ವಿಕಲಚೇತನರಿಗೆ ವಿವಿಧ ಯೋಜನೆ : ಅರ್ಜಿ ಆಹ್ವಾನ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯು 2025-26 ನೇ ಸಾಲಿನಲ್ಲಿ ವಿವಿಧ ಸೌಲಭ್ಯಗಳ ಮಂಜೂರಾತಿಗಾಗಿ, ಅರ್ಹ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲೆಯ ಅರ್ಹ ವಿಕಲಚೇತನರಿಗೆ ಶುಲ್ಕ ಮರುಪಾವತಿ, ವಿವಾಹ ಪ್ರೊತ್ಸಾಹ ಧನ, ನಿರಾಮಯ ಯೋಜನೆಗಾಗಿ ಅರ್ಜಿ ಆಹ್ವಾನಿಸಿದ್ದು, ವಿಕಲಚೇತನರು ಕಡ್ಡಾಯವಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಆಧಾರ್ ಲಿಂಕ್ ಮಾಡಿಸಿರುವ ಬ್ಯಾಂಕ್ ಖಾತೆ ಪುಸ್ತಕದ ಪ್ರತಿ, ವೈದ್ಯಕೀಯ ಪ್ರಮಾಣಪತ್ರ, ವಿಕಲಚೇತನರ ವಿಶಿಷ್ಟ ಗುರುತಿ ಚೀಟಿ,

- Advertisement - 

ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ರೇಷನ್ ಕಾರ್ಡ್, ನಿವಾಸಿ ದೃಢೀಕರಣ ಪತ್ರ ಸಲ್ಲಿಸಬೇಕು.  ಶುಲ್ಕ ಮರುಪಾವತಿ ಯೋಜನೆಗೆ ಹಿಂದಿನ ತರಗತಿಯಲ್ಲಿ ತೇರ್ಗಡೆಯಾದ ಅಂಕಪಟ್ಟಿ, ಪ್ರಸ್ತುತ ವ್ಯಾಸಂಗದ ದೃಢೀಕರಣ ಪತ್ರ, ಕಾಲೇಜಿಗೆ ಶುಲ್ಕ ಪಾವತಿ ಮಾಡಿದ ಮೂಲ ರಸೀದಿ ಸಲ್ಲಿಸಬೇಕು.

 ವಿವಾಹ ಪ್ರೋತ್ಸಾಹಧನ ಯೋಜನೆಗೆ ವಿವಾಹ ನೊಂದಣಾಧಿಕಾರಿಗಳಿಂದ ಪಡೆದ ನೊಂದಣಿ ಪ್ರಮಾಣ ಪತ್ರ, ಗೆಜೆಟೆಡ್ ಅಧಿಕಾರಿಗಳ ಸಹಿ, ಜನನ ಪ್ರಮಾಣ ಪತ್ರ, ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ನವೆಂಬರ್ 15 ಕೊನೆಯ ದಿನವಾಗಿರುತ್ತದೆ.  

- Advertisement - 

ಅರ್ಜಿ ನಮೂನೆಯನ್ನು  www.dwdsc.kar.nic.in ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು.  ಅಥವಾ ತಾ.ಪಂ. ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರಿಂದ, ನಗರ ವ್ಯಾಪ್ತಿಯಲ್ಲಿನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ಸಂಪರ್ಕಿಸಿ ಪಡೆಯಬಹುದು.

ಹೆಚ್ಚಿನ ಮಾಹಿತಿಗೆ ಚಿತ್ರದುರ್ಗ- 9880821934, ಚಳ್ಳಕೆರೆ-9611266930, ಹಿರಿಯೂರು-9902888901, ಹೊಳಲ್ಕೆರೆ-9740030227, ಹೊಸದುರ್ಗ-9741829990 ಮತ್ತು ಮೊಳಕಾಲ್ಮೂರು-9742725576 ಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Share This Article
error: Content is protected !!
";