ಯುವಕ-ಯುವತಿ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿದ ನಾಲ್ಕು ಆರೋಪಿಗಳ ಬಂಧನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಯುವಕ-ಯುವತಿ ಇಬ್ಬರು ಕೂತು ಮಾತನಾಡುವ ಸಂದರ್ಭದಲ್ಲಿ ನಾಲ್ಕು ಮಂದಿ ಕಿಡಿಗೇಡಿಗಳು ಧರ್ಮ ರಕ್ಷಣೆ ಸೋಗಿನಲ್ಲಿ ನೈತಿಕ ಪೊಲೀಸ್ ಗಿರಿ ನಡೆಸಿ
, ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ.
ದ್ವಿಚಕ್ರ ವಾಹನದಲ್ಲಿ ಕುಳಿತಿರುವಾಗ ಯುವಕ – ಯುವತಿಯರ ಮೇಲೆ ನಾಲ್ವರು ಕಿಡಿಗೇಡಿಗಳು ಹಲ್ಲೆ ಮಾಡಿದ್ದು ಯುವತಿ ನೀಡಿದ ದೂರು ಆಧರಿಸಿ ಬೆಂಗಳೂರಿನ ಚಂದ್ರಾ ಲೇಔಟ್ ಠಾಣೆ ಪೊಲೀಸರು ನಾಲ್ಕು ಆರೋಪಿಗಳನ್ನ ಬಂಧಿಸಿದ್ದಾರೆ.‌

ಬಂಧಿತ ಆರೋಪಿಗಳು-
ಮುಸ್ಲಿಂ ಯುವತಿಯೊಬ್ಬಳು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ಮಹೀನ್
, ಮನ್ಸೂರ್, ಅಫ್ರಿದಿ ಪಾಷಾ ಹಾಗೂ ವಾಸೀಂ ಖಾನ್ ಎಂಬುವರನ್ನ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳೆಲ್ಲರೂ ಚಂದ್ರಾ ಲೇಔಟ್ ನಿವಾಸಿಗಳಾಗಿದ್ದು
, ವೆಲ್ಡಿಂಗ್ ಹಾಗೂ ಸ್ಕ್ರಾಪ್ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.‌ಮೂರು ದಿನಗಳ ಹಿಂದೆ ಈ‌ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ನೈತಿಕ ಪೊಲೀಸ್ ಗಿರಿ-
ಚಂದ್ರಾ ಲೇಔಟ್ ಪಾರ್ಕ್​ವೊಂದರ ಬಳಿ ಮುಸ್ಲಿಂ ಯುವತಿ ಹಾಗೂ ಹಿಂದೂ ಯುವಕ ಸ್ಕೂಟರ್​ ಮೇಲೆ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಆರೋಪಿಗಳು ಯುವತಿ-ಯುವಕನನ್ನ ಪ್ರಶ್ನಿಸಿದ್ದಾರೆ. ನಾವಿಬ್ಬರು ಸ್ನೇಹಿತರು ಎಂದು ಅವರು ಸಮಜಾಯಿಷಿ ನೀಡಿದರೂ ಮಾತು ಕೇಳದ ಆರೋಪಿಗಳು ಅವಾಚ್ಯ ಶಬ್ಧಗಳಿಂದ ನಿಂಧಿಸಿದಲ್ಲದೆ ಧರ್ಮ ರಕ್ಷಣೆ ಸೋಗಿನಲ್ಲಿ ನೈತಿಕ ಪೊಲೀಸ್ ಗಿರಿ ಮೆರೆದಿದ್ದಾರೆ. ಈ ಸಂಬಂಧ ಯುವತಿ ನೀಡಿದ ದೂರು ಆಧರಿಸಿ ಆರೋಪಿತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಮಾತನಾಡಿ, ಪಾರ್ಕ್ ಎದುರುಗಡೆ ಒಂದು ಹುಡುಗ, ಹುಡುಗಿ ಸ್ಕೂಟರ್ ಮೇಲೆ ಕುಳಿತಿರುವುದನ್ನ ನೋಡಿದ ನಾಲ್ವರು ಆರೋಪಿತರು ಇಲ್ಲಿಗೆ ಏಕೆ ಬಂದಿರುವೆ ಮನೇಲಿ ಹೇಳಿ ಬಂದಿದ್ದೀಯಾ ಎಂದು ಯುವತಿಯನ್ನು ಪ್ರಶ್ನಿಸಿದ್ದರು. ಈ ಸಂಬಂಧ ಯುವತಿಯಿಂದ ದೂರು ಪಡೆಯಲಾಗಿದೆ. ನಾಲ್ವರು ಆರೋಪಿಗಳನ್ನ ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

 

Share This Article
error: Content is protected !!
";