ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಅಶ್ವಥಪ್ಪ ಆಯ್ಕೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತುರುವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ
  ಅಧ್ಯಕ್ಷರಾಗಿ ದೊಡ್ಡ ತಿಮ್ಮನಹಳ್ಳಿ ಗ್ರಾಮದ ಎಂ.ಅಶ್ವತಪ್ಪ ಸ್ವಾಮಿ ಉಪಾಧ್ಯಕ್ಷ ಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಆಯ್ಕೆಯಾದ ಅಧ್ಯಕ್ಷರನ್ನು ಗಣ್ಯರು ಅಭಿನಂದಿಸಿದರು.

ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ತುರುವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನವಾಗಿ ಅವಿರೋಧವಾಗಿ ಅಯ್ಕೆಯಾದ ಹಿನ್ನೆಯಲ್ಲಿ ಕೆಪಿಪಿಸಿ ಸದಸ್ಯ ಎಸ್. ಆರ್. ಮುನಿರಾಜು ಹೂವಿನ ಹಾರ ಹಾಗಿ ಮಾತನಾಡಿ, ಹಾಲು ಉತ್ಪಾದಕರು ಹೆಚ್ಚು ಪ್ರಮಾಣದಲ್ಲಿ ಹಾಲು ಸರಬರಾಜು ಮಾಡಬೇಕು,

- Advertisement - 

ರೈತರ ಸಂಘದಿಂದ ಅನೇಕ ಸೌಲಭ್ಯ ಪಡೆದುಕೊಂಡು ಹಸುಗಳನ್ನು ಸಾಕಬೇಕಾಗಿದೆ, ಉತ್ತಮ ತಳಿಯ ರಾಸುಗಳನ್ನು ಸಾಕುವ ಜೊತೆಗೆ ಉತ್ತಮವಾಗಿ ನಿರ್ವಹಣೆ ಮಾಡಬೇಕು, ಮುಂಜಾನೆಯಲ್ಲಿ ಹಾಲು ಕರೆಯುವುದರಿಂದ ಉತ್ತಮ ಆರೋಗ್ಯ ವೃದ್ಧಿಸುತ್ತದೆ. ಸಂಘಕ್ಕೆ ಹೆಚ್ಚು ಹೆಚ್ಚು ಹಾಲು ನೀಡುವುದರಿಂದ ಸಂಘ ಬೆಳೆಯುತ್ತದೆ ಎಂದು ಹೇಳಿದರು. 

 ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ ಎಂ.ಅಶ್ವತಪ್ಪ ಸ್ವಾಮಿ ಮಾತನಾಡಿ, ಈ ಸಂಘವನ್ನು ಕಟ್ಟಲು 20 ವರ್ಷಗಳಿಂದ ನಾನು ಮತ್ತು ಸಂಘದ ಎಲ್ಲಾ ಅಧ್ಯಕ್ಷರು ಉಪಾಧ್ಯಕ್ಷರು ಹಾಗು ಊರಿನ ಗ್ರಾಮಸ್ಥರು ಸದಸ್ಯರು ಪ್ರಯತ್ನಪಟ್ಟಿದ್ದು, ನಾನು ಇದೇ ಗ್ರಾಮದಲ್ಲಿ ಓದಿ ಬೆಳೆದಿದ್ದೇನೆ ನನ್ನ ಎಲ್ಲಾ ಪರಿಶ್ರಮವನ್ನು ಸಂಘಕ್ಕೆ ಮೀಸಲಿಟ್ಟು ದುಡಿಯುತ್ತೇನೆ ಹಾಗೂ  ಬಮೂಲ್ ಡೇರಿಯಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ರೈತರಿಗೆ ಸಿಗುವಂತೆ ಮಾಡುತ್ತೇನೆ ಎಂದು ಹೇಳಿದರು

- Advertisement - 

ಈ ಸಂದರ್ಭದಲ್ಲಿ  ಸಂಘದ ಮಾಜಿ  ಅಧ್ಯಕ್ಷ ಕಾಂತರಾಜ್, ಎಸ್.ಎಸ್.ಘಾಟಿ ಸದಸ್ಯ ವಾಸುದೇವ್, ನಿರ್ದೇಶಕರಾದ ರಾಜಣ್ಣ, ಲಕ್ಷ್ಮಮ್ಮ, ನಾರಾಯಣಮ್ಮ, ಮಲ್ಲಯ್ಯ, ಕೃಷ್ಣಪ್ಪ ಹಾಗೂ ಮುಖಂಡರುಗಳು ಹಾಜರಿದ್ದರು.

 

 

Share This Article
error: Content is protected !!
";