ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಜಯಪುರ ಕ್ಕೆ ಬರಲಿದೆ; ಕ್ಯಾಂಪಾಕೋಲಾ 1,622 ಕೋಟಿ ಹೂಡಿಕೆಗೆ ಅನುಮೋದನೆ – 1,200 ಉದ್ಯೋಗಗಳ ಸೃಷ್ಟಿ! ಆಗಲಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ರಿಲಯನ್ಸ್ ಗ್ರೂಪ್ ತನ್ನ ಕ್ಯಾಂಪಾಕೋಲಾ ಯೋಜನೆಗಾಗಿ ವಿಜಯಪುರದಲ್ಲಿ 1,622 ಕೋಟಿ ಹೂಡಿಕೆ ಮಾಡಲಿದೆ. ಈ ಯೋಜನೆಯಡಿ ತಂಪು ಪಾನೀಯಗಳು ಮತ್ತು ಬಾಟಲಿಂಗ್ ಘಟಕ ಸ್ಥಾಪನೆಯಾಗಲಿದ್ದು, 1,200ಕ್ಕೂ ಹೆಚ್ಚು ನೇರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಮುಳವಾಡ ಕೈಗಾರಿಕಾ ಪ್ರದೇಶ ಹಂತ 2ರಲ್ಲಿ 100 ಎಕರೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಎಂ.ಬಿ ಪಾಟೀಲ್ ತಿಳಿಸಿದರು.
FMCG, ನವೀಕರಿಸಬಹುದಾದ ಇಂಧನ, ಎಥೆನಾಲ್, ಸೌರ, ಪವನ ಮತ್ತು ಉತ್ಪಾದನಾ ವಲಯಗಳಲ್ಲಿ 17,000 ಕೋಟಿಗೂ ಹೆಚ್ಚು ಮೌಲ್ಯದ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗಿದೆ.
ಇದೇ ವರ್ಷ ಫೆಬ್ರವರಿಯಲ್ಲಿ ಜರುಗಿದ ಜಾಗತಿಕ ಹೂಡಿಕೆದಾರರ ಸಮಾವೇಶ – GIM2025 ಸಮಾವೇಶದಲ್ಲಿ ಹಲವಾರು ಕಂಪೆನಿಗಳಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಋಜು ಹಾಕಲಾಗಿದೆ.
ವಿಜಯಪುರದ ಪ್ರಗತಿಗೆ ಹೊಸ ಹಂತ!
ಈ ಹೂಡಿಕೆಗಳು ಜಿಲ್ಲೆಯ ಆರ್ಥಿಕ ವಿಕಾಸ ಮತ್ತು ಯುವಜನರಿಗೆ ಅವಕಾಶಗಳನ್ನು ತರಲಿದೆ #ವಿಜಯಪುರ ವು ಕರ್ನಾಟಕದ ಹೆಮ್ಮೆಯ ಕೈಗಾರಿಕಾ ಕೇಂದ್ರವಾಗಿ ವಿಜೃಂಭಿಸಲಿದೆ! ಎಂದು ಸಚಿವ ಪಾಟೀಲಿ ವಿಶ್ವಾಸ ವ್ಯಕ್ತಪಡಿಸಿದರು.

