ಸಿಎಂ ಹಾಗೂ ಡಿಸಿಎಂ ವಿರುದ್ಧ ಹರಿಹಾಯ್ದ ಅಶೋಕ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರೇ, ತಾವಿಬ್ಬರೂ ದೆಹಲಿಯಿಂದ ಇಂದೇ ರಾಜ್ಯಕ್ಕೆ ವಾಪಸ್ಸು ಪ್ರಯಾಣ ಬೆಳೆಸುತ್ತಿದ್ದೀರಾ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.

ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಬೇಕಿದ್ದ ಮತಗಳ್ಳತನ ನಾಟಕ ಕ್ಯಾನ್ಸಲ್ ಆಯಿತಾ? ಯಾಕೆ ಕೇಳುತ್ತಿದ್ದೇನೆ ಅಂದರೆ, ನಿಮ್ಮ ಪರಮೋಚ್ಛ ನಾಯಕ ರಾಹುಲ್ ಗಾಂಧಿ ಅವರು ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ – UDF ಮೈತ್ರಿಕೂಟದ ಗೆಲುವಿನ ಸಂಭ್ರಮಾಚರಣೆ ಆಚರಿಸುತ್ತಿದ್ದಾರಲ್ಲ, ಹಾಗಾಗಿ ಮತಯಂತ್ರ ಸರಿ ಹೋಯಿತೇನೋ ಅಂತ, ಚುನಾವಣಾ ಆಯೋಗ ಸರಿ ಹೋಯಿತೇನೋ ಅಂತ? ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

- Advertisement - 

ಇಷ್ಟಕ್ಕೂ ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆ ನಡೆದಿದ್ದು ಮತಯಂತ್ರದಲ್ಲೋ ಅಥವಾ ಮಾತಪೆಟ್ಟಿಗೆಯಲ್ಲೋ? ಕೇರಳದಲ್ಲಿ ಚುನಾವಣೆ ಗೆಲುವಿನ ಸಂಭ್ರಮಾಚರಣೆ, ದೆಹಲಿಯಲ್ಲಿ ಮತಗಳ್ಳತನ ಎಂಬ ನಾಟಕ.

ನಾಚಿಕೆಯಾಗಬೇಕು ಕಾಂಗ್ರೆಸ್ ಪಕ್ಷದ ಆಷಾಡಭೂತಿತನಕ್ಕೆ, ಬೂಟಾಟಿಕೆಗೆ. ಸೋತಾಗ ಇವಿಎಂ, ಚುನಾವಣಾ ಆಯೋಗವನ್ನ ದೂಷಿಸುವುದು, ಗೆದ್ದಾಗ ಸಂಭ್ರಮ ಪಡುವುದು. ಭಾರತದ ಮತದಾರರು ಈ ಕಪಟ ನಾಟಕವನ್ನ ಎಂದಿಗೂ ಕ್ಷಮಿಸುವುದಿಲ್ಲ ಎಂದು ಅಶೋಕ್ ಎಚ್ಚರಿಸಿದ್ದಾರೆ.

- Advertisement - 

 

 

Share This Article
error: Content is protected !!
";