ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರದ ವಾಸವಿ ಪಬ್ಲಿಕ್ ಶಾಲೆ ಸಭಾಂಗಣದಲ್ಲಿ ಕರ್ನಾಟಕ ಆರ್ಯವೈಶ್ಯ ಮಹಾಸಭಾ ರಾಜ್ಯ ಆರ್ಯವೈಶ್ಯ ವಿದ್ಯಾಸಂಸ್ಥೆಗಳ ಒಕ್ಕೂಟದಿಂದ ವೈಶ್ಯ ಸಮುದಾಯದ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿ ಮತ್ತು ಶಿಕ್ಷಕರುಗಳಿಗೆ ಶೈಕ್ಷಣಿಕ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ರಾಜ್ಯ ಆರ್ಯವೈಶ್ಯ ವಿದ್ಯಾ ಸಂಸ್ಥೆ ಒಕ್ಕೂಟದ ಅಧ್ಯಕ ಕೆ.ವಿ. ಅಮರೇಶ್ ಅವರು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ಆರ್ಯವೈಶ್ಯ ಮಹಾಸಭಾದ ರಾಜ್ಯಾಧ್ಯಕ್ಷ ಆರ್‌ಪಿ ರವಿಶಂಕರ್ ಅವರು ವೈಶ್ಯ ಸಮುದಾಯದ ಅಂಗ ಸಂಸ್ಥೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು ಅನೇಕ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮುದಾಯದ ಬೆಳವಣಿಗೆಗೆ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಎಂದು ತಿಳಿಸಿದರು.
ಆರ್ಯವೈಶ್ಯ ಮಹಾಸಭಾ ಹಿಂದುಳಿದವರಿಗೆ ದಾನ ಮಾಡುತ್ತಾ ಸಂಸ್ಕಾರ ಹಾಗೂ ಧರ್ಮ ಆಚರಣೆ ಮಾಡುತ್ತಿದೆ. ಅಲ್ಲದ ಸಮಾಜ ಸೇವೆಯೊಂದಿಗೆ ಶೈಕ್ಷಣಿಕ ಸೇವೆಗೆ ತೊಡಗಿಸಿಕೊಂಡಿದೆ. ಸಮಾಜದಲ್ಲಿನ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವಂತಹ ಸದುದ್ದೇಶ ಹೊಂದಿದೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವಾ ಮನೋಭಾವದಿಂದ ರಾಜ್ಯದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಶೈಕ್ಷಣಿಕ ಸೇವೆಗೆ ಮುಂದಾಗಿದೆ ಎಂದರು.
ಶಿಕ್ಷಣ ತಜ್ಞ ಮಹೇಶ್ ಮಾಸಾಳ ಬೆಂಗಳೂರು ಇವರು ಮಾತನಾಡಿ ಶಿಕ್ಷಣದಿಂದ ಸಮಾಜ ಪರಿವರ್ತನೆ ಸಾಧ್ಯ. ಶಿಕ್ಷಣ ವ್ಯವಸ್ಥೆಗೆ ತಕ್ಕಂತೆ ಶಿಕ್ಷಕರು ಬದಲಾಗಬೇಕು. ಕಲಿಕಾ ಉಪಕರಣ, ಹೊಸ ತಂತ್ರಜ್ಞಾನದ ಬಳಕೆ ಅನಿವಾರ್ಯವಾಗಿದೆ. ಮಕ್ಕಳ ಮನಸ್ಥಿತಿಗೆ ಅನುಗುಣವಾಗಿ ಶಿಕ್ಷಣ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಆಡಳಿತ ಮಂಡಳಿ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯಗಳನ್ನು, ಕಲಿಕಾ ವಾತಾವರಣ ಕಲ್ಪಿಸಬೇಕು. ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು ಶಿಕ್ಷಣ ವ್ಯವಸ್ಥೆಗೆ ತಕ್ಕಂತೆ ಅಪ್ ಡೆಟ್ ಆಗಬೇಕು. ಶಿಕ್ಷಕರು ಕೊಠಡಿಯಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಮತ್ತು ಕಲಿಸುವಿಕೆಗೆ ಒತ್ತಡ ಶಿಕ್ಷಕರು ಕೊಠಡಿಯಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಮತ್ತು ಕಲಿಸುವಿಕೆಗೆ ಒತ್ತಡ ಇರಬಾರದು ಎಂದು ಕಿವಿ ಮಾತು ಹೇಳಿದರು.
ಕಲಿಕೆಗೆ ನೂತನ ಆವಿಷ್ಕಾರಗಳ ಬಳಕೆ ಮಾಡುವುದು ಅಗತ್ಯವಿದೆ. ಮಕ್ಕಳ ಕಲಿಕೆಯ ಮೇಲೆ ಬಹು ದೊಡ್ಡ ನಿರೀಕ್ಷೆ ಪೋಷಕರದಾಗಿದೆ. ಪೋಷಕರು ಮಕ್ಕಳ ಕಲಿಕೆ ಬಗ್ಗೆ ಬಹು ದೊಡ್ಡ ನಿರೀಕ್ಷೆ ಇಟ್ಟಿರುತ್ತಾರೆ. ಹೊಸ ಜಗತ್ತಿನಲ್ಲಿ ಶಿಕ್ಷಕರ ಪಾತ್ರ. ಹೊಣೆಗಾರಿಕೆ ಅತ್ಯಂತ ಮಹತ್ವದ್ದಾಗಿದೆ. ಆದ್ದರಿಂದ ಹೆಚ್ಚು ಅಧ್ಯಯನ ಶೀಲರಾಗಿ ಕಲಿತು ಕಲಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಆರ್ಯವೈಶ್ಯ ಮಹಾಸಭಾದ ಕಾರ್ಯನಿರ್ವಾಹಕ ವರದರಾಜ್, ಆರ್ಯವೈಶ್ಯ ಮಹಾಸಭಾದ ಉಪಾಧ್ಯಕ್ಷ ದೊಡ್ಡಯ್ಯ, ಹಿರಿಯೂರು ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಕೆ ವಿ ಸತ್ಯನಾರಾಯಣ ಶೆಟ್ಟಿ, ಬಾಣವರದ ಶ್ರೀಕಾಂತ್, ಎಮ್ಮಿಗನೂರಿನ ಜಡೇಜಾ, ಕೆಜಿ.ಶ್ರೀಧರ್, ಆರ್ ಪ್ರಕಾಶ್ ಕುಮಾರ್, ಪಿ. ವಿ. ನಾಗರಾಜ್, ಕೋಆರ್ಡಿನೇಟರ್ ರಮ್ಯಾ ಮುಂತಾದವರು ಉಪಸ್ಥಿತರಿದ್ದರು.
ರಾಜ್ಯಾದ್ಯಂತ 30 ವಿದ್ಯಾ ಸಂಸ್ಥೆಗಳಿಂದ ನೂರಕ್ಕೂ ಹೆಚ್ಚು ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು ಶಿಕ್ಷಕರು, ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

