ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ರೈತರ ಜಮೀನುಗಳಲ್ಲಿ ಕೇಬಲ್ ವೈರ್ ಮತ್ತು ಮೋಟಾರ್ ಪಂಪ್ ಕಳ್ಳತನ ಮಾಡುತ್ತಿದ್ದ ಕೂಡ್ಲಹಳ್ಳಿ ಮಧುಸೂದನ ಎನ್ನುವ ಕಳ್ಳನನ್ನು ಅಬ್ಬಿನಹೊಳೆ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೂಡ್ಲಹಳ್ಳಿ ಗ್ರಾಮದ ಚಿದಂಬರ ಅವರಿಗೆ ಸೇರಿದ ಹೂವಿನಹೊಳೆ ಗ್ರಾಮದ ಜಮೀನಿನಲ್ಲಿದ್ದ ಅಂದಾಜು 35000 ರೂ.ಗಳ 10 ಹೆಚ್.ಪಿ ಮೋಟಾರು ಪಂಪ್ ಕಳ್ಳತನ ಮಾಡಿದ್ದರು.
ಹಿರಿಯೂರು ತಾಲೂಕಿನ ಕೂಡ್ಲಹಳ್ಳಿ ಗ್ರಾಮದ ಆರೋಪಿ ಮಧುಸೂದನ ಹೆಚ್.ಆರ್ ತಂದೆ ರಂಗನಾಥ(23) ಇವನನ್ನು ದಸ್ತಗಿರಿ ಮಾಡಿ ಕಳ್ಳತನವಾಗಿದ್ದ 215 ಅಡಿ ಕೇಬಲ್ ವೈರ್ ಅಂದಾಜು ಬೆಲೆ 8000, 43 ಸಾವಿರ ರೂ ಪಡಿಸಿಕೊಂಡಿದ್ದಾರೆ. ಮತ್ತೊಬ್ಬ ಆರೋಪಿ ಶಶಿಕುಮಾರ ತಲೆ ಮರೆಸಿಕೊಂಡಿದ್ದು ಪೊಲೀಸರು ಈತನ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.
ಕದ್ದು ಮಾಲು ಸಮೇತ ಆರೋಪಿತರನ್ನು ಪತ್ತೆ ಮಾಡಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

