ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಧಿಕಾರದ ಅಮಲು ನೆತ್ತಿಗೆ ಏರಿದಾಗ ಈ ರೀತಿಯ ದುರಹಂಕಾರದ ಮಾತುಗಳು ಬರುತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಹರಿಹಾಯ್ದಿದೆ.
ವೇದಿಕೆ ಮೇಲೆ ಜನರ ಮುಂದೆ ಹೀರೋ ಆಗಲು ಹೋದ ಭ್ರಷ್ಟ ಸಿಎಂ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗೆ ಏಕವಚನದಲ್ಲಿ ಕರೆದು ದುರಹಂಕಾರ ತೋರಿಸಿದ್ದಾರೆ.
ಹಣ ಹಂಚಿ ರಾಜಕೀಯ ಪ್ರಭಾವ ಬಳಸಿ ಚುನಾವಣೆ ಗೆಲ್ಲುವ ಸಿದ್ದರಾಮಯ್ಯನವರೇ, ಅವರು ನಿಮ್ಮಂತೆ ದಲಿತರನ್ನು ತುಳಿದು ದಲಿತರ ಅಧಿಕಾರ ಆಸ್ತಿ ಕಿತ್ತುಕೊಂಡು ಅಧಿಕಾರಿ ಆಗಿಲ್ಲ. ಕಷ್ಟಪಟ್ಟು ಹಗಲುರಾತ್ರಿ ಎನ್ನದೇ ಓದಿ ದೇಶದ ಅತ್ಯುನ್ನತ ಅಧಿಕಾರವನ್ನು ಗಿಟ್ಟಿಸಿಕೊಂಡಿದ್ದಾರೆ.
ಗೌರವ ಕೊಟ್ಟು ಗೌರವ ಪಡೆಯುವ ವಿವೇಕ ರಾಜ್ಯದ ಮುಖ್ಯಮಂತ್ರಿಗೆ ಇಲ್ಲ ಎಂದರೆ ಹೇಗೆ? ಎಂದು ಬಿಜೆಪಿ ಖಾರವಾಗಿ ಪ್ರಶ್ನಿಸಿದೆ.