ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರ ವಿಶ್ವವಿದ್ಯಾನಿಲಯ “ಜ್ಞಾನಜ್ಯೋತಿ–ಸೆಂಟ್ರಲ್ಕಾಲೇಜ್ಕ್ಯಾಂಪಸ್” ಆವರಣದಲ್ಲಿ ವಿವಿಧ ಸ್ನಾತಕ ಪದವಿ ಹಂತದ ವ್ಯಾಸಂಗಕ್ಕಾಗಿ ಮತ್ತು ಬೆಂಗಳೂರು ನಗರದ ಮಲ್ಲೇಶ್ವರಂ ಬಡಾವಣೆಯ 13ನೇ ಕ್ರಾಸ್ನಲ್ಲಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವಕಾಲೇಜಿನ ಆವರಣದಲ್ಲಿ ವಿಶ್ವವಿದ್ಯಾನಿಲಯದ ಮಹಿಳಾ ಮಹಾವಿದ್ಯಾಲಯ ಕಾಲೇಜಿನ ವಿವಿಧ ಸ್ನಾತಕ ವ್ಯಾಸಂಗಗಳ ಪ್ರವೇಶಾತಿಗಾಗಿ ಆನ್ಲೈನ್ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಜ್ಞಾನಜ್ಯೋತಿ–ಸೆಂಟ್ರಲ್ ಕಾಲೇಜ್ ಕ್ಯಾಂಪಸ್ ಆವರಣದಲ್ಲಿ ಲಭ್ಯವಿರುವ ವಿಶೇಷ ಸ್ನಾತಕ ಪದವಿ ಕೋರ್ಸುಗಳು, ಭಾಷೆಗಳು : ಕನ್ನಡ, ಆಂಗ್ಲ, ಹಿಂದಿ, ಫ್ರೆಂಚ್, ಮತ್ತು ಜರ್ಮನ್ ಬಿ.ಸಿ.ಎ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ & ಮೇಷಿನ್ ಲರ್ನಿಂಗ್), ಬಿ.ಸಿ.ಎ (ಡೇಟಾ ಸೈನ್ಸ್), ಬಿ.ಎಸ್ಸಿ (ಗಣಕ ವಿಜ್ಞಾನ, ಗಣಿತಶಾಸ್ತ್ರ, ಸಂಖ್ಯಾಶಾಸ್ತ್ರ), ಬಿ.ಎಸ್ಸಿ (ಫ್ಯಾಶನ್ಅಂಡ್ಅಪ್ಯಾರಲ್ಡಿಸೈನ್), ಬಿ.ಬಿ.ಎ (ಬಿಸನೆಸ್ಅನಾಲಿಟಿಕ್ಸ್), ಇಂಡಸ್ಟ್ರಿ ಇಂಟಿಗ್ರೇಟೆಡ್ ಪ್ರೋಗ್ರಾಂಗಳು, i) ಬಿ.ಕಾಂ (ಪೈನಾನ್ಸ್&ಅಕೌಂಟಿಗ್), ii) ಬಿ.ಕಾಂ (ಪೈನಾನ್ಷಿಯಲ್ಟೆಕ್ನಾಲಜಿ) Self- Finance ಮತ್ತು ಬಿ.ಎ (ಆಂಗ್ಲ, ಫ್ರೆಂಚ್, ಇತಿಹಾಸ, ಅರ್ಥಶಾಸ್ತ್ರ, ಪತ್ರಿಕೋದ್ಯಮ) ಯಾವುದೇ 3 ವಿಷಯ
ಮಲ್ಲೇಶ್ವರಂ ಬಡಾವಣೆಯ 13ನೇ ಕ್ರಾಸ್ನಲ್ಲಿರುವ ವಿಶ್ವವಿದ್ಯಾನಿಲಯದ ಮಹಿಳಾ ಮಹಾವಿದ್ಯಾಲಯ ಕಾಲೇಜಿನ ಕೋರ್ಸುಗಳು:
ಕಡ್ಡಾಯ ವಿಷಯಗಳಾದ ಬಿ.ಸಿ.ಎ (ಸಾಮಾನ್ಯ), ಬಿ.ಬಿ.ಎ(ಸಾಮಾನ್ಯ), ಮತ್ತು ಬಿ.ಕಾಂ (ಸಾಮಾನ್ಯ) ಹಾಗೂ ಬಿ.ಎಸ್ಸಿ (ಗಣಕ ವಿಜ್ಞಾನ, ಗಣಿತಶಾಸ್ತ್ರ, ಸಂಖ್ಯಾಶಾಸ್ತ್ರ), ಬಿ.ಎ (ಆಂಗ್ಲ, ಫ್ರೆಂಚ್, ಇತಿಹಾಸ, ಅರ್ಥಶಾಸ್ತ್ರ, ಪತ್ರಿಕೋದ್ಯಮ) ಯಾವುದೇ 3 ವಿಷಯ
ಆಸಕ್ತ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಜಾಲತಾಣ : www.bcu.ac.in ಮತ್ತು ಆನ್ಲೈನ್ ನೋಂದಣಿ ಮತ್ತು ಅರ್ಜಿ ಸಲ್ಲಿಕೆಗಾಗಿ ಕರ್ನಾಟಕ ಸರ್ಕಾರದ ಯು.ಯು.ಸಿ.ಎಂ.ಎಸ್ ಪೋರ್ಟಲ್ https://uucms.karnataka.gov.in ನಲ್ಲಿ ಮಾಹಿತಿಯನ್ನು ಪಡೆಯಬಹುದಾಗಿದೆ.
ಪ್ರವೇಶಾತಿ ಪ್ರಕ್ರಿಯೆಯ 2025ನೇ ಏಪ್ರಿಲ್ 21 ರಿಂದ ಪ್ರಾರಂಭವಾಗಿದ್ದು, ಹೆಚ್ಚಿನ ವಿವರಗಳಿಗಾಗಿ ವಿಶ್ವವಿದ್ಯಾನಿಲಯದ ಜಾಲತಾಣ www.bcu.ac.in ದಿಂದ ಪಡೆಯಬಹುದಾಗಿದೆ.
ಅಗತ್ಯ ಸಂಖ್ಯೆಯ ಪ್ರವೇಶ ಅರ್ಜಿಗಳನ್ನು ಸ್ವೀಕೃತವಾಗದಿದ್ದಲ್ಲಿ ಅಂತಹ ಕೋರ್ಸುಗಳನ್ನು ಪ್ರಸ್ತುತ ವರ್ಷ ಪ್ರಾರಂಭಿಸಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.