ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಅರವಿಂದ್ ಕೇಜ್ರಿವಾಲ್

News Desk

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಅರವಿಂದ್ ಕೇಜ್ರಿವಾಲ್
ಚಂದ್ರವಳ್ಳಿ ನ್ಯೂಸ್, ಹೊಸದಿಲ್ಲಿ :
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಘೋಷಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ರಾಜೀನಾಮೆ ಸಲ್ಲಿಸಿ, ಚುನಾವಣೆಗೆ ಹೋಗುವುದಾಗಿ ಅವರು ತಿಳಿಸಿದ್ದಾರೆ.

ದೆಹಲಿ ಸರ್ಕಾರದ ಅಬಕಾರಿ ನೀತಿ ಪರಿಷ್ಕರಣೆ ಕೇಸ್ ನಲ್ಲಿ ಅವರು ಮಾರ್ಚ್ ತಿಂಗಳಲ್ಲಿ ಬಂಧನಕ್ಕೊಳಗಾಗಿದ್ದರು. ಇದೇ ವಾರ ಅವರು ಜಾಮೀನಿನ ಮೇರೆಗೆ ದೆಹಲಿ ಜೈಲಿನಿಂದ ಹೊರಬಂದಿದ್ದರು.ಜಾಮೀನಿನ ಮೇರೆಗೆ ಹೊರಬಂದ ಕೂಡಲೇ ಅವರು ರಾಜೀನಾಮೆ ಘೋಷಿಸಿರುವುದು ಆಪ್ ಕಾರ್ಯಕರ್ತರು ಸೇರಿದಂತೆ ಹಲವರನ್ನು ದಿಗ್ರ್ಭಮೆಗೊಳಿಸಿದೆ.

ಆದರೆ, ಕೇಜ್ರಿವಾಲ್ ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ‘ಜನತಾ ನ್ಯಾಯಾಲಯದ ತೀರ್ಪು ಬೇಕು’ದೆಹಲಿ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿಯಿವೆ. ಅಷ್ಟರಲ್ಲಾಗಲೇ ನನ್ನ ರಾಜಕೀಯ ಜೀವನವನ್ನು ಹತ್ತಿಕುವ ಕೆಲಸವನ್ನು ಬಿಜೆಪಿ ಮಾಡಿದೆ. ನನಗೆ ಕಾನೂನಿನ ನ್ಯಾಯಾಲಯದಲ್ಲಿ ಈಗಾಗಲೇ ನ್ಯಾಯ ಸಿಕ್ಕಿದೆ. ಅದರ ಜೊತೆಗೆ ನನಗೆ ಜನತಾ ನ್ಯಾಯಾಲಯದಲ್ಲಿ ತೀರ್ಪು ಬೇಕಿದೆ. ಅವರು ನಾನು ನಿರಪರಾಧಿಯೆಂದು ಎನ್ನಿಸಿ, ನಾನು ಪ್ರಾಮಾಣಿಕ ಎಂದು ತೀರ್ಮಾನಿಸಿದರೆ,

ಅದಕ್ಕಿಂತ ದೊಡ್ಡ ಸಂತೋಷ ಬೇರೇನೂ ಇಲ್ಲ ಎಂದು ತಿಳಿಸಿದರು. ಜನರು ತಮ್ಮ ಆದೇಶ ಕೊಟ್ಟ ನಂತರವಷ್ಟೇ ನಾನು ಸಿಎಂ ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

- Advertisement -  - Advertisement -  - Advertisement - 
Share This Article
error: Content is protected !!
";