ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಎಬಿವಿಪಿ ಸಂಘಟನೆಯ 2024-25ನೇ ಸಾಲಿನ ನೂತನ ದಾವಣಗೆರೆ ವಿಭಾಗದ ಸಂಚಾಲಕರಾಗಿ ಗೋಪಿ, ಚಿತ್ರದುರ್ಗ ಜಿಲ್ಲಾ ಸಂಚಾಲಕರಾಗಿ ಕನಕರಾಜ್ ಕೋಡಿಹಳ್ಳಿ ಇವರುಗಳು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಪ್ರಮುಖ ಕೈಗಾರಿಕಾ ಬಂದರು ನಗರ, ಕರ್ನಾಟಕ ಮತ್ತು ಭಾರತದ ಪಶ್ಚಿಮ ಕರಾವಳಿ ಪ್ರದೇಶ ಮಂಗಳೂರಿನಲ್ಲಿ ನಡೆದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಣಿ ಸಭೆ ಮಂಗಳೂರಿನಲ್ಲಿ ಆಯೋಜನೆ ಗೊಂಡಿತ್ತು.
ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಉದ್ಘಾಟಿಸಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ಕರ್ನಾಟಕ ದಕ್ಷಿಣ ಪ್ರಾಂತ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ “ಜಾಗತಿಕ ರಾಜಕೀಯದಲ್ಲಿ ಭಾರತದ ಪಾತ್ರ” ವಿಶೇಷ ಭಾಷಣವನ್ನು ಏರ್ಪಡಿಸಲಾಗಿತ್ತು.
ಮುಖ್ಯ ವಕ್ತಾರರಾಗಿ ತುಮಕೂರು ವಿಶ್ವವಿದ್ಯಾಲಯದ ಸಂಯೋಜಕ ಮತ್ತು ಸಹ ಪ್ರಾಧ್ಯಾಪಕರು, ಸಾರ್ವಜನಿಕ ಆಡಳಿತ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಡಾ.ಸುರೇಶ್ ಕೆ.ಸಿ ಆಗಮಿಸಿದ್ದರು.
ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಶಿವಕುಮಾರ್ ಚಿರಗಿ, ಕರ್ನಾಟಕ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವೇಶ್ ಕೋರಿ, ಡಾ.ಸತೀಶ್, ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಪ್ರವೀಣ್ ಎಚ್ ಕೆ ರವರು ಸೇರಿದಂತೆ ವಿವಿಧ ಪ್ರಾಂತ ಪದಾಧಿಕಾರಿಗಳು ಉಪ್ಪಿತರಿದ್ದರು.
ಇವರ ಉಪಸ್ಥಿತಿಯಲ್ಲಿ 2024-25 ನೇ ಸಾಲಿನ ದಾವಣಗೆರೆ ವಿಭಾಗ ನೂತನ ಸಹ ಸಂಚಾಲಕರಾಗಿ ಗೋಪಿ ಮತ್ತು ಚಿತ್ರದುರ್ಗ ಜಿಲ್ಲಾ ಸಂಚಾಲಕರಾಗಿ ಕನಕರಾಜ್ ಕೋಡಿಹಳ್ಳಿ ಇವರನ್ನು ಆಯ್ಕೆ ಮಾಡಲಾಯಿತು.