ಕೃತಕಬುದ್ದಿಮತ್ತೆ “ಬಿಲ್ಡ್ ವಿತ್ ಎಐ – ಜೆಮಿನಿ 2.0 ಫ್ಲಾಶ್” ಕಾರ್ಯಕ್ರಮ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು;
ಬೆಳವಣಿಗೆಯಾಗುತ್ತಿರುವ ಕೃತಕ ಬುದ್ದಿಮತ್ತೆ ಯುಗಕ್ಕೆ ಅನುಗುಣವಾಗಿ ಯುವ ಜನಾಂಗಕ್ಕೆ ನಗರದ ಬಿ.ಎಂ.ಎಸ್. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬಿಲ್ಡ್ ವಿತ್ ಎಐ ಜೆಮಿನಿ 2.0 ಫ್ಲಾಶ್ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮೈಂಡ್ ಮ್ಯಾಟ್ರಿಕ್ಸ್ ಮತ್ತು ಗೂಗಲ್ ಫಾರ್ ಡೆವಲಪರ್ಸ್ ಇಂಡಿಯಾ ಎಜು ಪ್ರೋಗ್ರಾಂ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು. ಬಿಲ್ಡ್ ವಿತ್ ಎಐ ಜೆಮಿನಿ 2.0 ಫ್ಲಾಶ್ ಕಾರ್ಯಕ್ರಮವು ರಾಜ್ಯದ ಎಲ್ಲಾ ಸ್ವಾಯತ್ತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 20 ಸಾವಿರ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರುಗಳು ಭಾಗವಹಿಸಿದ್ದರು.

ಈ ಮಹತ್ವದ ಪ್ರಯತ್ನದ ಹಿಂದೆ ಮೈಂಡ್ ಮ್ಯಾಟ್ರಿಕ್ಸ್ ನ ಸಿಇಓ  ಸುಜಿತ್ ಕುಮಾರ್ ಹಾಗೂ ಮೈಂಡ್ ಮ್ಯಾಟ್ರಿಕ್ಸ್ ನ ಸಲಹೆಗಾರರಾದ ಡಾ. ಎಸ್. ಮೋಹನ್ ಕುಮಾರ್, ಎಸ್ ಜೆಎಂ ವಿಶ್ವವಿದ್ಯಾಲಯ ಮಾಜಿ ಉಪಕುಲಪತಿಗಳು ಕಾರ್ಯಾಗಾರದ ವೈಶಿಷ್ಟ್ಯತೆಯನ್ನು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಕೆ.ಜಿ.ಜಗದೀಶ್, ಬಿ.ಎಂ.ಎಸ್. ಕಾಲೇಜಿನ ಪ್ರಾಚಾರ್ಯರಾದ ಡಾ. ಭೀಮಶಾ ಆರ್ಯ, ಉಪ ಪ್ರಾಂಶುಪಾಲರಾದ ಡಾ. ರವಿಕುಮಾರ್ ಪ್ರಾಧ್ಯಾಪಕರಾದ ಡಾ. ಎಸ್. ಮೋಹನ್ ಕುಮಾರ್, ಮೈಂಡ್ ಮ್ಯಾಟ್ರಿಕ್ಸ್ ಅಮಿತಾಬ್ ಸತ್ಯಂ ನ ಸಲಹೆಗಾರರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಬಿ.ಎಂ.ಎಸ್. ಶಿಕ್ಷಣ ಟ್ರಸ್ಟ್ ನ ಟ್ರಸ್ಟಿ ಅವಿರಾಮ್ ಶರ್ಮಾ ಅಧ್ಯಕ್ಷೀಯ ಭಾಷಣ ಮಾಡಿದರು. ರವರು ವಂದನಾರ್ಪಣೆಯನ್ನು ನೀಡಿದರು.
ತಿರುಮಲ ದೇಸಾಯಿರವರು (ಮೈಂಡ್ ಮ್ಯಾಟ್ರಿಕ್ಸ್) ಕಾರ್ಯಾಗಾರದಲ್ಲಿ ಎಲ್ಲಾ ವಿದ್ಯಾರ್ಥಿಗಳು ಹಾಗೂ ಗೂಗಲ್ ಜೆಮಿನಿ 2.0 ಮತ್ತು ಎಐ ಸ್ಟುಡಿಯೋ ಬಳಸಿ ಪ್ರಾಯೋಗಿಕ ತರಬೇತಿ ನೀಡಿದರು.

 

Share This Article
error: Content is protected !!
";