ಆರೋಗ್ಯಕರ ಜೀವನಕ್ಕೆ ಸಮತೋಲನ ಆಹಾರ ಅವಶ್ಯಕ-ಅಶೋಕ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಬುದ್ಧನಗರ ಆರೋಗ್ಯ ಕೇಂದ್ರ ವ್ಯಾಪ್ತಿಯ ಕಾಮನಬಾವಿ A B C ಅಂಗನವಾಡಿಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಸಿಎಂಡಿ ವಿಭಾಗದ ಅಶೋಕ ಎಸ್ ಮಾತನಾಡಿ ಪೌಷ್ಟಿಕ ಆಹಾರ, ಸಮತೋಲನ ಆಹಾರದ ಬಗ್ಗೆ ಆರೋಗ್ಯ ಶಿಕ್ಷಣ ನೀಡಿದರು.

- Advertisement - 

ಸಮತೋಲಿತ ಆಹಾರವು ಆರೋಗ್ಯಕರ ಜೀವನಕ್ಕೆ ಅವಶ್ಯಕವಾಗಿದೆ. ಇದು ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುತ್ತದೆ, ಇದರಿಂದಾಗಿ ಉತ್ತಮ ಆರೋಗ್ಯ, ಶಕ್ತಿ ಮತ್ತು ದೀರ್ಘಾಯುಷ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ಸಮತೋಲಿತ ಆಹಾರವು ಕಾರ್ಬೋಹೈಡ್ರೇಟ್, ಪ್ರೋಟೀನ್, ಕೊಬ್ಬು, ಜೀವಸತ್ವಗಳು, ಖನಿಜಗಳು ಮತ್ತು ನೀರಿನ ಸರಿಯಾದ ಪ್ರಮಾಣವನ್ನು ಒಳಗೊಂಡಿರುತ್ತದೆ, ಇವೆಲ್ಲವೂ ದೇಹದ ಸರಿಯಾದ ಕಾರ್ಯನಿರ್ವಹಣೆಗೆ ಅತ್ಯಗತ್ಯ ಎಂದು ಅಶೋಕ್ ಹೇಳಿದರು.

- Advertisement - 

ಸಮತೋಲಿತ ಆಹಾರವು ಒತ್ತಡ ಕಡಿಮೆ ಮಾಡಲು ಮತ್ತು ಮಾನಸಿಕ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ. ಧಾನ್ಯಗಳು(ಅಕ್ಕಿ, ಗೋಧಿ, ಇತ್ಯಾದಿ), ತರಕಾರಿಗಳು ಮತ್ತು ಹಣ್ಣುಗಳು, ಪ್ರೋಟೀನ್ ಮೂಲಗಳು (ಬೀನ್ಸ್, ದ್ವಿದಳ ಧಾನ್ಯಗಳು, ಮಾಂಸ, ಮೀನು, ಮೊಟ್ಟೆಗಳು, ಇತ್ಯಾದಿ), ಡೈರಿ ಉತ್ಪನ್ನಗಳು (ಹಾಲು, ಮೊಸರು, ಇತ್ಯಾದಿ), ಆರೋಗ್ಯಕರ ಕೊಬ್ಬುಗಳು (ನಟ್ಸ್, ಬೀಜಗಳು, ಇತ್ಯಾದಿ) ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಅನುಕೂಲವಾಗಲಿದೆ ಎಂದರು.

ಸಮತೋಲಿತ ಆಹಾರವು ವ್ಯಕ್ತಿಯ ವಯಸ್ಸು, ಲಿಂಗ, ದೈಹಿಕ ಚಟುವಟಿಕೆ ಮತ್ತು ಆರೋಗ್ಯ ಸ್ಥಿತಿಯನ್ನು ಅವಲಂಬಿಸಿ ಬದಲಾಗಬಹುದು, ಆದರೆ ಮೇಲೆ ತಿಳಿಸಿದ ಆಹಾರ ಗುಂಪುಗಳನ್ನು ಒಳಗೊಂಡಿರುವುದು ಮುಖ್ಯ ಎಂದು ಅಶೋಕ್ ಹೇಳಿದರು.

ಜಿಲ್ಲಾ ಸಿಎಂಡಿ ವಿಭಾಗದ ಯೋಗೇಶಪ್ಪ ಎಸ್ ಮಾತನಾಡಿ ಡೆಂಗ್ಯೂ ವಿರೋಧಿ ಮಾಸಚರಣೆ ಪ್ರಯುಕ್ತ ಡೆಂಗ್ಯೂ ಜ್ವರ ಹರಡುವ ವಿಧಾನ, ಜ್ವರದ ಲಕ್ಷಣಗಳು, ತಡೆಗಟ್ಟುವ ಕ್ರಮಗಳು ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಕ್ಕಳಿಗೆ ತಿಳಿಸಿದರು.

ಆರೋಗ್ಯ ಸುರಕ್ಷಾ ಅಧಿಕಾರಿ ನಾಗರತ್ನ ಮಾತನಾಡಿ ಆರು ತಿಂಗಳವರೆಗೆ ತಾಯಿ ಎದೆಹಾಲನ್ನು ಮಾತ್ರ ಕೊಡಬೇಕು. ಆರು ತಿಂಗಳ ನಂತರ ತಾಯಿ ಎದೆ ಹಾಲಿನ ಜೊತೆಗೆ ಪೂರಕ ಆಹಾರವನ್ನು ನೀಡಬೇಕು ಎಂದು ತಿಳಿಸಿದರು.
ಬುದ್ಧ ನಗರದ ಪಿಎಚ್ ಸಿಓ ಸುರಕ್ಷಣಾಧಿಕಾರಿ ಏಕಾಂತಮ್ಮ ಸ್ವಚ್ಛತೆ ಹಾಗೂ ವೈಯಕ್ತಿಕ ಸ್ವಚ್ಛತೆ ಬಗ್ಗೆ ತಿಳಿಸಿದರು.
ಆಶಾ ಕಾರ್ಯಕರ್ತರಾದ ಸುಜಾತ, ಅನ್ನಪೂರ್ಣ, ಅಂಗನವಾಡಿ ಕಾರ್ಯಕರ್ತರಾದ ರಾಧಮ್ಮ, ಶೈಲಜಾ, ರೂಪಾ, ಕವಿತಾ ಹಾಜರಾಗಿದ್ದರು.

 

 

 

Share This Article
error: Content is protected !!
";