುಪು ಮತ್ತು ತಂತ್ರಜ್ಞಾನ (ಯುಜಿ & ಪಿಜಿ), ಪರಿಸರ ವಿಜ್ಞಾನ, ಗಣಕ ಜ್ಞಾನ – ಎಂ.ಎಸ್ಸಿ ಗಣಕ ವಿಜ್ಞಾನ, ಬಿಸಿಎ, ಬಿಸಿಎ–Artificial Intelligence and Machine Learning ಮತ್ತು ಬಿಸಿಎ– ಡಾಟಾ ಸೈನ್ಸ್.
ಕಲಾ ವಿಷಯಗಳು: ಕನ್ನಡ, ಇಂಗ್ಲೀಷ್, ಅರ್ಥಶಾಸ್ತ್ರ, ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಸಮಾಜಕಾರ್ಯ, ಸಂವಹನ ಮತ್ತು ಪತ್ರಿಕೋದ್ಯಮ, ಜಾಗತಿಕ ಭಾಷೆಗಳು, (ಜರ್ಮನ್, ಫ್ರೆಂಚ್, ಸ್ಪ್ಯಾನಿಷ್, ಜಪಾನೀಸ್, ಕೊರಿಯನ್, ಚೈನೀಸ್), ಹಿಂದಿ.
ವಾಣಿಜ್ಯ ವಿಷಯಗಳು: ಎಂ.ಕಾಂ., ಎಂ.ಕಾಂ.(ಫೈನಾನ್ಸ್ ಮತ್ತು ಅಕೌಂಟಿಂಗ್), ಎಂ.ಕಾಂ (ಇಂಟರ್ನ್ಯಾಷನಲ್ ಬಿಸಿನೆಸ್), ಎಂ.ಟಿ.ಟಿ.ಎಂ.(ಮಾಸ್ಟರ್ ಆಫ್ ಟೂರಿಸಂ ಅಂಡ್ ಟ್ರಾವಲ್ ಮ್ಯಾನೇಜ್ಮೆಂಟ್), ಬಿ.ಕಾಂ, ಬಿ.ಕಾಂ (Accounting & Finance), ಬಿ.ಕಾಂ (Financial Technology) ಮತ್ತು ಪಿ.ಜಿ. ಡಿಪೆÇ್ಲಮಾ.
ಮ್ಯಾನೇಜ್ಮೆಂಟ್: ಬಿಬಿಎ, ಬಿಬಿಎ –Financial Analysis ಮತ್ತು ಎಂ.ಬಿ.ಎ. ((Day and Evening), ತಾತ್ಕಾಲಿಕ ಹುದ್ದೆಗಳಾದ ಪ್ರಾಂಶುಪಾಲರು (ಸಮಾಲೋಚಕರು), ಸಹಾಯಕ ನಿರ್ದೇಶಕರು–ದೈಹಿಕ ಶಿಕ್ಷಣ, ಸಹಾಯಕ ಗ್ರಂಥಪಾಲಕರು, ಸಂಯೋಜಕರು – ಸ್ನಾತಕ ಪದವಿ ಕೋರ್ಸುಗಳಿಗೆ, ಉಪನಿರ್ದೇಶಕರು – ಪ್ರಸಾರಾಂಗ (ಸಮಾಲೋಚಕರು) ಮತ್ತು ದೈಹಿಕ ಶಿಕ್ಷಣ ಶಿಕ್ಷಕರ (ವಿಶ್ವವಿದ್ಯಾನಿಲಯದ ಮಹಿಳಾ ಕಾಲೇಜು ಮತ್ತು ಸೆಂಟ್ರಲ್ ಕಾಲೇಜು ಆವರಣ) ಹುದ್ದೆಗಳಿಗೆ ಯುಜಿಸಿ ನಿಯಮಾವಳಿಗಳ ಪ್ರಕಾರ ಅರ್ಹತೆ ಪಡೆದ ಅನುಭವ ಅಧ್ಯಾಪಕರನ್ನು ನೇಮಿಸಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ತಾತ್ಕಾಲಿಕ ಹುದ್ದೆಗಳಾದ ಲ್ಯಾಬ್ ಅಸಿಸ್ಟೆಂಟ್ (ಕಂಪ್ಯೂಟರ್ ಸೈನ್ಸ್ ಲ್ಯಾಬ್) ಮತ್ತು ತಾಂತ್ರಿಕ ಸಹಾಯಕರ ಹುದ್ದೆಗಳಿಗೆ ಸಹ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಸ್ವಯಂ ವಿವರಗಳೊಂದಿಗೆ ತತ್ಸಬಂಧ ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಅನುಭವವುಳ್ಳ ಪ್ರಮಾಣ ಪತ್ರವನ್ನು ಸೆಪ್ಟೆಂಬರ್ 26 ರೊಳಗೆ ನೇರವಾಗಿ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸತಕ್ಕದ್ದು. ಹೆಚ್ಚಿನ ಮಾಹಿತಿಗಳಿಗಾಗಿ ವಿಶ್ವವಿದ್ಯಾನಿಲಯದ ವೆಬ್ಸೈಟ್ www.bcu.ac.in ನೋಡಬಹುದು ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.