ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸರ್ಕಾರಿ ವೀಕ್ಷಣಾಲಯ, ಬೆಂಗಳೂರು ನಗರ ಸಂಸ್ಥೆಯಲ್ಲಿರುವ ಕಾನೂನು ಸಂಘರ್ಷಕ್ಕೊಳಗಾದ ಬಾಲಕರಿಗೆ ದೈಹಿಕ ಶಿಕ್ಷಣ, ಎಜುಕೇಟರ್ ಹಾಗೂ ಸಂಗೀತ/ ಆರ್ಟ್ ಕ್ರಾಫ್ಟ್ ತರಬೇತಿ ನೀಡಲು 2024-25ನೇ ಸಾಲಿಗೆ ಅರ್ಹ ಅರೆಕಾಲಿಕ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ದೈಹಿಕ ಕಂ ಯೋಗ ಶಿಕ್ಷಕರ ಹುದ್ದೆಗೆ ಡಿಪ್ಲೋಲಮಾ ಇನ್ ದೈಹಿಕ ಶಿಕ್ಷಣ, ಸಿ.ಪಿ.ಎಡ್ ನಲ್ಲಿ ತೇರ್ಗಡೆ ಪ್ರಮಾಣ ಪತ್ರ ಹೊಂದಿರಬೇಕು. ಎಜುಕೇಟರ್ಗೆ ವಿದ್ಯಾರ್ಹತೆ ಡಿ.ಎಡ್ನಲ್ಲಿ ತೇರ್ಗಡೆ ಪ್ರಮಾಣ ಪತ್ರ ಹೊಂದಿರಬೇಕು.
ಸಂಗೀತ / ಆರ್ಟ್ / ಕ್ರಾಪ್ಟ್ಗೆ ವಿದ್ಯಾರ್ಹತೆ ಸಂಗೀತ ಕ್ಷೇತ್ರದಲ್ಲಿ ಪದವಿ ಹೊಂದಿರಬೇಕು. ಎಲ್ಲಾ ಹುದ್ದೆಗಳಿಗೆ ಮಾಹೆಯಾನ ರೂ.10,000 ವೇತನ ನೀಡಲಾಗುವುದು.
ಅರ್ಹ ಆಸಕ್ತರು ಅಕ್ಟೋಬರ್ 28 ರ ಸಂಜೆ 4 ಗಂಟೆಯೊಳಗೆ ವಿವರಗಳನ್ನೊಳಗೊಂಡ ಅರ್ಜಿ ಮತ್ತು ಅಗತ್ಯ ದಾಖಲಾತಿಗಳೊಂದಿಗೆ ಸರ್ಕಾರಿ ವೀಕ್ಷಣಾಲಯ, ಸಂತೆ ಬೀದಿ, ಸಿದ್ದಾರ್ಥ ಬಡಾವಣೆ, ಬೆಂಗಳೂರು ನಗರ ಜಿಲ್ಲೆ ಬೆಂಗಳೂರು ಕಚೇರಿಗೆ ತ್ರಿಪ್ರತಿಯಲ್ಲಿ ಸಲ್ಲಿಸುವಂತೆ ಬೆಂಗಳೂರು ಸರ್ಕಾರಿ ವೀಕ್ಷಣಾಲಯದ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.