ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜನೆ ಮಾಡುವಂತೆ ಜಿಲ್ಲಾಧಿಕಾರಿಗಳ ಮೂಲಕ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾ ನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರ್ದೇಶಕರಿಗೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ವಾಣಿ ವಿಲಾಸ ಸಾಗರವು ಪ್ರಮುಖ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದ್ದು ರಾಜ್ಯದ ಮೊದಲ ಅಣೆಕಟ್ಟು ಆಗಿದೆ. ವೇದಾವತಿ ನದಿಗೆ ಅಡ್ಡಲಾಗಿ ಮೈಸೂರು ಮಹಾರಾಜರು ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಿಸಲಾಗಿದೆ. 118 ವರ್ಷಗಳಷ್ಟು ಹಳೆಯದಾಗಿದೆ.
ಇಂತಹ ಪ್ರಮುಖ ವಿಮಾನ ನಿಲ್ದಾಣ, ಸೂಕ್ಷ್ಮ ಪ್ರದೇಶಗಳಿಗೆ ಸೂಕ್ತ ಭದ್ರತೆ ಒದಗಿಸಲಾಗುತ್ತಿದೆ. ಆದರೆ ವಾಣಿ ವಿಲಾಸ ಸಾಗರ ಡ್ಯಾಂ ಸೂಕ್ಷ್ಮ ಡ್ಯಾಂ ಆಗಿದ್ದು ಸೂಕ್ತ ಭದ್ರತೆ ಒದಗಿಸುವಲ್ಲಿ ನಿರ್ಲಕ್ಷಿಸಿದ್ದಾರೆ.
ಇಲ್ಲಿಯ ಅಣೆಕಟ್ಟಿಗೆ ಯಾವುದೇ ಖಾಯಂ ರಕ್ಷಣಾ ಸಿಬ್ಬಂದಿ ನೇಮಿಸಿಲ್ಲ. ಈ ಜಲಾಶಯಕ್ಕೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಸುವುದು ಮುಖ್ಯವಾಗಿದೆ. ಹಾಗೂ ಪುಂಡರಿಂದ ಬೆದರಿಕೆ ದಾಳಿ ಮತ್ತು ಯುದ್ದ ಭೀತಿ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ರೈತ ಸಂಘ ಆತಂಕ ವ್ಯಕ್ತಪಡಿಸಿದೆ.
ಅಣೆಕಟ್ಟೆಯ ಭದ್ರತಾ ದೃಷ್ಟಿಯಿಂದ, ಪ್ರವಾಸಿಗಾರ ಹಿತದೃಷ್ಟಿಯಿಂದ ಕೆಎಸ್ಐಎಸ್ಎಸ್ ಸಂಸ್ಥೆಯಿಂದ ಭದ್ರತೆಗಾಗಿ ಖಾಯಂ ಅಧಿಕಾರಿ ಹಾಗು ಸಿಬ್ಬಂದಿಗಳನ್ನು ನೇಮಿಸಬೇಕೆಂದು ಸರ್ಕಾರಕ್ಕೆ ಹಾಗು
ಪೊಲೀನ್ ಇಲಾಖೆಗೆ ಶೀಪಾರಸ್ಸು ಮಾಡಬೇಕೆಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿ ರೈತ ಸಂಘದ ಜಿಲ್ಲಾ ಪ್ರಭಾರಿ ಅಧ್ಯಕ್ಷ ಅಧ್ಯಕ್ಷ ಪಿ.ಸೂರಪ್ಪ, ಭರಮಸಾಗರ ಹೋಬಳಿ ಅಧ್ಯಕ್ಷ ಶಿವಣ್ಣ, ಪ್ರಧಾನ ಕಾರ್ಯದರ್ಶಿ ಹೆಚ್.ರಂಗಸ್ವಾಮಿ ಅವರು ಒತ್ತಾಯಿಸಿದ್ದಾರೆ.

