ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಕೇವಲ ಒಂದು ವರ್ಷದ ಅವಧಿಯಲ್ಲಿ ಲಯನ್ಸ್ ಕೈಗೊಂಡಿರುವ ಸೇವಾ ಕಾರ್ಯಗಳು ಜನಮೆಚ್ಚುಗೆಗೆ ಕಾರಣವಾಗಿವೆ ಅದರಲ್ಲೂ ಕುಡಿತ ಬಿಡಿಸುವ ಶಿಬಿರ ಮದ್ಯವರ್ಜನ ಕಾರ್ಯಕ್ರಮವು ಲಯನ್ಸ್ ಕ್ಲಬ್ ಇತಿಹಾಸದಲ್ಲೇ ಒಂದು ಮೈಲಿಗಲ್ಲು ಎಂದು ಲಯನ್ಸ್ ಕ್ಲಬ್ ನ ಜಿಲ್ಲಾ ರಾಜ್ಯಪಾಲರಾದ ಆಕಾಶ್ ಎ ಸುವರ್ಣ ತಿಳಿಸಿದರು.
ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಕಂಟನಕುಂಟೆ ಕಿಂಗ್ಸ್ ನ ವಾರ್ಷಿಕ ಸರ್ವಸದಸ್ಯರ ಸಭೆಗೆ ಆಗಮಿಸಿ ವಿವಿಧ ಸೇವಾ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಕಂಟನಕುಂಟೆ ಕಿಂಗ್ಸ್ ನ ಸದಸ್ಯರು ವಿವಿಧ ಸೇವಾ ಕಾರ್ಯಗಳಾದ ಉಚಿತ ಕ್ಯಾನ್ಸರ್ ಜಾಗೃತಿ ಮತ್ತು ತಪಾಸಣಾ ಶಿಬಿರ,ಹೆಲ್ಮೆಟ್ ವಿತರಣೆ, ಅನಾಥಾಶ್ರಮದ ಮಕ್ಕಳಿಗೆ ಅಕ್ಕಿ ವಿತರಣೆ,ಉಚಿತ ನೋಟ್ ಪುಸ್ತಕ ವಿತರಣೆ,ಪ್ರತಿಭಾನ್ವಿತ ಬಡ ಮಕ್ಕಳಿಗೆ ನಗದು ಬಹುಮಾನ ವಿತರಣೆ ಸೇರಿದಂತೆ ಹಲವು ಸೇವಾ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿದೆ ಅವರ ಸೇವೆ ಹೀಗೆ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಕಂಟನಕುಂಟೆ ಕಿಂಗ್ಸ್ ನ ಅಧ್ಯಕ್ಷ ಲಯನ್ ಕೆ ಎಂ ಕೃಷ್ಣಮೂರ್ತಿ ಮಾತನಾಡಿ ಕೇವಲ ಒಂದು ವರ್ಷದ ಅವಧಿಯಲ್ಲಿ ನಮ್ಮ ಸದಸ್ಯರ ಸಹಕಾರದಿಂದ ಅತಿಹೆಚ್ಚು ಸೇವಾ ಕಾರ್ಯಗಳನ್ನು ಮಾಡಿದ್ದೇವೆ ಅಲ್ಲದೇ ಮತ್ತಷ್ಟು ಸೇವಾ ಕಾರ್ಯಗಳಿಗೆ ಇಂದು ಜಿಲ್ಲಾ ರಾಜ್ಯಪಾಲರು ಚಾಲನೆ ನೀಡಿದ್ದು, ನಮಗೆ ಮತ್ತಷ್ಟು ಸೇವಾ ಕಾರ್ಯಗಳನ್ನು ರೂಪಿಸಲು ಹೊಸ ಹುಮ್ಮಸ್ಸು ನೀಡಿದೆ ಎಂದರು.
ಈ ವೇಳೆ ಮುಖ್ಯ ಅತಿಥಿಗಳಾದ ಅಶ್ವಿನಿ ಆಕಾಶ್ ಸುವರ್ಣ, ಲಯನ್ಸ್ ಕ್ಲಬ್ ನ ಜಿಲ್ಲಾ ಕಾರ್ಯದರ್ಶಿ ವಿಮಲಾ, ಜಿಲ್ಲಾ ಖಜಾಂಚಿ ಪ್ರದೀಪ್ ಕುಮಾರ್, ಲಯನ್ ರೈ ,ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಕಂಟನಕುಂಟೆ ಕಿಂಗ್ಸ್ ನ ಸ್ಥಾಪನೆಗೆ ಕಾರಣಕರ್ತರಾದ ಲಯನ್ ಮಂಗಳ ಗೌರಿ, ಲಯನ್ ಕೆ ಪಿ ಲಕ್ಷ್ಮೀನಾರಾಯಣ್, ಕಾರ್ಯದರ್ಶಿ ಎಂ ಸಿ ಮಂಜುನಾಥ್, ಖಜಾಂಚಿ ಆರ್ ಗೋಪಾಲ್, ಕೃಷ್ಣ, ಉಪಾಧ್ಯಕ್ಷ ಜಿ ರಾಜಗೊಪಾಲ್ ವೈಢೂರ್ಯ ಸೇರಿದಂತೆ ಸಂಘದ ಎಲ್ಲಾ ಸದಸ್ಯರು ಭಾಗವಹಿಸಿದ್ದರು.

