ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಒಂಟಿ ಮಹಿಳೆಯೊಬ್ಬಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾಮುಕನೊಬ್ಬ ಅಸಭ್ಯವಾಗಿ ಸ್ಪರ್ಶಿಸಿ ಕಿರುಕುಳ ನೀಡಿದ್ದ ಆರೋಪಿಯನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
36 ವರ್ಷ ಮಹಿಳೆ ನೀಡಿದ ದೂರಿನ ಮೇರೆಗೆ ಅಸ್ಸಂ ಮೂಲದ ಇಸ್ಲಾಂವುದ್ದೀನ್ (31) ಬಂಧಿಸಿದ ಪೊಲೀಸರು ಬನಶಂಕರಿ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.
ದೂರುದಾರ ಮಹಿಳೆಯು ಜನವರಿ 23ರಂದು ಬೆಳಗ್ಗೆ 8:30ರ ಸುಮಾರಿಗೆ ಬನಶಂಕರಿ 2ನೇ ಹಂತದ ರಸ್ತೆಯೊಂದರಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಒಂಟಿಯಾಗಿದ್ದ ಮಹಿಳೆಯನ್ನು ಗಮನಿಸಿದ್ದ ಆರೋಪಿ, ಆಕೆಯ ಹಿಂಭಾಗಕ್ಕೆ ಹೊಡೆದು ಪರಾರಿಯಾಗಿದ್ದ. ಆರೋಪಿಯ ಕೃತ್ಯದಿಂದ ನೊಂದ ಮಹಿಳೆ, ಆತನ ದ್ವಿಚಕ್ರ ವಾಹನದ ನಂಬರ್ ಸಹಿತ ಬನಶಂಕರಿ ಠಾಣೆಗೆ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಆರೋಪಿ ಇಸ್ಲಾಂವುದ್ದೀನ್‌ನನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.