ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
2025-26ನೇ ಸಾಲಿನಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಚಿತ್ರದುರ್ಗ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಐಟಿಐ, ಪಿಯುಸಿ (ತಾಂತ್ರಿಕ ವಿಷಯಗಳು) ಉತ್ತೀರ್ಣರಾದ ವಿದ್ಯಾರ್ಥಿಗಳಿಂದ 2ನೇ ವರ್ಷ/3ನೇ ಸೆಮಿಸ್ಟರ್ ಡಿಪ್ಲೋಮಾಗೆ ಲ್ಯಾಟರಲ್ ಎಂಟ್ರಿ ಸ್ಕೀಂನಡಿಯಲ್ಲಿ ಆಫ್ಲೈನ್ ಮುಖಾಂತರ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಜೂನ್ 14 ಅರ್ಜಿ ಸಲ್ಲಿಸಲು ಕೊನೆಯ ದಿನ.
Www.dtek.kar.nic.in ವೆಬ್ಸೈಟ್ನಿಂದ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಯನ್ನು ಕೊನೆಯ ದಿನಾಂಕದೊಳಗೆ ಸಲ್ಲಿಸಬೇಕು. ಜೂನ್ 16ರಂದು ಮಧ್ಯಾಹ್ನ 3 ಗಂಟೆಯ ನಂತರ ಸಂಸ್ಥೆಯ ಸೂಚನಾ ಫಲಕದಲ್ಲಿ ಅರ್ಹ ಅಭ್ಯರ್ಥಿಗಳಿಗೆ ಮೆರಿಟ್ ಪಟ್ಟಿ ಪ್ರಕಟಣೆ ಮಾಡಲಾಗುವುದು.
ಮೆರಿಟ್ ಪ್ರಕಾರ ಸೀಟು ಆಯ್ಕೆ ಮಾಡಿಕೊಂಡು ಪ್ರವೇಶ ಪಡೆಯಲು ಜೂನ್ 17 ಮತ್ತು 18 ಕೊನೆಯ ದಿನವಾಗಿದೆ. ಜೂನ್ 19 ರಿಂದ 29 ರವರೆಗೆ ಭರ್ತಿಯಾಗದೇ ಉಳಿಯುವ ಸೀಟುಗಳನ್ನು ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ ಹಂಚಿಕೆ ಮಾಡಲಾಗುವುದು ಎಂದು ಚಿತ್ರದುರ್ಗ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಆರ್.ರಾಘವೇಂದ್ರಚಾರ್ ತಿಳಿಸಿದ್ದಾರೆ.