ಉಪ ಪ್ರಧಾನ ಕಾನೂನು ಅಭಿರಕ್ಷರ ನೇಮಕಕ್ಕೆ ಅರ್ಜಿ ಆಹ್ವಾನ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿಯಲ್ಲಿನ 2 ಕಾನೂನು ನೆರವು ಉಪ ಪ್ರಧಾನ ಕಾನೂನು ಅಭಿರಕ್ಷರು ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವವರು ಅಪರಾಧಿಕ ಕಾನೂನುಗಳ ಬಗ್ಗೆ ಅತ್ಯುತ್ತಮ ಜ್ಞಾನ, ಸಂವಹನ ಕೌಶಲ್ಯ, 20 ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸಿದ ಹಾಗೂ 7 ವರ್ಷ ಸೇವಾ ಅನುಭವ ಹೊಂದಿರಬೇಕು.

- Advertisement - 

ಇದರೊಂದಿಗೆ ಕೆಲಸಕ್ಕೆ ಅಗತ್ಯ ಇರುವ ಐಟಿ ಜ್ಞಾನ ಬಲ್ಲವರಾಗಿರಬೇಕು. ಆಯ್ಕೆಯಾದವರಿಗೆ ಮಾಸಿಕ ರೂ.45,000 ಗೌರವಧನ ನೀಡಲಾಗುವುದು.

ಆಸಕ್ತರು ನಿಗದಿತ ಅರ್ಜಿ ನಮೂನೆಯಲ್ಲಿ ಸ್ವ ಅಕ್ಷರದಲ್ಲಿ ತಮ್ಮ ವೈಯಕ್ತಿಕ ವಿವರ ಭರ್ತಿ ಮಾಡಿ, ಇದೇ ನವೆಂಬರ್ 20 ಸಂಜೆ 6 ಗಂಟೆಯ ಒಳಗೆ ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳ ಕಚೇರಿಗೆ ಅರ್ಜಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.

- Advertisement - 

 

Share This Article
error: Content is protected !!
";