ಮಹಿಳೆಯರಿಂದ ಉದ್ಯೋಗಿನಿ ಯೋಜನೆಗೆ ಅರ್ಜಿ ಆಹ್ವಾನ

News Desk

ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ  ಪ್ರಸಕ್ತ ಸಾಲಿನ ನಗರ ಶಿಶು ಅಭಿವೃದ್ದಿ ಯೋಜನೆಯಡಿ ಉದ್ಯೋಗಿನಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದ್ದು
, ಸೆ.20ರೊಳಗಾಗಿ ಅರ್ಜಿ ಸಲ್ಲಿಸಬಹುದು ಎಂದು ಬಳ್ಳಾರಿ ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದ್ದಾರೆ.   

       ಮಹಿಳೆಯರಿಗೆ ವ್ಯಾಪಾರ, ಸೇವಾ ಹಾಗೂ ಗುಡಿ ಕೈಗಾರಿಕ ಚಟುವಟಿಕೆಗಳಿಗೆ ಆರ್ಥಿಕ ನೀಡಲು ಉದ್ದೇಶಿಸಲಾಗಿದ್ದು, ಮಹಿಳಾ ಫಲಾನುಭವಿಗಳು ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಬೇಕಾದ ದಾಖಲೆ:
ನಿಗದಿತ ಅರ್ಜಿ ನಮೂನೆ ಭರ್ತಿ ಮಾಡಿದ ಮೂರು ಪ್ರತಿಗಳಲ್ಲಿ ಜೆರಾಕ್ಸ್
, ಜಾತಿ ಪ್ರಮಾಣ ಮತ್ತು ಕುಟುಂಬದ ವಾರ್ಷಿಕ ಆದಾಯ ಪತ್ರ, ಪ್ರಸಕ್ತ ಸಾಲಿನ ಕುಟುಂಬ ಆದಾಯ ಪ್ರಮಾಣ ಪತ್ರ (ತಹಶೀಲ್ದಾರರು ಬಳ್ಳಾರಿ ಇವರು ನೀಡಿರುವ ಆದಾಯ ಪ್ರಮಾಣ ಪತ್ರ) ವಾರ್ಷಿಕ ಆದಾಯ ರೂ.40 ಸಾವಿರ ಒಳಗಡೆ ಇರಬೇಕು.      

    ವಾಸಸ್ಥಳ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಪ್ರತಿ, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಸಲ್ಲಿಸಿರಬೇಕು. ಅರ್ಜಿ ಸಲ್ಲಿಸುವ ಮಹಿಳೆಯ ಬ್ಯಾಂಕ್ ಪಾಸ್ ಪುಸ್ತಕದಲ್ಲಿ ಆಧಾರ್ ಮತ್ತು ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು.    

      ಬ್ಯಾಂಕ್ ಜೆರಾಕ್ಸ್ ಪ್ರತಿಯಲ್ಲಿ ಆಧಾರ್ ಮತ್ತು ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ಮುದ್ರಿತಗೊಂಡಿರಬೇಕು. ತಮ್ಮ ವಾರ್ಡ್ನ ವ್ಯಾಪ್ತಿಗೆ ಒಳಪಟ್ಟ ಬ್ಯಾಂಕಿನಲ್ಲಿ ಅರ್ಜಿದಾರಳು ಖಾತೆಯನ್ನು ಕಡ್ಡಾಯವಾಗಿ ಹೊಂದಿರಬೇಕು. ಆದರೆ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಬೇಕು.  

        ಕೈಗೊಳ್ಳುವ ಆದಾಯೋತ್ಪನ್ನ ಚಟುವಟಿಕೆಗಳ ಯೋಜನಾ ವರದಿ, ತರಬೇತಿ ಅಥವಾ ಅನುಭವದ ಪತ್ರ. ಇತ್ತೀಚಿನ ಮೂರು ಭಾವ ಚಿತ್ರಗಳು. ಅರ್ಜಿ ಹಾಕುವ ಮಹಿಳಾ ಫಲಾನುಭವಿಗಳ ವಯಸ್ಸು 18 ರಿಂದ 55 ವರ್ಷಗಳ ಒಳಗಿರಬೇಕು.     

     ಹೆಚ್ಚಿನ ಮಾಹಿತಿಗಾಗಿ ದೇವಿನಗರದ ಶಿಶು ಅಭಿವೃದ್ಧಿ ಯೋಜನೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗೆ ಸಂಪರ್ಕಿಬಹುದು ಅವರು ಪ್ರಕಟಣೆಯಲ್ಲಿ ತಿಳಿಸದ್ದಾರೆ.

- Advertisement -  - Advertisement - 
Share This Article
error: Content is protected !!
";