ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಚಿತ್ರದುರ್ಗ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಗೆ ಕಾರ್ಮಿಕ ಕಾಯ್ದೆ ನಿಯಮಾನುಸಾರ ಹೊರ ಗುತ್ತಿಗೆ ಆಧಾರದ ಮೇಲೆ ಡಿ.ಗ್ರೂಪ್‌ಗೆ ನೇಮಕಗೊಂಡಿರುವ ಬುರುಜನಹಟ್ಟಿಯ ಹೆಚ್.ಲಕ್ಷ್ಮಿಗೆ ಜಿಲ್ಲಾ ರಕ್ಷಣಾಧಿಕಾರಿ ಶುಕ್ರವಾರ ನೇಮಕಾತಿ ಪತ್ರ ನೀಡಿದರು.
ಪೊಲೀಸರು ಆಟೋ ತಡೆದು ದಂಡ ವಿಧಿಸಿದರೆನ್ನುವ ಕಾರಣಕ್ಕಾಗಿ ಕಳೆದ ಡಿಸೆಂಬರ್‌ನಲ್ಲಿ ಗಾಂಧಿವೃತ್ತದಲ್ಲಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹೆಚ್ಚಿಕೊಂಡ ತಿಪ್ಪೇಸ್ವಾಮಿ ಸುಟ್ಟ ಗಾಯಗಳಿಂದ ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಮೃತಪಟ್ಟ ಹಿನ್ನೆಲೆಯಲ್ಲಿ ಪತ್ನಿ ಹೆಚ್.ಲಕ್ಷ್ಮಿಗೆ ಪುಟ್ಟ ಮಗುವಿನೊಂದಿಗೆ ಸಂಸಾರ ಸಾಗಿಸುವುದು ಕಷ್ಟವಾಗುತ್ತದೆನ್ನುವುದನ್ನು ಮನಗಂಡು ಚಿತ್ರದುರ್ಗ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಡಿ.ಗ್ರೂಪ್‌ಗೆ ನೇಮಕ ಮಾಡಿಕೊಂಡು ಮಾನವೀಯತೆ ಮೆರೆದಿರುವುದಕ್ಕೆ ಜಿಲ್ಲಾ ರಕ್ಷಣಾಧಿಕಾರಿ ರಂಜಿತ್ ಕುಮಾರ್ ಭಂಡಾರು ಪ್ರಶಂಸೆ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡ ಸೋಮಶೇಖರ್, ಚಿತ್ರದುರ್ಗ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಯುವರಾಜ್, ಡಾ.ವೇಣು, ಕರಿಬಸವಯ್ಯ, ಬುರುಜನಹಟ್ಟಿಯ ಜೆ.ಮಂಜುನಾಥ್ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.

