ಡಿಸಿಎಂ ಅವರ ನಾಗರಿಕರೊಂದಿಗೆ ನಡಿಗೆ ಕಾರ್ಯಕ್ರಮಕ್ಕೆ ಮೆಚ್ಚುಗೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರ ಅಭಿವೃದ್ಧಿಯ ವಿಚಾರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಹತ್ವದ ಕ್ರಮಗಳನ್ನು ಕೈಗೊಂಡು ಬೆಂಗಳೂರಿನಲ್ಲಿ ನಾಗರಿಕರೊಂದಿಗೆ ನಡಿಗೆಕಾರ್ಯಕ್ರಮ ನಡೆಸುವ ಮೂಲಕ ಜನರ ಜೊತೆ ಸಂವಾದ, ಕುಂದುಕೊರತೆ ಆಲಿಸಿತ್ತಿರುವುದಕ್ಕೆ ಉದ್ಯಮಿ ಮೋಹನ್ ದಾಸ್ ಪೈ ಗುಣಗಾನ ಮಾಡಿದ್ದಾರೆ.

ಶನಿವಾರ ರಾತ್ರಿ ನಡೆದ ವಿಶೇಷ ಡಿನ್ನರ್ ಮೀಟಿಂಗ್ ವೇಳೆ ಡಿಕೆ ಶಿವಕುಮಾರ್ ಅವರು ನಗರದಲ್ಲಿನ ಪ್ರಮುಖ ಉದ್ಯಮಿಗಳೊಂದಿಗೆ ಸಂವಾದ ನಡೆಸಿ, ಅವರ ವಿಶ್ವಾಸ ಗಳಿಸಿದರು.

- Advertisement - 

ಬೆಂಗಳೂರಿನ ಸಮಗ್ರ ಅಭಿವೃದ್ಧಿ, ಮೂಲಸೌಕರ್ಯ ಸುಧಾರಣೆ ಹಾಗೂ ಹೂಡಿಕೆ ವಾತಾವರಣ ಕುರಿತಂತೆ ಉದ್ಯಮಿಗಳಿಂದ ಡಿಸಿಎಂ ಶಿವಕುಮಾರ್ ಹಲವು ಸಲಹೆಗಳನ್ನು ಪಡೆದುಕೊಂಡರು. ಅಲ್ಲದೇ ತಮ್ಮ ಕಾರ್ಯಕ್ರಮಗಳ ಕುರಿತು ಉದ್ಯಮಿಗಳ ಮುಂದೆ ಚರ್ಚಿಸಿದರು.

ಡಿಕೆ ಶಿವಕುಮಾರ್ ಅವರ ನಾಗರೀಕರೊಂದಿಗೆ ನಡಿಗೆ ಕಾರ್ಯಕ್ರಮ ಜನ ಮೆಚ್ಚುಗೆ ಗಳಿಸುವ ಮೂಲಕ ಜನರ ಮಧ್ಯೆ ತೆರಳಿ, ಅವರ ಸಮಸ್ಯೆಗಳನ್ನು ನೇರವಾಗಿ ಆಲಿಸಿ ಪರಿಹಾರ ನೀಡುತ್ತಿರುವುದಕ್ಕೆ ಉದ್ಯಮಿಗಳು ಶ್ಲಾಘಿಸಿದ್ದಾರೆ. ಅದರಲ್ಲೂ ಹಿಂದೆ ಸರ್ಕಾರವನ್ನು ಟೀಕೆ ಮಾಡಿದ್ದ ಉದ್ಯಮಿ ಮೋಹನ್ ದಾಸ್ ಪೈ ಅವರು ಸಾಮಾಜಿಕ ಜಾಲತಾಣದಲ್ಲಿ ಡಿಕೆ ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿ ಮೆಚ್ಚುಗೆಯ ಪೋಸ್ಟ್ ಹಂಚಿಕೊಂಡಿದ್ದಾರೆ.

- Advertisement - 

ಉದ್ಯಮಿ ಮೋಹನ್ ದಾಸ್ ಪೈಎಕ್ಸ್ಖಾತೆಯಲ್ಲಿ ಡಿಕೆ ಶಿವಕುಮಾರ್ ಕಾರ್ಯ ಶ್ಲಾಘಿಸಿರುವುದಲ್ಲದೆ, ಜನರ ಜೊತೆ ಸಂವಾದ, ಕುಂದುಕೊರತೆ ಆಲಿಸಿದ್ದು ಒಳ್ಳೆಯ ಕಾರ್ಯ. ಜನರ ಸಮಸ್ಯೆಗಳನ್ನು ಬಗೆಹರಿಸುವುದು ಒಳ್ಳೆಯ ನಾಯಕನ ಕೆಲಸ. ನಿಮ್ಮ ಈ ಕೆಲಸ ಜನರು, ನಾಯಕರ ನಡುವಿನ ಸೇತುವೆ ಇದ್ದಂತೆ. ಕಳೆದ ಮೂರು ತಿಂಗಳಿಂದ ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಮಹತ್ವದ ಯೋಜನೆ ಕೈಗೊಂಡಿದ್ದೀರಿ. ಜಿಬಿಎ ರಚನೆ ಮಾಡಿದ್ದು ಅತೀ ದೊಡ್ಡ ಕೊಡುಗೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಹೊಗಳಿದ್ದಾರೆ.

ನಗರದ ಅಭಿವೃದ್ಧಿ, ಸಾರಿಗೆ ವ್ಯವಸ್ಥೆ ಸುಧಾರಣೆ, ಮೂಲಸೌಕರ್ಯ ವಿಸ್ತರಣೆ ಸೇರಿದಂತೆ ಹಲವು ವಿಷಯಗಳಲ್ಲಿ ಡಿಕೆ ಶಿವಕುಮಾರ್ ಕೈಗೊಂಡಿರುವ ಕ್ರಮಗಳಿಗೆ ಉದ್ಯಮಿಗಳಿಂದ ಮೆಚ್ಚುಗೆ ಬಂದಿದ್ದು, ಈ ಮೂಲಕ ಡಿಕೆ ಶಿವಕುಮಾರ್ ಅವರ ಇಮೇಜ್ ಬದಲಾಗಿದೆ ಎಂದು ಉದ್ಯಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

Share This Article
error: Content is protected !!
";