ಚಂದ್ರವಳ್ಳಿ ನ್ಯೂಸ್, ಗೌರಿಬಿದನೂರು:
ಕೇಬಲ್ ಉದ್ಯಮದಲ್ಲಿ ತಾಂತ್ರಿಕ ಸವಾಲುಗಳನ್ನು ಎದುರಿಸಿ ಇಂದಿಗೂ ಸಾರ್ವಜನಿಕರಿಗೆ ಕೇಬಲ್ ಆಪರೇಟರ್ ಗಳು ನಿರಂತರವಾಗಿ ಉತ್ತಮ ಸೇವೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಅವರು ನಗರದ ವಿ.ವಿ.ಪುರಂನಲ್ಲಿರುವ ಡಾ.ಎಚ್ ಎನ್ ಕಲಾಭವನದಲ್ಲಿ ನಡೆದ ಗೌರಿಬಿದನೂರು ತಾಲ್ಲೂಕು ಕೇಬಲ್ ಟಿ.ವಿ ಆಪರೇಟರ್ ಗಳ ಕ್ಷೇಮಾಭಿವೃದ್ಧಿ ಸಂಘದ 2ನೇ ವಾರ್ಷಿಕೋತ್ಸವದ ಉದ್ಘಾಟನೆ ಮಾಡಿದ ನಂತರ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಕೇಬಲ್ ಉದ್ಯಮಕ್ಕೆ ಪೆಟ್ಟು ನೀಡುತ್ತಿರುವ ಖಾಸಗಿ ಕಂಪನಿಗಳ ಹೊಡೆತದ ನಡುವೆಯೂ ಕೇಬಲ್ ಆಪರೇಟರ್ ಗಳು ನಾವು ಯಾರಿಗೂ ಕಮ್ಮಿ ಇಲ್ಲವೆಂಬಂತೆ ಇಂಟರ್ನೆಟ್ ಐ.ಪಿ.ಟಿ.ವಿ ಯಂತ ಇತರೆ ಜನ ಬಯಸುವ ಸೇವೆಗಳನ್ನು ನೀಡಿ ಉದ್ಯಮ ಕ್ಕೆ ಬಲ ತುಂಬುತ್ತಿರುವ ಕೇಬಲ್ ಆಪರೇಟರ್ ಗಳ ನಿರಂತರ ಸೇವೆ ಶ್ಲಾಘನೀಯಾಗಿದ್ದು ಸಂಘಟಿತ ಹೋರಾಟದ ಮೂಲಕ ಕೇಬಲ್ ಆಪರೇಟರ್ ಗಳ ಹಿತ ರಕ್ಷಣೆ ಮಾಡುವುದು ನಮ್ಮ ಗುರಿ ಎಂದರು.
ಗೌರಿಬಿದನೂರು ತಾಲ್ಲೂಕು ಕೇಬಲ್ ಆಪರೇಟರ್ ಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ ಪಿ ಸತ್ಯನಾರಾಯಣ ಮಾತನಾಡಿ ಸಂಘ ಸ್ಥಾಪನೆಯಾಗಿ ಎರೆಡು ವರ್ಷ ಪೂರೈಸಿದ್ದು ಇದು ನಮಗೆ ಸಂತಸ ತಂದಿದೆ,ಕೆಲ ವರ್ಷಗಳ ಹಿಂದೆ ನಮ್ಮ ಸಹೋದ್ಯೋಗಿ ಕೇಬಲ್ ಆಪರೇಟರ್ ಒಬ್ಬರಿಗೆ ಆದ ಸಮಸ್ಯೆ ನಮಗೆ ಸಂಘ ರಚನೆ ಮಾಡಲು ಪ್ರೇರಣೆಯಾಯಿತು ಇದರಿಂದ ನಾವುಗಳು ಸಂಘ ರಚನೆಯಾದ ನಂತರ ನಮ್ಮ ವ್ಯಾಪ್ತಿಯ ಹಲವಾರು ಕೇಬಲ್ ಆಪರೇಟರ್ ಗಳಿಗೆ ಸಂಘದಿಂದ ಆರ್ಥಿಕ ಸಹಾಯ ಮತ್ತು ಅನೇಕ ರೀತಿಯ ಸಹಾಯ ಮಾಡಲಾಗಿದೆ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದು ನಾವುಗಳು ಅರಿತು ಸಂಘವನ್ನು ಮುನ್ನೆಡೆಸುತ್ತಿದ್ದೇವೆ,
ಇದಕ್ಕೆ ನಮ್ಮ ತಾಲ್ಲೂಕಿನ ಎಲ್ಲಾ ಕೇಬಲ್ ಆಪರೇಟರ್ ಗಳು ಸಹಕಾರ ನೀಡುತ್ತಿದ್ದು ನಮಗೆ ಮತ್ತಷ್ಟು ಕೆಲಸಗಳು ಮಾಡಲು ಸ್ಪೂರ್ತಿ ಬಂದಿದ್ದು,ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ಕ್ಯಾಂಪ್ ಮಾಡಿ ಕೇಬಲ್ ಉದ್ಯಮದ ಬದಲಾವಣೆಯತ್ತ ಕೊಂಡೊಯ್ಯಲು ಶ್ರಮವಹಿಸಲಾಗುವುದು ಎಂದರು.ಕಾರ್ಯಕ್ರಮದಲ್ಲಿ ಬಾಗವಹಿಸಿದ್ದ ರಾಜ್ಯದ ಅನೇಕ ಕಂಪನಿಯ ಎಂ.ಎಸ್.ಓ ಗಳು ತಂತ್ರಜ್ಞಾನ ಜೊತೆಗೆ ಆಪರೇಟರ್ ಗಳು ಸಾಗಬೇಕು ಇದಕ್ಕಾಗಿ ನಾವುಗಳು ಸದಾ ನಿಮ್ಮ ಸೇವೆಯಲ್ಲಿ ಇರುತ್ತೇವೆ ಎಂದರು.
ಕಾರ್ಯಕ್ರಮ ದಲ್ಲಿ,ಇಂಟರ್ನೆಟ್ ಕುರಿತು ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಮತ್ತು ಯೋಗಾ ಪಟುಗಳಿಂದ ಯೋಗಾ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಮತ್ತು ಬೆಂಗಳೂರಿನ ಎಸ್ಪಿ ರೋಡಿನ ಪ್ರಮುಖ ಅಂಗಡಿಗಳವರಿಂದ ಸ್ಟಾಲ್ ಹಾಕಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು ಎಲ್ಲಾ ಸದಸ್ಯರು ಬಾಗವಹಿಸಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಆಪರೇಟರ್ ಗಳು ಬಾಗವಹಿಸಿದ್ದು ವಿಶೇಷವಾಗಿತ್ತು.

