ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಜಿಲ್ಲೆಯ ಹೆಸರಾಂತ ತಾಂತ್ರಿಕ ಶಿಕ್ಷಣ ಸಂಸ್ಥೆಯಾದ ಕಡೂರಿನ ಜಿ.ಟಿ.ಟಿ.ಸಿ (ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ) ೨೦೨೫-೨೬ನೇ ಶೈಕ್ಷಣಿಕ ವರ್ಷದಲ್ಲಿ ವಿಶಿಷ್ಟ ಉದಯೋನ್ಮುಖ ಡಿಪ್ಲೊಮಾ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಿದ್ದು ಎಸ್.ಎಸ್.ಎಲ್.ಸಿ. ಅಥವಾ ಪಿ.ಯು.ಸಿ. (ಪಾಸ್/ಫೇಲ್) ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಪ್ರಾಚಾರ್ಯರು ತಿಳಿಸಿದ್ದಾರೆ.
ಶೇ.೧೦೦ರಷ್ಟು ಉದ್ಯೋಗಾವಕಾಶ ಕಲ್ಪಿಸುತ್ತಿರುವುದು ಹಾಗೂ ಯುವಕ/ ಯುವತಿಯರಿಗೆ ಭವಿಷ್ಯ ರೂಪಿಸುವಲ್ಲಿ ಜಿಲ್ಲೆಯಲ್ಲೇ ಹೆಗ್ಗಳಿಕೆ ಪಡೆದಿರುವ ಸಂಸ್ಥೆಯಾಗಿದೆ. ಪ್ರವೇಶ ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳು ಖುದ್ದಾಗಿ ಕೆಳಗೆ ತಿಳಿಸಿರುವ ವಿಳಾಸದಲ್ಲಿ ಸಂಪರ್ಕಕಿಸಲು ಈ ಮೂಲಕ ಕೋರಲಾಗಿದೆ. ಮೊದಲ ಹಂತದ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಮೇ ೧೫ ಕೊನೆಯ ದಿನವಾಗಿದೆ.
ಕೋರ್ಸ್‌ಗಳ ವಿವರ
ಡಿಪ್ಲೊಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್, ಡಿಪ್ಲೊಮಾ ಇನ್ ಆಟೋಮೇಷನ್ ಮತ್ತು ರೊಬೊಟಿಕ್ಸ್, ಡಿಪ್ಲೊಮಾ ಇನ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್. ಹೆಚ್ಚಿನ ಮಾಹಿತಿಗೆ ಕಡೂರು ಬಿ.ಹೆಚ್.ರಸ್ತೆಯಲ್ಲಿನ ವೇದಾ ಪಂಪ್ ಹೌಸ್ ಹತ್ತಿರದ ಜಿ.ಟಿ.ಟಿ.ಸಿ ಕಾಲೇಜನ್ನು (ದೂರವಾಣಿ: ೯೯೦೨೨೩೨೮೩೯, ೯೯೧೬೧೨೦೮೭೨, ೭೬೭೬೭೬೬೨೬೧, ೯೭೪೩೮೭೧೬೪೫, ೯೪೮೧೮೩೮೪೦೩, ೯೧೪೧೬೩೦೩೨೦) ಸಂಪರ್ಕಿಸಬಹುದು.