ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸ್ವಾಭಿಮಾನ ಹಾಗೂ ನೆಮ್ಮದಿ ಬದುಕು ಕೃಷಿ ಕಾಯಕ. ಇಂತಹ ಉತ್ತಮ ಬದುಕಿನಿಂದ ರೈತನೊಬ್ಬ ಕೃಷಿ ಚಟುವಟಿಕೆಯನ್ನು ಬಿಟ್ಟು ಹಿಂದೆ ಸರಿದರೆ ಅದರ ಹಿಂದಿನ ಕಷ್ಟಕಾರ್ಪುಣ್ಯದ ಬಗ್ಗೆ ಈಗಿನ ಪ್ರಭುತ್ವದ ಆಡಳಿತ ಯೊಚನೆ ಮಾಡಲೇಬೇಕು.
ರೈತಾಪಿ ವರ್ಗ ಕೃಷಿ ಬದುಕಿನಿಂದ ಸುಮ್ಮನೆ ಹಿಂದಕ್ಕೆ ಸರಿಯುವುದಿಲ್ಲ ಕಷ್ಟಕಾರ್ಪುಣ್ಯದ ಬವಣೆಯಲ್ಲಿ ಬೆಂದು ಸಾಲದ ಸುಳಿಯಲ್ಲಿ ಸಿಲುಕಿ ಅವಮಾನ ಅನುಭವಿಸಿ ತನ್ನ ಭವಿಷ್ಯದ ಆಸೆ ಆಕಾಂಕ್ಷೆಗಳನ್ನು ತೊರೆದು ಹಿಂದೆ ಸರಿದಿರುವ ವಿಚಾರಗಳು ಸಾಕಷ್ಟು ನೋಡಿದ್ದೇವೆ ಸ್ವತಹ ನಾನು ಅನುಭವಿಸಿಯೇ ಇದ್ದೆನೆ.
40 ವರ್ಷಗಳ ಹಿಂದೆ ಕೃಷಿ ಕಾಯಕದಲ್ಲಿ ಸಂತೃಪ್ತಿ ಬದುಕನ್ನು ರೈತರು ಕಂಡಿದ್ದಾರೆ. ಆ ಹಿಂದಿನ ಕಾರಣ ಏನೆಂದರೆ ಸಕಾಲಕ್ಕೆ ಮಳೆ ಬರುತ್ತಿತ್ತು . ನೀರಾವರಿ ಬೆಳೆ ಬೆಳೆಯಲು ನೀರಿನ ವ್ಯವಸ್ಥೆ ಸಂಭ್ರುದಿ ಯಾಗಿತ್ತು .
ಬೆಳೆದ ಬೆಳೆಗೆ ತಕ್ಕ ಮಟ್ಟಿಗೆ ಉತ್ತಮ ಬೆಲೆಯು ಸಿಗುತ್ತಿತ್ತು. ಪ್ರಾಮಾಣಿಕತೆಯಿಂದ ಗೌರವಯುತವಾಗಿ ಕೆಲಸ ಸಾಗುತ್ತಿತ್ತು. ಆ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಜನರಲ್ಲಿ ನ್ಯಾಯ. ನೀತಿ. ಪ್ರಾಮಾಣಿಕತೆಯ ಪ್ರಬುದ್ಧತೆ ಬಗ್ಗೆ ಅಪಾರವಾದ ನಂಬಿಕೆ ಹಾಗೂ ಗೌರವ ಇಟ್ಟು ಕೊಂಡಿದ್ದರು.
ಹಿಂದಿನ ದಿನಮಾನದಲ್ಲಿ ರೈತರಿಗೆ ಯಾವುದೇ ಸರ್ಕಾರದ ಸೌಲಭ್ಯಗಳ ಅನುದಾನ ಸಿಗುತ್ತಿರಲಿಲ್ಲ. ರೈತರು ಸ್ವಾಭಿಮಾನದಿಂದ ವೃತ್ತಿಯನ್ನು ಗೌರವಿಸುತ್ತಿದ್ದರು ನೆಮ್ಮದಿಯ ಜೀವನ ಕಟ್ಟಿಕೊಂಡಿದ್ದರು.
ಗೌಡಿಕೆಯ ಸಾಮಾಜಿಕ ಕ್ಷೇತ್ರದ ಗೌರವದ ಬದುಕನ್ನು ನಾನು ಕಂಡಿದ್ದೇನೆ ಅನುಭವಿಸಿದ್ದೇನೆ. ಇದು ಅನುಭವದ ಆಧಾರದ ಪ್ರಾತಿನಿಧ್ಯ.
ಕಿರು ಲೇಖನ-ರಘು ಗೌಡ9916101265